• Slide
  Slide
  Slide
  previous arrow
  next arrow
 • ಸಂಗೀತಾಭಿಮಾನಿಗಳ ಮನಸೂರೆಗೊಂಡ ಸೋದರಿಯರ ಗಾಯನ

  300x250 AD

  ಅಂಕೋಲಾ: ಇಲ್ಲಿಯ ಕಾಕರಮಠದ ವಿಠ್ಠಲ ಸದಾಶಿವ ದೇವಸ್ಥಾನದ ಸಭಾಭವನದಲ್ಲಿ ನಡೆದ ಶ್ರಾವಣ ಮಾಸದ ವಿಶೇಷ ಸಂಗೀತ ಕಾರ್ಯಕ್ರಮದಲ್ಲಿ ‘ಎದೆತುಂಬಿ ಹಾಡುವೆನು’ ಖ್ಯಾತಿಯ ಅಂಕೋಲಾದ ಸಹೋದರಿಯರಾದ ದರ್ಶಿನಿ ಶೆಟ್ಟಿ- ವರ್ಷಿಣಿಯವರು ಹಾಡಿ ಶೆಟ್ಟಿ ನೆರೆದ ಸಂಗೀತಾಭಿಮಾನಿಗಳ ಮನಸೂರೆಗೊಂಡರು.
  ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಪುರಸಭಾ ಅಧ್ಯಕ್ಷೆ ಶಾಂತಲಾ ನಾಡಕರ್ಣಿ, ದರ್ಶಿನಿ-ವರ್ಷಿಣಿ ಸಹೋದರಿಯರ ಕೀರ್ತಿ ರಾಷ್ಟ್ರದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಗಲಿ ಎಂದು ಹಾರೈಸಿದರು. ಅಧ್ಯಕ್ಷತೆಯನ್ನು ಲಾಯನ್ಸ್ ಕ್ಲಬ್ ಅಂಕೋಲಾದ ಅಧ್ಯಕ್ಷ ಗಣೇಶ ಶೆಟ್ಟಿಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕ.ಸಾ.ಪ ತಾಲೂಕು ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಕಾರ್ಯಕ್ರಮದ ಔಚಿತ್ಯತೆಯ ಕುರಿತು ಮಾತನಾಡಿದರು.
  ನಾಟಿ ವೈದ್ಯ ಹನುಮಂತ ಗೌಡ ಬೆಳಂಬಾರg ಮತ್ತು ಶಾರದಾಂಬಾ ಮಹಿಳಾ ಮಂಡಳದ ಗೌರವಾಧ್ಯಕ್ಷೆ ಶಾಲಿನಿ ಕಾಳೆ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಕಲಾವಿದೆಯರಾದ ದರ್ಶಿನಿ- ವರ್ಷಿಣಿ ಸಹೋದರಿಯರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಆರಂಭವಾದ ಸಂಗೀತ ಕಾರ್ಯಕ್ರಮದಲ್ಲಿ ಯವರು ಒಂದುವರೆ ಘಂಟೆಗಳ ಕಾಲ ಈ ಸಹೋದರಿಯರು ಭಕ್ತಿ- ಭಾವ- ಜಾನಪದ ಗೀತೆಗಳನ್ನು ಮನತುಂಬಿ ಹಾಡಿ ಕೇಳುಗರನ್ನು ಮಂತ್ರಮುಗ್ಧಗೊಳಿಸಿದರು. ಕೀಬೋರ್ಡನಲ್ಲಿ ಶಿವರಾಮ ಭಾಗ್ವತ್ ಕನಕನಹಳ್ಳಿ, ತಬಲಾದಲ್ಲಿ ಮಧು ಜಿ ಕುಡಾಳಕರ್. ಅಂಕೋಲಾ, ರಿದಮ್ ಪ್ಯಾಡ್‌ನಲ್ಲಿ ಸಾಂತೋಲಿನ್ ಹೊನ್ನಾವರರವರು ಸಹಕರಿಸಿದರು.
  ಕಾರ್ಯಕ್ರಮವನ್ನು ಸಂಗಮ ಸೇವಾಸಂಸ್ಥೆ ಅಂಕೋಲಾ (ಹೊನ್ನಾವರ) ರವರು ಸಂಘಟಿಸಿದ್ದು, ಸಂಸ್ಥೆಯ ಅಧ್ಯಕ್ಷರಾದ ರವೀಂದ್ರ ಎನ್.ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸರ್ವರನ್ನೂ ಸ್ವಾಗತಿಸಿದರು. ಪ್ರಶಾಂತ ಶೆಟ್ಟಿ ಕೊನೆಯಲ್ಲಿ ಸರ್ವರನ್ನೂ ವಂದಿಸಿದರು. ತಿಮ್ಮಣ್ಣ ಭಟ್ ಕಾರ್ಯಕ್ರಮ ನಿರೂಪಿಸಿದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top