Slide
Slide
Slide
previous arrow
next arrow

ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ವಿಭಾಗದಲ್ಲಿ ಸಂಗೀತಾಗೆ ಪ್ರಥಮ ಸ್ಥಾನ

300x250 AD

ಕಾರವಾರ: ಪುಣೆಯ ಗಾನವರ್ಧನ ಟ್ರಸ್ಟ್ ಹಾಗೂ ಸ್ವರಮಯೀ ಗುರುಕುಲ ಸಹಯೋಗದ್ಲ್ಫ್ಲಿ ಇತ್ತೀಚಿಗೆ ಆಯೋಜಿದ್ದ ‘ಅಂತಾರಾಷ್ಟ್ರೀಯ ಸ್ವರಪ್ರಭಾ ಸಂಗೀತ ಸ್ಪರ್ಧೆ-೨೦೨೨” ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ವಿಭಾಗದಲ್ಲಿ ಜಿಲ್ಲೆಯ ಮಂಜುಗುಣಿ ಸಮೀಪದ ಗಿಳಿಗುಂಡಿಯ ಕುಮಾರಿ ಸಂಗೀತಾ ಹೆಗಡೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಪುಣೆಯಲ್ಲಿ ನಡೆದ ಸಮಾರಂಭವೊಂದರಲ್ಲಿ ಖ್ಯಾತ ಗಾಯಕಿ “ಪದ್ಮವಿಭೂಷಣ ಡಾ. ಪ್ರಭಾ ಅತ್ರೆ ಹಸ್ತದಿಂದ ಪುರಸ್ಕಾರವನ್ನು ಪಡೆಯುವ ಸೌಭಾಗ್ಯ ಸಂಗೀತಾ ಹೆಗಡೆಗೆ ದೊರಕಿದೆ.

ಕೊಲ್ಕತ್ತಾದ ಪ್ರಸಿದ್ಧ ಗಾಯಕಿ ‘ವಿದುಷಿ ಕೌಶಿಕಿ ಚಕ್ರವರ್ತಿ’, ಇವರು ಉಸ್ತಾದ್ ಬಡೆ ಗುಲಾಂ ಅಲಿ ಖಾನ್ ಹಾಗೂ ಪಂ. ಜ್ಞಾನಪ್ರಕಾಶ್ ಘೋಷ್ ಇವರ ಹೆಸರಿನಲ್ಲಿ ಏರ್ಪಡಿಸಿದ್ದ ‘ಗುರುಪ್ರಣಾಮ್-೨೦೨೨’ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಸ್ಪರ್ಧೆಯ, ಖ್ಯಾಲ್ ವಿಭಾಗದಲ್ಲಿ ಸಂಗೀತಾ ಹೆಗಡೆ ಪ್ರಥಮ ಸ್ಥಾನವನ್ನು ಪಡೆದು, ಆಯೋಜಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇತ್ತೀಚೆಗೆ ಯುವ ಪ್ರತಿಭಾವಂತ ಕಲಾವಿದರಿಗೆ ನೀಡುವ ‘ಸಿ.ಸಿ.ಆರ್.ಟಿ ರಾಷ್ಟೀಯ ಯುವ ಪುರಸ್ಕಾರ’ ಕ್ಕೆ ಭಾಜನರಾಗಿದ್ದಾರೆ.

300x250 AD

ಸಂಗೀತಾ ಹೆಗಡೆ ತಮ್ಮ ಪ್ರಾಥಮಿಕ ಸಂಗೀತ ಅಭ್ಯಾಸವನ್ನು ಪಂ. ಚಂದ್ರಶೇಖರ ಪುರಾಣಿಕಮಠ ಇವರಲ್ಲಿ ಮಾಡಿದ್ದು, ನಂತರದಲ್ಲಿ ವಿದುಷಿ ಉಮಾ ಹೆಗಡೆ ಧಾರವಾಡ ಇವರಲ್ಲಿ ಮುಂದುವರೆಸಿದ್ದಾರೆ.

Share This
300x250 AD
300x250 AD
300x250 AD
Back to top