• first
  second
  third
  previous arrow
  next arrow
 • ಶಿರಸಿ-ಸಿದ್ಧಾಪುರ ಕ್ಷೇತ್ರಕ್ಕೆ ಪ್ರಬಲ ಆಕಾಂಕ್ಷಿ ಎಂದ ಕೆ ಜಿ ನಾಯ್ಕ ಹಣಜೀಬೈಲ್

  300x250 AD

  ಸಿದ್ದಾಪುರ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶಿರಸಿ-ಸಿದ್ದಾಪುರ ಕ್ಷೇತ್ರದಿಂದ ತಾನು ಪ್ರಬಲ ಆಕಾಂಕ್ಷಿ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ, ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ ಜಿ ನಾಯ್ಕ ಹಣಜಿಬೈಲ್ ಹೇಳಿದ್ದಾರೆ.

  ಅವರು ಮಂಗಳವಾರ ಸಿದ್ದಾಪುರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು. ಸೋಮವಾರ ಘೋಷಣೆಯಾದ ನಿಗಮ ಮಂಡಳಿ ನೇಮಕಾತಿಯಲ್ಲಿ ನನ್ನ ಹೆಸರು ವರಿಷ್ಠರ ಗಮನದಲ್ಲಿದ್ದರೂ ಸಹ ಕೆಲವು ಕಾಣದ ಕೈಗಳ ಕಾರಣದಿಂದ ಸಿಕ್ಕಿಲ್ಲ. ಜೊತೆಗೆ ಈ ಹಿಂದಿನ ಪರಿಷತ್ ಚುನಾವಣೆಯಲ್ಲಿಯೂ ಸಹ ನನ್ನನ್ನು ಪರಿಗಣಿಸಿಲ್ಲ. ಕಳೆದ 40 ವರ್ಷಗಳಿಂದ ಪಕ್ಷಕ್ಕಾಗಿ ಹೋರಾಟ, ಸಂಘಟನೆ ಮಾಡಿದ್ದೇನೆ. ಕ್ಷೇತ್ರದಲ್ಲಿ ಹಿಂದುಳಿದ ವರ್ಗದ ಮತದಾರರ ಸಂಖ್ಯೆಯೂ ಹೆಚ್ಚಿದೆ. ಈ ಹಿನ್ನಲೆಯಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಪ್ರಬಲ ಆಕಾಂಕ್ಷಿ ಎಂದು ಅವರು ಹೇಳಿದರು.

  300x250 AD

  ನಿಗಮ ಮಂಡಳಿಯಲ್ಲಿ ಗೋವಿಂದ ನಾಯ್ಕ ಭಟ್ಕಳಗೆ ಅವಕಾಶ ಸಿಕ್ಕಿದ್ದು ಸಂತಸದ ವಿಚಾರವಾಗಿದೆ. ಅವರ ಆಯ್ಕೆ ಯೋಗ್ಯವಾಗಿದೆ ಎಂದರು. ಕೆ ಜಿ ನಾಯ್ಕ ತಾನೂ ಸಹ ಪ್ರಬಲ ಅಕಾಂಕ್ಷಿ ಎನ್ನುವ ಮೂಲಕ ಹಾಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಟಾಂಗ್ ನೀಡಿದ್ದು, ಮುಂದೆ ಯಾವ ರೀತಿಯಲ್ಲಿ ರಾಜಕೀಯ ಬದಲಾವಣೆಯಾಗುತ್ತದೆ ಎಂದು ಕಾದುನೋಡಬೇಕಿದೆ.

  Share This
  300x250 AD
  300x250 AD
  300x250 AD
  Back to top