Slide
Slide
Slide
previous arrow
next arrow

ಭೈರುಂಭೆಯಲ್ಲಿ ಹಿರಣ್ಯಾಕ್ಷ ವಧೆ ಪ್ರಸಂಗ ಪ್ರದರ್ಶನ ನಾಳೆ

300x250 AD

ಶಿರಸಿ: ಶ್ರೀಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಇವರಿಂದ, ಭೈರುಂಬೆ ಗೆಳೆಯರ ಬಳಗದ ಸಹಯೋಗದಲ್ಲಿ, ಅನ್ನಪೂರ್ಣ ಹೆಗಡೆ ಅಮೆರಿಕಾ ಮತ್ತು ಪ್ರವೀಣ ಹೆಗಡೆ ಅಮೆರಿಕಾ ಪ್ರಾಯೋಜಕ್ವದಲ್ಲಿ ನೂತನ ಯಕ್ಷಗಾನ ಪ್ರಸಂಗ ಹಿರಣ್ಯಾಕ್ಷ ವಧೆ (ರಚನೆ: ಬಲಿಪ ನಾರಾಯಣ ಭಾಗವತ) ಜು.೧೧ರ ಸಂಜೆ ೭ರಿಂದ ಭೈರುಂಬೆಯ ಹುಳಗೋಳ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಪ್ರದರ್ಶನಗೊಳ್ಳಲಿದೆ.

ಹಿಮ್ಮೆಳದಲ್ಲಿ ಭಾಗವತರಾಗಿ ಅನಂತ ಹೆಗಡೆ ದಂತಳಿಕೆ, ಮದ್ದಲೆ ನರಸಿಂಹ ಹೆಗಡೆ ಮೂರೂರು, ಚಂಡೆ ಗಜಾನನ ಹೆಗಡೆ ಮೂರೂರು, ಮುಮ್ಮೇಳದಲ್ಲಿ ಶಿವಾನಂದ ಹೆಗಡೆ ಕೆರೆಮನೆ, ತಿಮ್ಮಪ್ಪ ಹೆಗಡೆ ಶಿರಳಗಿ, ಈಶ್ವರ ಭಟ್ಟ ಹಂಸಳ್ಳಿ, ವಿಘ್ನೇಶ್ವರ ಭಟ್ಟ ಹಾವಗೋಡಿ, ಶ್ರೀಧರ ಹೆಗಡೆ ಕೆರೆಮನೆ, ಚಂದ್ರಶೇಖರ ಎನ್., ಕೃಷ್ಣ ಮರಾಠಿ, ವಿನಾಯಕ ನಾಯ್ಕ ಗುಂಡಿಬೈಲ್, ನಕುಲ ಗೌಡ ಶಿರಸಿ, ಗಣಪತಿ ಕುಣಬಿ, ಸ್ತಿçà ಪಾತ್ರದಲ್ಲಿ ಸದಾಶಿವ ಭಟ್ಟ ಮಲವಳ್ಳಿ, ಮಹಾವೀರ ಇಂದ್ರ ಜೈನ್, ಹಾಸ್ಯ ಶ್ರೀಧರ ಹೆಗಡೆ ಚಪ್ಪರಮನೆ, ಸೀತಾರಾಮ ಮೂಡಾರೆ ಇರಲಿದ್ದಾರೆ. ವೇಷಭೂಷಣ ಸಹಾಯ ಉದಯ ಶೆಟ್ಟಿ ಕರ್ಕಿ, ದಕ್ಷಿಣಾಮೂರ್ತಿ ಹೆಗಡೆ, ಧ್ವನಿ ಮತ್ತು ಬೆಳಕು ಕಾರ್ತಿಕ ಸೌಂಡ್ಸ್ ಶಿರಸಿ ನಿರ್ವಹಿಸಲಿದ್ದಾರೆ.

300x250 AD
Share This
300x250 AD
300x250 AD
300x250 AD
Back to top