
ಕುಮಟಾ: ತಾಲೂಕಿನ ಅಳಕೋಡ ಗ್ರಾಮ ಪಂಚಾಯತ ವ್ಯಾಪ್ತಿಯ ವಿವಿಧ ಗ್ರಾಮದಲ್ಲಿ ಭಾರಿ ಮಳೆಯಿಂದ ಪ್ರವಾಹ ಉಂಟಾಗಿ ಹಲವು ಬಡ ಕುಟುಂಬಗಳ ಮನೆಗೆ ನೀರು ತುಂಬಿ ಕುಸಿದು ಬಿದ್ದಿದ್ದು, ಜಿ.ಪಂ ನಿಕಟಪೂರ್ವ ಸದಸ್ಯ ಗಜಾನನ ಪೈ ಭಾನುವಾರ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಶಿರಗುಂಜಿ ಹಾಗೂ ಮಳವಳ್ಳಿ ಗ್ರಾಮದ ವಿವಿಧ ಮನೆಗಳಿಗೆ ತೆರಳಿದ ಅವರು, ಮನೆ, ಕೃಷಿ ಭೂಮಿ ಸೇರಿದಂತೆ ಹಾನಿಗೊಳಗಾದ ಕುಟುಂಬಕ್ಕೆ ಧೈರ್ಯ ತುಂಬಿದರು. ಅಲ್ಲದೇ, ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಪ್ರಮಾಣದ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಂಚಾಯತ ಉಪಾಧ್ಯಕ್ಷ ಶ್ರೀಧರ ಪೈ, ಸದಸ್ಯ ವಿನಾಯಕ ನಾಯ್ಕ ಹೆಬೈಲ್, ಪ್ರಮುಖರಾದ ಕಾರ್ತಿಕ ಭಟ್ಟ, ತುಳಸು ಗೌಡ, ಮಂಜುನಾಥ ಗೌಡ, ವೆಂಕಟಿ ಗೌಡ, ನಾಗೇಂದ್ರ ಗೌಡ ಸೇರಿದಂತೆ ಇತರರು ಇದ್ದರು.