Slide
Slide
Slide
previous arrow
next arrow

‘ಸೂರತ್’ ಮತ್ತು ‘ಉದಯಗಿರಿʼ ಯುದ್ಧನೌಕೆಗಳಿಗೆ ರಾಜನಾಥ್ ಸಿಂಗ್ ಚಾಲನೆ

300x250 AD

ಮುಂಬಯಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ಮುಂಬೈನ ಮಜಗಾಂವ್ ಡಾಕ್ಸ್‌ನಲ್ಲಿ ಸ್ಥಳೀಯವಾಗಿ ನಿರ್ಮಿಸಲಾದ ನೌಕಾಪಡೆಯ ಎರಡು ಯುದ್ಧನೌಕೆ ‘ಸೂರತ್’ ಮತ್ತು ‘ಉದಯಗಿರಿʼಗೆ ಚಾಲನೆ ನೀಡಿದರು.

ಸ್ಥಳೀಯವಾಗಿ ನಿರ್ಮಿಸಲಾದ ಎರಡು ಯುದ್ಧನೌಕೆಗಳನ್ನು ಏಕಕಾಲದಲ್ಲಿ ಚಾಲನೆ ಮಾಡಿರುವುದು ಇದೇ ಮೊದಲು ಎಂದು ಮಜಗಾಂವ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ (MDL) ಹೇಳಿದೆ. MDL ಒಂದು ಪ್ರಧಾನ ಹಡಗು ಮತ್ತು ಜಲಾಂತರ್ಗಾಮಿ ನಿರ್ಮಾಣದ ರಕ್ಷಣಾ ಸಾರ್ವಜನಿಕ ವಲಯದ ಉದ್ಯಮವಾಗಿದೆ.

300x250 AD

ಸೂರತ್’ ಪ್ರಾಜೆಕ್ಟ್ 15 ಬಿ ಡಿಸ್ಟ್ರಾಯರ್‌ಗಳ ನಾಲ್ಕನೇ ಹಡಗು. ಆಂಧ್ರಪ್ರದೇಶದ ಪರ್ವತ ಶ್ರೇಣಿಯ ಹೆಸರನ್ನು ಹೊಂದಿರುವ ‘ಉದಯಗಿರಿ’ ಪ್ರಾಜೆಕ್ಟ್ 17A ಫ್ರಿಗೇಟ್‌ಗಳ ಮೂರನೇ ಹಡಗು. ಇದು ಸುಧಾರಿತ ಸ್ಟೆಲ್ತ್ ವೈಶಿಷ್ಟ್ಯಗಳು, ಸುಧಾರಿತ ಶಸ್ತ್ರಾಸ್ತ್ರಗಳು ಮತ್ತು ಸಂವೇದಕಗಳು ಮತ್ತು ಪ್ಲಾಟ್‌ಫಾರ್ಮ್ ನಿರ್ವಹಣಾ ವ್ಯವಸ್ಥೆಗಳೊಂದಿಗೆ P17 ಫ್ರಿಗೇಟ್‌ಗಳ (ಶಿವಾಲಿಕ್ ಕ್ಲಾಸ್) ಅನುಸರಣೆಯಾಗಿದೆ ಎಂದು ನೌಕಾಪಡೆ ಹೇಳಿದೆ

Share This
300x250 AD
300x250 AD
300x250 AD
Back to top