Slide
Slide
Slide
previous arrow
next arrow

ಸೇನಾ ಉಪ ಮುಖ್ಯಸ್ಥರಾಗಿ ಕನ್ನಡಿಗ ಲೆಫ್ಟಿನಂಟ್ ಜನರಲ್ ಬಿ.ಎಸ್.ರಾಜು ನೇಮಕ

300x250 AD

ನವದೆಹಲಿ: ಲೆಫ್ಟಿನೆಂಟ್ ಜನರಲ್ ಬಿ.ಎಸ್. ರಾಜು ಅವರನ್ನು ಸೇನಾ ಸಿಬ್ಬಂದಿಯ ಮುಂದಿನ ಉಪ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಅವರು ಮೇ 1,ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.

ಪ್ರಸ್ತುತ ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅವರು ಮುಂದಿನ ಸೇನಾ ಮುಖ್ಯಸ್ಥರಾಗಿ ಏಪ್ರಿಲ್ 30 ರಂದು ಬಡ್ತಿ ಪಡೆಯಲಿದ್ದು ಅವರ ಅವಧಿ ಮೇ 1 ರಂದು ಪ್ರಾರಂಭವಾಗಲಿದೆ. ಇವರು ಕಾರ್ಪ್ಸ್ ಆಫ್ ಇಂಜಿನಿಯರ್ಸ್‌ನಿಂದ ಸೇನಾ ಮುಖ್ಯಸ್ಥರಾಗುವ ಮೊದಲ ಅಧಿಕಾರಿಯಾಗಲಿದ್ದಾರೆ.

ಲೆಫ್ಟಿನೆಂಟ್ ಜನರಲ್ ಬಿಎಸ್ ರಾಜು ಅವರು ಸೈನಿಕ ಶಾಲೆ ಬಿಜಾಪುರ ಮತ್ತು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಹಳೆಯ ವಿದ್ಯಾರ್ಥಿ. ಅವರನ್ನು ಡಿಸೆಂಬರ್ 15, 1984 ರಂದು ಜಾಟ್ ರೆಜಿಮೆಂಟ್‌ನಲ್ಲಿ ನಿಯೋಜಿಸಲಾಯಿತು.

300x250 AD

ಆರ್ಮಿ ಸ್ಟಾಫ್‌ನ ಉಪ ಮುಖ್ಯಸ್ಥರಾಗಿ ನೇಮಕಗೊಳ್ಳುವ ಮೊದಲು, ಲೆಫ್ಟಿನೆಂಟ್ ಜನರಲ್ ಬಿಎಸ್ ರಾಜು ಅವರು ಎಲ್‌ಎಸಿಯಲ್ಲಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಡೈರೆಕ್ಟರ್ ಜನರಲ್ ಮಿಲಿಟರಿ ಆಪರೇಷನ್‌ ಆಗಿ ಸೇವೆ ಸಲ್ಲಿಸುತ್ತಿದ್ದರು. ಇವರು ಕರ್ನಾಟಕ ಮೂಲದವರು ಎಂಬುದು ಕನ್ನಡಿಗರಿಗೆ ಹೆಮ್ಮೆಯ ವಿಷಯ.

Share This
300x250 AD
300x250 AD
300x250 AD
Back to top