• Slide
    Slide
    Slide
    previous arrow
    next arrow
  • ಇಸ್ಲಾಮಿಕ್ ರೀಸರ್ಚ್ ಫ಼ೌಂಡೆಷನ್‍ಗೆ ನಿಷೇಧ ಹೇರಿದ ಗೃಹಸಚಿವಾಲಯ

    300x250 AD

    ನವದೆಹಲಿ: ಮೂಲಭೂತವಾದಕ್ಕೆ ಬೆಂಬಲನೀಡುತ್ತಿರುವ ಆರೋಪದ ಮೇಲೆ ಇಸ್ಲಾಮಿಕ್ ರೀಸರ್ಚ್ ಫ಼ೌಂಡೇಷನ್‍ಗೆ ಐದು ವರ್ಷಗಳ ನಿ‍ಷೇಧ ಹೇರಿ ಗೃಹಸಚಿವಾಲಯ ಅಧಿಸೂಚನೆ ಹೊರಡಿಸಿದೆ.

    ಐಆರ್‍ಎಫ಼್ ಸಂಸ್ಥಾಪಕರು ಮೂಲಭೂತವಾದಕ್ಕೆ ಉತ್ತೇಜನ ನೀಡುತ್ತಿದ್ದಾರೆ.  ಬಲಂವತವಾಗಿ ಯುವಕರು ಇಸ್ಲಾಂ‌ಗೆ ಮತಾಂತರಗೊಳ್ಳುವುದಕ್ಕೆ ಪ್ರೇರೇಪಿಸುತ್ತಿದ್ದಾರೆ. ಅನ್ಯಮತೀಯರ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಮಾಡುವ ಮೂಲಕ ಅವಹೇಳನ ಮಾಡುತ್ತಿದ್ದಾರೆ. ಈ ಕುರಿತು ಗುಜರಾತ್,  ಕರ್ನಾಟಕ, ಕಾಶ್ಮೀರ , ಝಾರ್ಖಂಡ್, ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿ  ಐಆರ್‍ಎಫ಼್‍ ಸದಸ್ಯರ ಮತ್ತು ಸಹಾನುಭೂತಿ ಹೊಂದಿರುವವರ ಕಾನೂನು ಬಾಹಿರ ಚಟುವಟಿಕೆಗಳು ಗಮನಕ್ಕೆ ಬಂದಿವೆ. ಹಾಗಾಗಿ ಈ ಸಂಘಟನೆಗೆ ಐದು ವರ್ಷ ನಿಷೇಧ ಹೇರಲಾಗಿದೆ. ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    300x250 AD

    ಸಂಸ್ಥಾಪಕ ಝಾಕೀರ್ ನಾಯ್ಕ್ ತನ್ನ ಭಾಷಣದಲ್ಲಿ ಭಯೋತ್ಪಾದಕರನ್ನು ಹೊಗಳುವ ಮೂಲಕ ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿದ್ದಾನೆ. ಮತ್ತು ಪ್ರತಿಯೊಬ್ಬ ಮುಸ್ಲೀಮನೂ ಭಯೋತ್ಪಾದಕನಾಗಬೇಕೆಂದು ಕರೆ ನೀಡುತ್ತಿದ್ದಾನೆ ಎಂದು ಗೃಹಸಚಿವಾಲಯ ಆರೋಪಿಸಿದೆ

    Share This
    300x250 AD
    300x250 AD
    300x250 AD
    Leaderboard Ad
    Back to top