• Slide
    Slide
    Slide
    previous arrow
    next arrow
  • ಪಾಕಿಸ್ಥಾನದಲ್ಲಿ ಬಹುಮತ ಕಳೆದುಕೊಂಡ ಇಮ್ರಾನ್‌ ಖಾನ್‌ ಸರ್ಕಾರ

    300x250 AD

    ಇಸ್ಲಾಮಾಬಾದ್: ಪಾಕಿಸ್ಥಾನದಲ್ಲಿ ರಾಜಕೀಯ ಅವ್ಯವಸ್ಥೆ ಉಂಟಾಗಿದೆ. ಇಮ್ರಾನ್‌ ಖಾನ್‌ ನೇತೃತ್ವದ ಸರ್ಕಾರ ಬಹುಮತ ಕಳೆದುಕೊಂಡಿದೆ. ಆಡಳಿತರೂಢ  ತೆಹ್ರೀಕ್-ಎ-ಇನ್ಸಾಫ್ (ಪಿಟಿಐ)ನ ಮಿತ್ರ ಪಕ್ಷವಾದ ಮುತ್ತಹಿದಾ ಕ್ವಾಮಿ ಮೂವ್ಮೆಂಟ್ – ಪಾಕಿಸ್ಥಾನ (ಎಂಕ್ಯೂಎಂ-ಪಿ) ಪ್ರತಿಪಕ್ಷಗಳೊಂದಿಗೆ ಕೈಜೋಡಿಸಲು ನಿರ್ಧರಿಸಿದೆ. ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯದಲ್ಲಿ ಅದು ಪ್ರತಿಪಕ್ಷಗಳನ್ನು ಬೆಂಬಲಿಸಲಿದೆ.

    ಈ ಬೆಳವಣಿಗೆಯ ನಂತರ ಇಮ್ರಾನ್‌ ಖಾನ್ ಸರ್ಕಾರವು ಪಾಕಿಸ್ಥಾನ ಸಂಸತ್ತಿನ ಕೆಳಮನೆಯಲ್ಲಿ ತನ್ನ ಬಹುಮತವನ್ನು ಕಳೆದುಕೊಂಡಿದೆ.

    300x250 AD

    ಈಗ ಸಂಸತ್ತಿನಲ್ಲಿ ಪಾಕಿಸ್ಥಾನ ಸರ್ಕಾರ ಕೇವಲ 164 ಸದಸ್ಯರನ್ನು ಹೊಂದಿದೆ. ಪಾಕಿಸ್ತಾನಿ ರಾಷ್ಟ್ರೀಯ ಅಸೆಂಬ್ಲಿ ಒಟ್ಟು 342 ಸದಸ್ಯರ ಬಲವನ್ನು ಹೊಂದಿದೆ, ಬಹುಮತಕ್ಕೆ 172 ಸ್ಥಾನ ಬೇಕು. ಪಿಟಿಐ ನೇತೃತ್ವದ ಒಕ್ಕೂಟವು 179 ಸದಸ್ಯರ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಿತು, ಆದರೆ ಈಗ, ಎಂಕ್ಯೂಎಂ-ಪಿ ಒಕ್ಕೂಟ ತೊರೆದ ನಂತರ ಪಿಟಿಐ 164 ಸದಸ್ಯರನ್ನು ಮಾತ್ರ ಹೊಂದಿದೆ. ಈಗ ವಿರೋಧ ಪಕ್ಷವು ರಾಷ್ಟ್ರೀಯ ಅಸೆಂಬ್ಲಿಯಲ್ಲಿ 177 ಸದಸ್ಯರ ಬೆಂಬಲ ಹೊಂದಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top