
ಹೋರಾಟದ ಮೂಲಕ ಉತ್ತರ ಕನ್ನಡ ಜಿಲ್ಲೆಯ ಜನತೆಗೊಂದು ಭರವಸೆಯ ಬೆಳಕಾಗಿ ಹೊರ ಹೊಮ್ಮಿರುವ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಜಿಲ್ಲಾಧ್ಯಕ್ಷರಾಗಿದ್ದ ಶ್ರೀ ಭಾಸ್ಕರ ಪಟಗಾರ ಅವರು, ಫೆ.4, ಶುಕ್ರವಾರ ಬೆಂಗಳೂರಿನಲ್ಲಿ ಕೆ.ಪಿ.ಸಿ.ಸಿ ರಾಜ್ಯಾಧ್ಯಕ್ಷ ಶ್ರೀ ಡಿ.ಕೆ.ಶಿವಕುಮಾರ ಅವರ ನೇತೃತ್ವದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಸೇರಿರುವುದು ನಮಗೆಲ್ಲ ಸಂತಸವನ್ನುಂಟುಮಾಡಿದೆ.
ಉತ್ತರ ಕನ್ನಡದಲ್ಲಿ ಕನ್ನಡದ ಅಸ್ಮಿತೆ ಉಳಿವಿನ ಹೋರಾಟದ ಜೊತೆಗೆ ಸ್ಥಳೀಯ ಜನರ ಪ್ರಬಲ ಧ್ವನಿಯಾಗಿ, ಇಲ್ಲಿನ ಸಮಸ್ಯೆಗಳಿಗೆ ಕಿವಿಯಾಗಿ, ಹೋರಾಟದ ಕಿಚ್ಚಿನ ಮೂಲಕ ಬಲಿಷ್ಠ ಪ್ರತಿಧ್ವನಿ ಮೂಡಿಸಿದ ಕೀರ್ತಿ ಶ್ರೀ ಭಾಸ್ಕರ ಪಟಗಾರ ಅವರಿಗೆ ಸಲ್ಲಬೇಕು.
ಪಕ್ಷದ ಹಿರಿಯ ನಾಯಕರಾದ ಆರ್.ವಿ. ದೇಶಪಾಂಡೆ ಆಶೀರ್ವಾದದೊಂದಿಗೆ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯ ಪದಾಧಿಕಾರಿಗಳಾದ ನಿವೇದಿತ್ ಆಳ್ವಾ, ಜಿಲ್ಲಾಧ್ಯಕ್ಷ ಭೀಮಣ್ಣ ನಾಯಕ, ಯುವ ಮುಖಂಡ ಪ್ರಶಾಂತ ದೇಶಪಾಂಡೆ ಸೇರಿದಂತೆ ವಿವಿಧ ಮುಖಂಡರು ಉಪಸ್ಥಿತರಿರುವುದು ಬಲವನ್ನು ನೀಡಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಎಲ್ಲ ಕಾಂಗ್ರೆಸ್ ನಾಯಕರ ಸಹಕಾರದಿಂದ ಪಕ್ಷವನ್ನು ಬಲಗೊಳಿಸುವಲ್ಲಿ ಶ್ರೀ ಭಾಸ್ಕರ ಪಟಗಾರ ಪ್ರಮುಖ ಪಾತ್ರ ವಹಿಸುತ್ತಾರೆ. ಹೋರಾಟದ ಹಾದಿಯಲ್ಲಿಯೇ ಪಕ್ಷವನ್ನು ಸಂಘಟಿಸಿ, ಜಿಲ್ಲೆಯಲ್ಲಿ ಪಕ್ಷವನ್ನು ಹೆಚ್ಚು ಬಲಪಡಿಸುತ್ತಾರೆ ಎಂಬ ವಿಶ್ವಾಸ ನಮ್ಮಲ್ಲಿದೆ. ಅವರ ಎಲ್ಲ ಕಾರ್ಯಕ್ಕೆ ಶುಭವಾಗಲಿ.
ಭಾಸ್ಕರ ಪಟಗಾರ ಅಭಿಮಾನಿ ಬಳಗ (ಉ.ಕ)