Slide
Slide
Slide
previous arrow
next arrow

ಸ್ವಾಮಿ ವಿವೇಕಾನಂದರ 159 ನೇ ಜನ್ಮದಿನೋತ್ಸವ

300x250 AD

ಸಿದ್ದಾಪುರ: ವಿವೇಕಾನಂದರು ಯುವಕರಿಗೆ ಮಾದರಿಯಾಗಿದ್ದಾರೆ. ಭಾರತೀಯ ಹಾಗೂ ಯುವಸಮೂಹದ ಒಗ್ಗಟ್ಟನ್ನು ವಿಶ್ವಕ್ಕೆ ಸಾರಿ ಹೇಳಿದ್ದಾರೆ. ಭಾರತೀಯ ಸಂಸ್ಕøತಿ ಹಾಗೂ ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಂಡು ಇಂದಿಗೂ ಸ್ವಾಮಿ ವಿವೇಕಾನಂದರು ಯುವ ಜನತೆಗೆ ಆದರ್ಶವಾಗಿದ್ದಾರೆ.ಮುಂದಿನ ತಲೆಮಾರಿಗೆ ವಿವೇಕಾನಂದರ ಬಗ್ಗೆ ತಿಳುವಳಿಕೆ ಮೂಡಿಸುವ ಕಾರ್ಯವಾಗಬೇಕಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ದಾಪುರ ಹಾಗೂ ಸ್ಥಳೀಯ ಆಧಾರ ಸಂಸ್ಥೆಯ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದರ 159 ನೇ ಜನ್ಮದಿನೋತ್ಸವ ಹಾಗೂ ‘ರಾಷ್ಟ್ರೀಯ ಯುವ ದಿನ’ ದ ಅಂಗವಾಗಿ ಪುರಸ್ಕಾರ- ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಿರಳಗಿ ಶ್ರೀ ಚೈತನ್ಯ ರಾಜಾರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮಿಜಿ ಉಪನ್ಯಾಸ ನೀಡಿ ನಮ್ಮೊಳಗೆ ನಂಬಿಕೆಗಳಿದ್ದರೆ ಎಲ್ಲವನ್ನು ಸಾಧಿಸುವುದಕ್ಕೆ ಸಾಧ್ಯವಾಗಲಿದೆ. ಸ್ವಾಮಿ ವಿವೇಕಾನಂದರು ಅನೇಕ ಸಾಧಕರಿಗೆ ಪ್ರೇರಣೆಯಾಗಿದ್ದಾರೆ. ಕೋಟ್ಯಾಂತರ ಜನರ ಬದುಕಿನಲ್ಲಿ ಸ್ವಾಮಿ ವಿವೇಕಾನಂದರು ಪ್ರೇರಣೆಯಾಗಿದ್ದರು. ನಮ್ಮ ಮೇಲೆ ನಾವು ಎಂದೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಅವರು ಇಂದಿಗೂ ಗೃಂಥಗಳ ಮೂಲಕ ನಮ್ಮ ನಡುವೆ ಜೀವಂತವಾಗಿದ್ದಾರೆ.ಅವರು ಮನುಷ್ಯರ ಹೃದಯದಲ್ಲಿ ಅಳಿಯದೆ ಉಳಿದಿದ್ದಾರೆ. ನಮ್ಮಲ್ಲಿಯ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು.ವಿವೇಕಾನಂದರನ್ನು ಓದಿದರೆ ಸರ್ವವನ್ನು ತಿಳಿದುಕೊಂಡಂತೆ ಆಗುತ್ತದೆ ಎಂದರು.

300x250 AD

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಜೆ.ಎಸ್.ಹೆಗಡೆ , ಫೇವಾರ್ಡ ಉತ್ತರ ಕನ್ನಡದ ಅಧ್ಯಕ್ಷರಾದ ನಾಗರಾಜ ನಾಯ್ಕ ಮಾಳ್ಕೋಡ ಮಾತನಾಡಿದರು.ವೇದಿಕೆಯಲ್ಲಿ ಕಾಲೇಜು ವಿದ್ಯಾರ್ಥಿ ಸಂಘದ ಕಾರ್ಯದರ್ಶಿಗಳಾದ ಮನೋಜ ಎಂ.ನಾಯ್ಕ, ಸಂದೇಶ,ಹೇಮಾವತಿ ಉಪಸ್ಥಿತರಿದ್ದರು.

ಕು. ವೀಣಾ ಜಿ.ನಾಯ್ಕ ಮತ್ತು ತಂಡದವರು ಪ್ರಾರ್ಥಿನೆ ಮತ್ತು ನಾಡಗೀತೆ ಹಾಡಿದರು. ಉಪನ್ಯಾಸಕ ಅರುಣಪ್ರಸಾದ್ ಎಂ.ಎಸ್ ಸ್ವಾಗತಿಸಿದರು. ಭಾರತ್ ಸ್ಕೌಟ್ಸ್ ಸಂಚಾಲಕರಾದ ಜೆ.ಎಸ್.ಶಾಸ್ತ್ರೀ ಯುವ ಪುರಸ್ಕಾರ ನಡೆಸಿಕೊಟ್ಟರು. ಡಾ.ರಶ್ಮಿ ಎನ್.ಕರ್ಕಿ ವಂದಿಸಿದರು. ಉಪನ್ಯಾಸಕಿ ಅನಿಜಾ.ಎಲ್ ಕಾರ್ಯಕ್ರಮ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top