• Slide
    Slide
    Slide
    previous arrow
    next arrow
  • ರಾಷ್ಟ್ರ ಮಟ್ಟದ ಸಹಕಾರಿ ವಿಶ್ವವಿದ್ಯಾನಿಲಯ ಶೀಘ್ರವೇ ಸ್ಥಾಪನೆ; ಸಚಿವ ಅಮಿತ್ ಶಾ

    300x250 AD


    ನವದೆಹಲಿ: ಸಹಕಾರಿ ಕ್ಷೇತ್ರವನ್ನು ಮತ್ತಷ್ಟು ವಿಸ್ತರಿಸಲು ರಾಷ್ಟ್ರ ಮಟ್ಟದ ಸಹಕಾರಿ ವಿಶ್ವವಿದ್ಯಾನಿಲಯವನ್ನು ಶೀಘ್ರದಲ್ಲೇ ಸ್ಥಾಪಿಸಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

    ಅವರು ನಿನ್ನೆ ಮಹಾರಾಷ್ಟ್ರದ ಪುಣೆಯಲ್ಲಿ ವೈಕುಂಠ ಮೆಹ್ತಾ ರಾಷ್ಟ್ರೀಯ ಸಹಕಾರ ನಿರ್ವಹಣಾ ಸಂಸ್ಥೆಯ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.

    ಹಳ್ಳಿಗಳಲ್ಲಿ ಸಹಕಾರಿ ಕ್ಷೇತ್ರದ ವಿಸ್ತರಣೆಯ ಅಗತ್ಯವನ್ನು ಒತ್ತಿ ಹೇಳಿದ ಶಾ, ಸ್ವಾತಂತ್ರ್ಯ ಪೂರ್ವದಿಂದಲೂ ಈ ಕ್ಷೇತ್ರವು ದೇಶದ ಅಭಿವೃದ್ಧಿಯಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡಿದೆ. ಸಹಕಾರಿ ಆಂದೋಲನಕ್ಕೆ ಉತ್ತೇಜನ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಹಕಾರಿ ಕ್ಷೇತ್ರದ ನೀತಿಯನ್ನು ರೂಪಿಸಲಾಗುತ್ತಿದ್ದು, ಶೀಘ್ರವೇ ದೇಶಾದ್ಯಂತ ಜಾರಿಗೆ ಬರಲಿದೆ ಎಂದರು.

    ಸಮಾರಂಭದಲ್ಲಿ `ಸಹಕಾರ ಸಂದರ್ಭ’ ಎಂಬ ಪುಸ್ತಕವನ್ನು ಶಾ ಬಿಡುಗಡೆ ಮಾಡಿದರು. ದೇಶದ ಪ್ರಾಥಮಿಕ ಕೃಷಿ ಸೊಸೈಟಿಯನ್ನು ಆಧುನೀಕರಿಸಲಾಗುವುದು ಮತ್ತು ಜಿಲ್ಲಾ ಮತ್ತು ರಾಜ್ಯ ಸಹಕಾರಿ ಬ್ಯಾಂಕ್‍ಗಳಿಗೆ ಲಿಂಕ್ ಮಾಡಲಾಗುವುದು, ಅದನ್ನು ನಬಾರ್ಡ್‍ಗೆ ಜೋಡಿಸಲಾಗುವುದು ಎಂದು ಅವರು ಹೇಳಿದರು. ಇದು ದೇಶದಲ್ಲಿ ಸಹಕಾರಿ ಕ್ಷೇತ್ರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.

    300x250 AD

    ಮಹಾರಾಷ್ಟ್ರಕ್ಕೆ ಎರಡು ದಿನಗಳ ಭೇಟಿಯಲ್ಲಿರುವ ಶಾ, ಪುಣೆಯಲ್ಲಿ ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯದ (CFSL) ಹೊಸ ಕಟ್ಟಡ ಮತ್ತು NDRF ನ ಐದನೇ ಬೆಟಾಲಿಯನ್ ಕ್ಯಾಂಪಸ್ ಅನ್ನು ಉದ್ಘಾಟಿಸಿದರು.

    ಅವರು ಪುಣೆ ಮಹಾನಗರ ಪಾಲಿಕೆಯ ವಿಸ್ತೃತ ಹೊಸ ಕಟ್ಟಡದ ಒಳಗೆ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು ಮತ್ತು ಪುಣೆ ಕಾಪೆರ್Çರೇಶನ್ ಆವರಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಸ್ಮಾರಕದ ಶಂಕುಸ್ಥಾಪನೆ ಮಾಡಿದರು. ಪುಣೆಯ ಅಭಿವೃದ್ಧಿಗೆ ಕೇಂದ್ರ ಸರಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.
    ನ್ಯೂಸ್ 13

    Share This
    300x250 AD
    300x250 AD
    300x250 AD
    Leaderboard Ad
    Back to top