Slide
Slide
Slide
previous arrow
next arrow

‘ಶೌರ್ಯ ಪ್ರಶಸ್ತಿ’ ನಗದು ಪುರಸ್ಕಾರ 5 ಪಟ್ಟು ಹೆಚ್ಚಿಸಿ ಆದೇಶ; ಸಿಎಂ ಬೊಮ್ಮಾಯಿ

300x250 AD

ಬೆಂಗಳೂರು: ಶೌರ್ಯ ಪ್ರಶಸ್ತಿ ವಿಜೇತರಿಗೆ ರಾಜ್ಯ ಸರ್ಕಾರದಿಂದ ಒಂದು ಬಾರಿ ನೀಡುವ ನಗದು ಅನುದಾನವನ್ನು ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ. ಸರಾಸರಿ 5 ಪಟ್ಟು ಹೆಚ್ಚಳ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.


ಭಾರತವು 1971ರಲ್ಲಿ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಜಯ ಸಾಧಿಸಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಲ್ಲಿನ ಮರಾಠಾ ಲಘು ಪದಾತಿ ದಳ ಕೇಂದ್ರ (ಎಂಎಲ್‍ಐಆರ್‍ಸಿ)ದಲ್ಲಿ ಗುರುವಾರ ನಡೆದ ‘ವಿಜಯ ದಿವಸ’ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಯುದ್ಧ ಸ್ಮಾರಕಕ್ಕೆ ಗೌರವ ಸಲ್ಲಿಸಿದ ನಂತರ ಅವರು ಮಾತನಾಡಿದರು.

300x250 AD


‘ಪರಮವೀರ ಚಕ್ರ ರೂ. 25 ಲಕ್ಷದಿಂದ ರೂ. 1.5 ಕೋಟಿ, ಮಹಾವೀರ ಚಕ್ರ ರೂ.12 ಲಕ್ಷದಿಂದ ರೂ.1 ಕೋಟಿ, ಅಶೋಕ ಚಕ್ರ ರೂ.25 ಲಕ್ಷದಿಂದ ರೂ.1.5 ಕೋಟಿ, ಕೀರ್ತಿ ಚಕ್ರ 12 ಲಕ್ಷದಿಂದ ರೂ.1 ಕೋಟಿ, ವೀರ ಚಕ್ರ ಹಾಗೂ ಶೌರ್ಯ ಚಕ್ರ ತಲಾ ರೂ.8 ಲಕ್ಷದಿಂದ ರೂ.50 ಲಕ್ಷಕ್ಕೆ ಹಾಗೂ ಭೂಸೇನಾ, ನೌಕಾ ಸೇನಾ ಹಾಗೂ ವಾಯುಸೇನಾ ಮೆಡಲ್ ತಲಾ ರೂ. 2 ಲಕ್ಷದಿಂದ ರೂ. 15 ಲಕ್ಷಕ್ಕೆ ಮತ್ತು ‘ಮೆನ್ ಶನ್ ಎಎನ್‍ಡಿಎಸ್ ಪ್ಯಾಚ್’ಗೆ ರೂ. 2 ಲಕ್ಷದಿಂದ ರೂ.15 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

Share This
300x250 AD
300x250 AD
300x250 AD
Back to top