Slide
Slide
Slide
previous arrow
next arrow

`ರಾಜ್ಯಗಳ ಇಂಧನ ಕ್ಷಮತೆ ಸೂಚ್ಯಂಕ’; ರಾಜ್ಯಕ್ಕೆ ಅಗ್ರ ಸ್ಥಾನ

300x250 AD

ಬೆಂಗಳೂರು: ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ `ರಾಜ್ಯಗಳ ಇಂಧನ ಕ್ಷಮತೆ ಸೂಚ್ಯಂಕ’ದಲ್ಲಿ ಕರ್ನಾಟಕ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಸೂಚ್ಯಂಕದಲ್ಲಿ ಕರ್ನಾಟಕ 70 ಅಂಕಗಳನ್ನು ಪಡೆದುಕೊಂಡಿದೆ.

ಎರಡನೇ ಸ್ಥಾನದಲ್ಲಿರುವ ರಾಜ್ಯಸ್ಥಾನ 61 ಅಂಕಗಳನ್ನು ಪಡೆದುಕೊಂಡಿದೆ. ಮೂರನೇ ಸ್ಥಾನದಲ್ಲಿ ಹರಿಯಾಣ ಇದ್ದು, ಅದು 59.5 ಅಂಕಗಳನ್ನು ಪಡೆದುಕೊಂಡಿದೆ.

300x250 AD

ಇಂಧನ ಕ್ಷಮತೆ ವಿಷಯದಲ್ಲಿ ರಾಜ್ಯ ಸರಕಾರಗಳ ನೀತಿ, ನಿಯಂತ್ರಣ, ವಿತ್ತೀಯ ನೆರವು, ಇಂಧನ ಮಿತವ್ಯಯಕ್ಕಾಗಿ ತೆಗೆದುಕೊಂಡ ಕ್ರಮಗಳು, ಈ ವಿಷಯದಲ್ಲಿ ಮಾಡಿದ ಸಾಧನೆ ಇತ್ಯಾದಿಗಳನ್ನು ಪರಿಗಣಿಸಲು 2018ರಲ್ಲಿ ಕೇಂದ್ರ ಸರಕಾರ ಈ ಸೂಚ್ಯಂಕವನ್ನು ಪ್ರಾರಂಭ ಮಾಡಿದೆ.

ರಾಜ್ಯಗಳ ನಡುವೆ ಆರೋಗ್ಯಕರವಾದ ಸ್ಪರ್ಧೆಯನ್ನು ಏರ್ಪಡಿಸುವ ಸಲುವಾಗಿ 97 ಅಂಶಗಳನ್ನು ಪರಿಗಣಿಸಿ ಸಮೀಕ್ಷೆ ನಡೆಸಲಾಗುತ್ತದೆ. ರಾಜ್ಯಗಳ ಪಡೆದ ಅಂಕಗಳ ಆಧಾರದ ಮೇಲೆ ನಾಲ್ಕು ವಿಭಾಗಗಳನ್ನು ಮಾಡಲಾಗುತ್ತದೆ. 60ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ರಾಜ್ಯಗಳು ರಾಂಕಿಂಗ್ ಪಟ್ಟಿಗೆ ಸೇರುತ್ತವೆ.
ನ್ಯೂಸ್ 13

Share This
300x250 AD
300x250 AD
300x250 AD
Back to top