Slide
Slide
Slide
previous arrow
next arrow

ಬ್ರಿಟೀಷರ ಸದೆ ಬಡಿದು, ವಿಜಯದ ಕಹಳೆ ಊದಿದ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ..

300x250 AD

ವ್ಯಕ್ತಿ-ವಿಶೇಷ: ಕನ್ನಡ ನಾಡಿನಲ್ಲಿ ಸ್ವತಂತ್ರ್ಯ ಹೋರಾಟದ ಸಮಯದಲ್ಲಿ ಆಗಿ ಹೋದ ವೀರವನಿತೆಯರಲ್ಲಿ ಕಿತ್ತೂರು ರಾಣಿ ಚೆನ್ನಮ್ಮಳು ಅಗ್ರಗಣ್ಯಳು. ಅಕ್ಟೋಬರ 23ರಂದು ಅವರ ಜಯಂತಿಯಿರುವುದರಿಂದ ಅವರ ಶೌರ್ಯ ಸಾಹಸ, ರಾಷ್ಟ್ರಪ್ರೇಮದ ಬಗ್ಗೆ ತಿಳಿದುಕೊಳ್ಳೋಣ.


ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಕಿರಿಯ ಹೆಂಡತಿ ತನ್ನ ಪುಟ್ಟ ರಾಜ್ಯದ ಸ್ವಾತಂತ್ರ್ಯ ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ ವಿರುದ್ಧ ಸೆಟೆದು ನಿಂತು ನಡೆಸಿದ ಹೋರಾಟ, ಅಲ್ಲಿ ತೋರಿಸಿದ ಧೈರ್ಯ, ಸಾಹಸವು ಚೆನ್ನಮ್ಮನನ್ನು ಅಜರಾಮರವಾದ ಕೀರ್ತಿ ಶಿಖರಕ್ಕೇರಿಸಿವೆ. ಚೆನ್ನಮ್ಮನಿಂದ ಕಿತ್ತೂರು ಪ್ರಸಿದ್ಧವಾಗಿದ್ದು ಇದರ ಇತಿಹಾಸವು ಕ್ರಿ.ಶ.1586ರಿಂದಲೇ ಆರಂಭವಾಗುತ್ತದೆ. ಮೂಲತಃ ಮಲೆನಾಡಿನ ಗೌಡ ಮನೆತನದದಿಂದ ಬಂದ ಮಲ್ಲ ಹೆಸರಿನ ಸೋದರರಿಬ್ಬರು ವಿಜಾಪುರದ ಆದಿಲಶಾಹಿ ಸೈನ್ಯದಲ್ಲಿ ಸೇರಿಕೊಂಡಿದ್ದರು. ಈ ಸೋದರರಲ್ಲಿ ಹಿರಿಯ ಮಲ್ಲನಿಗೆ ಶಮಶೇರ ಜಂಗಬಹಾದ್ದೂರ ಎನ್ನುವ ಬಿರುದನ್ನು ಹಾಗೂ ಹುಬ್ಬಳ್ಳಿ ವಿಭಾಗದ ಸರದೇಶಮುಖಿಯನ್ನು ನೀಡಲಾಗಿತ್ತು. 1778ರಲ್ಲಿ ಬೆಳಗಾವಿಯಿಂದ ಉತ್ತರಕ್ಕೆ ಸುಮಾರು 6 ಕಿ.ಮೀ. ದೂರದಲ್ಲಿರುವ ಕಾಕತಿ ಚಿನ್ನಮ್ಮಳ ಜನ್ಮವಾಯಿತು. ತಂದೆ ಕಾಕತಿಯ ದೇಸಾಯಿ ಧೂಳಪ್ಪಗೌಡರು, ಚೆನ್ನಮ್ಮ ಎಳೆಯ ವಯಸ್ಸಿನಲ್ಲಿಯೇ ಕುದುರೆ ಸವಾರಿ ಹಾಗೂ ಬಿಲ್ವಿದ್ಯೆಗಳನ್ನು ಕರಗತಮಾಡಿಕೊಂಡಿದ್ದಳು.

ಚೆನ್ನಮ್ಮಳು ಚಿಕ್ಕ ವಯಸ್ಸಿನಲ್ಲೇ ಪಡೆದ ಧರ್ಮಶಿಕ್ಷಣ ಹಾಗೂ ಸ್ವಸಂರಕ್ಷಣೆಯ ಕಲೆಗಳಿಂದ ಸಂಗೊಳ್ಳಿರಾಯಣ್ಣನಂತಹ ಕ್ರಾಂತಿಕಾರಿ, ದೇಶಪ್ರೇಮಿಗಳನ್ನು ಜೊತೆಗೂಡಿಸಿಕೊಂಡು ಸ್ವರಾಜ್ಯಕ್ಕಾಗಿ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದಳು. ಅವಳ ಆದರ್ಶವನ್ನು ನಾವೆಲ್ಲರೂ ಬೆಳೆಸಿಕೊಳ್ಳುವುದು ಅವಶ್ಯಕವಿದೆ. ಇಂದು ಸಮಾಜದಲ್ಲಿ ಸ್ತ್ರೀಯರ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ, ಲವ್ ಜಿಹಾದ್ ನಂತಹ ಷಡ್ಯಂತ್ರಗಳ ಮೂಲಕ ಹಿಂದೂ ಯುವತಿಯರನ್ನು ಬಲಿಪಶುವನ್ನಾಗಿಸಲಾಗುತ್ತಿದೆ, ಹಾಡುಹಗಲೇ ಹಿಂದೂ ದೇವತೆಗಳ ವಿಡಂಬನೆ ನಡೆಯುತ್ತಿವೆ. ಸ್ತ್ರೀಯರ ಮೇಲಾಗುತ್ತಿರುವ ದೌರ್ಜನ್ಯವನ್ನು ತಡೆಗಟ್ಟಲು ಪ್ರತಿಯೊಬ್ಬ ಮಹಿಳೆಯೂ ಕೂಡ ಸ್ವಸಂರಕ್ಷಣಾ ಪ್ರಶಿಕ್ಷಣವನ್ನು ಪಡೆದುಕೊಳ್ಳಬೇಕು, ಇದರಿಂದಾಗಿ ಯಾವುದೇ ಸಮಯದಲ್ಲಿ ತನ್ನ ಮೇಲೆ ತೊಂದರೆಗಳು ಎದುರಾಗುವ ಪ್ರಸಂಗ ಬಂದರೆ ಯುವತಿಯು ಅದನ್ನು ಎದುರಿಸಲು ಮಾನಸಿಕ ಹಾಗೂ ಶಾರೀರಿಕ ಸ್ತರದಲ್ಲಿ ಸಿದ್ಧಳಾಗಿರುವಳು.

300x250 AD

ಸ್ತ್ರೀಯರಲ್ಲಿ ಸ್ವಾಭಿಮಾನ, ಆತ್ಮಸ್ಥೈರ್ಯವನ್ನು ತುಂಬಿಸಲು ಪ್ರತಿಯೊಬ್ಬರೂ ಧರ್ಮಶಿಕ್ಷಣ ಪಡೆದುಕೊಳ್ಳಬೇಕು. ಸ್ತ್ರೀಯರು ಹಣೆಗೆ ಕುಂಕುಮ ಏಕೆ ಇಡಬೇಕು, ಕಾಲ್ಗೆಜ್ಜೆ ಏಕೆ ಮತ್ತು ಹೇಗೆ ಧರಿಸಬೇಕು ? ಕೈಬಳೆಗಳು ಯಾವ ರೀತಿಯಲ್ಲಿರಬೇಕು ಈ ರೀತಿಯ ಮಾಹಿತಿಗಳು ಹಿಂದೂ ಯವತಿಯರಿಗೆ ತಿಳಿಯಬೇಕಾದದ್ದು ಅತ್ಯಾವಶ್ಯಕ. ಇದನ್ನೇ ಧರ್ಮಶಿಕ್ಷಣ ಎನ್ನುತ್ತಾರೆ, ಪ್ರತಿಯೊಬ್ಬ ಸ್ತ್ರೀಯು ಈ ಆಚರಣೆಗಳ ಹಿಂದಿನ ಉದ್ದೇಶ ಅರಿತರೆ ಖಂಡಿತವಾಗಿಯೂ ಅದರ ಪಾಲನೆಯನ್ನು ಅವರು ಕಟ್ಟುನಿಟ್ಟಾಗಿ ಮಾಡಬಲ್ಲರು, ಈ ರೀತಿಯ ಪ್ರತಿಯೊಂದು ಆಚರಣೆಯ ಹಿಂದಿರುವ ಧರ್ಮಶಾಸ್ತ್ರದ ಬಗ್ಗೆ ತಿಳಿಸಿ ಪ್ರತಿಯೊಬ್ಬರಲ್ಲಿ ಧರ್ಮಾಭಿಮಾನವನ್ನು ಜಾಗೃತಿ ಮೂಡಿಸುವ ಅಭೂತಪೂರ್ವ ಕಾರ್ಯವನ್ನು ಹಿಂದೂ ಜನಜಾಗೃತಿ ಸಮಿತಿ ಹಾಗೂ ಸನಾತನ ಸಂಸ್ಥೆಯು ನಡೆಸುತ್ತಿದೆ. ಸಮಿತಿಯ ವತಿಯಿಂದ ಅನೇಕ ಧರ್ಮಶಿಕ್ಷಣವರ್ಗಗಳ ಆಯೋಜನೆಯನ್ನು ಮಾಡಲಾಗುತ್ತದೆ. ಈ ಕಾರ್ಯದಲ್ಲಿ ಸಹಭಾಗಿಯಾಗುವ ಮೂಲಕ ಪ್ರತಿಯೊಬ್ಬ ಹಿಂದೂವೂ ತಮ್ಮ ಧರ್ಮಕರ್ತವ್ಯ ನಿಭಾಯಿಸಬೇಕಿದೆ. ಹಾಗೆಯೇ ಸನಾತನ ಸಂಸ್ಥೆಯು ಧರ್ಮಶಿಕ್ಷಣಕ್ಕೆ ಸಂಬಂಧಿಸಿದ ಅನೇಕ ಗ್ರಂಥಗಳನ್ನು ಪ್ರಕಾಶಿಸಿದೆ. ಅದರಲ್ಲಿ ಸ್ತ್ರೀಯರು ಆಭರಣಗಳನ್ನು ಹೇಗೆ ಧರಿಸಬೇಕು, ಸ್ತ್ರೀ-ಪುರುಷರ ವಸ್ತ್ರಗಳು ಹೇಗಿರಬೇಕು ? ಸ್ತ್ರೀಯರು ಕೂದಲುಗಳನ್ನು ಹೇಗೆ ಬಾಚಿಕೊಳ್ಳಬೇಕು ಈ ರೀತಿಯ ಅನೇಕ ಮಾಹಿತಿ ಇರುವ ಗ್ರಂಥಗಳು ಲಭ್ಯವಿವೆ, ಇವುಗಳ ಲಾಭವನ್ನು ಸ್ವತಃ ಪಡೆದುಕೊಳ್ಳಬಹುದು ಮತ್ತು ಇತರರಿಗೂ ಇದರ ಬಗ್ಗೆ ತಿಳಿಸಿ ಧರ್ಮಕಾರ್ಯದಲ್ಲಿ ಸಹಭಾಗಿಗಳಾಗಬಹುದು.

ಸಂಗ್ರಹ –
ಶರತಕುಮಾರ ನಾಯ್ಕ್
ಹಿಂದೂ ಜನಜಾಗೃತಿ ಸಮಿತಿ
ಉತ್ತರಕನ್ನಡ ಜಿಲ್ಲೆ
9480567514

Share This
300x250 AD
300x250 AD
300x250 AD
Back to top