ಶಿರಸಿ: ತಾಲೂಕಿನ ಜೆಎಂಜೆ ಶಿಕ್ಷಣ ಸಂಸ್ಥೆಗೆ ಉಪೇಂದ್ರ ಪೈ ಸೇವಾ ಟ್ರಸ್ಟನಿಂದ ಸೆ.28 ಶುಕ್ರವಾರ ಜೆಎಂಜೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯ ಪುಸ್ತಕವನ್ನುವಿತರಿಸಿದರು.
ಸದರಿ ಕಾರ್ಯಕ್ರಮದಲ್ಲಿ ಉಪೇಂದ್ರ ಪೈ ಸೇವಾ ಟ್ರಸ್ಟನ ಮುಖ್ಯಸ್ಥರಾದ ಉಪೇಂದ್ರ ಪೈ, ಜೆಎಂಜೆ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಸಿಸ್ಟರ ಜಿಜಿ ಹಾಗೂ ಜೆಎಂಜೆಪ್ರೌಢಶಾಲಾ ಮುಖ್ಯೋಪಧ್ಯಾಯ ವಿನೋದ ಡಯಾಸ ಉಪಸ್ಥಿತರಾಗಿದ್ದರು. ಪ್ರೌಢಶಾಲೆ ವತಿಯಿಂದ ಉಪೇಂದ್ರ ಪೈ ರವರಿಗೆ ಅಭಿನಂದಿಸಿದರು.