ಹೊನ್ನಾವರ: ನ್ಯಾಶನಲ್ ಟೆಸ್ಟಿಂಗ್ ಏಜನ್ಸಿ ನಡೆಸುವ ಜೆ.ಇ.ಇ. ಮೇನ್ಸ್ ಅಂತಿಮ ಹಂತದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಎಂ.ಪಿ.ಇ.ಸೊಸೈಟಿಯ ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಅಭ್ಯಸಿಸಿದ ವಿದ್ಯಾರ್ಥಿಗಳು ಸ್ಫರ್ಧಾತ್ಮಕ ಪರೀಕ್ಷೆಯಾದ ಜೆಇಇ ಮೇನ್ಸ್ ನ 2 ನೇ ಪರೀಕ್ಷೆಯಲ್ಲಿಯೂ ಉತ್ತಮ ಸಾಧನೆಯನ್ನು ತೋರಿದ್ದಾರೆ.
ವಿದ್ಯಾರ್ಥಿಗಳಾದ ಕು. ಎನ್.ಸುಮಂತ್ 96%, ಕು.ಆದರ್ಶ ಜಿ.ಹೆಗಡೆ 94.8% , ಕು.ಆದಿತ್ಯ ಎಸ್ ಭಟ್ 93.3% ,ಕು.ವಿಠ್ಠಲ್.ವಿ.ಭಟ್ 93.1%, ಕು.ಆದರ್ಶ ಎಸ್ ಹೆಗಡೆ 84.5%, ಕು.ಸ್ವಾತಿ ಕೆ. ಹೆಗಡೆ 90.2 % ಇವರುಗಳು ಸಹ ಸಹ ಜೆಇಇ ಮೊದಲ ಪರೀಕ್ಷೆಯಲ್ಲಿ ಉತ್ತಮ ಅಂಕವನ್ನು ಪಡೆದು ಜೆಇಇ ಅಡ್ವಾನ್ಸ್ ಪರೀಕ್ಷೆಯನ್ನು ಬರೆಯಲು ಅರ್ಹತೆಯನ್ನು ಗಳಿಸಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳು ಎನ್.ಐ.ಟಿ ಅಂತಹ ಸಂಸ್ಥೆಗಳಲ್ಲಿ ಬಿ.ಇ ಪದವಿಗೆ ಪ್ರವೇಶ ಪಡೆಯುವ ಅವಕಾಶದ ಜೊತೆಗೆ ಐ.ಐ.ಟಿ ಸಂಸ್ಥೆ ಸೇರಲು ಮಾನದಂಡವಾಗಿರುವ ಜೆ.ಇ.ಇ ಅಡ್ವಾನ್ಸ್ ಪರೀಕ್ಷೆ ಬರೆಯಲು ಅರ್ಹತೆ ಪಡೆದಿರುತ್ತಾರೆ.
ಜೆ.ಇ.ಇ. ಮೇನ್ಸ್ ಪರೀಕ್ಷೆಯಲ್ಲಿ ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು, ಕೋ-ಆರ್ಡಿನೇಟರ್,ಬೋಧಕ- ಬೋಧಕೇತರ ಸಿಬ್ಬಂದಿಗಳು ಶುಭವನ್ನು ಹಾರೈಸಿದ್ದಾರೆ.