ಶಿರಸಿ: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಒಂಭತ್ತನೆಯ ಘಟಿಕೋತ್ಸವದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ದು ಅವರು ಸ್ನಾತಕೋತ್ತರ ಪದವಿಯ ಹಸ್ತಪ್ರತಿ ಶಾಸ್ತ್ರದಲ್ಲಿ ಪ್ರಥಮ ಸ್ಥಾನ ಗಳಿಸಿದ ತಾಲೂಕಿನ ಗೋಳಿ ಗ್ರಾಮದ ಡಾ.ಕುಮುದಾ ಹೆಗಡೆ ಅವರಿಗೆ ಚಿನ್ನದ ಪದಕವನ್ನು ಪ್ರದಾನ ಮಾಡಿದರು. ಬೆಂಗಳೂರಿನ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲರಾದ ತಾವರ ಚಂದ್ ಗೆಹಲೊಟ್ ಉಪಸ್ಥಿತರಿದ್ದರು.
ಕುಮುದಾ ಹೆಗಡೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸೀ ಆರ್ಅ ಪಿ ಎಫ್ ) ನಲ್ಲಿ ಅಧಿಕಾರಿಯಾಗಿರುವ ಮಹೇಂದ್ರ ಎಂ. ಹೆಗಡೆಯವರ ಪತ್ನಿ. ಈಗಾಗಲೇ ವ್ಯಾಕರಣ ಶಾಸ್ತ್ರದಲ್ಲಿ ಶೃಂಗೇರಿಯ ರಾಜೀವ್ ಗಾಂಧಿ ಸಂಸ್ಕೃತ ವಿಶ್ವ ವಿದ್ಯಾಲಯದಿಂದ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ದಿಂದ ಆಂಗ್ಲ ಭಾಷೆ ಯಲ್ಲಿ ಸ್ನಾತಕೋತ್ತರ ಪದವಿ, ಸ್ವಾಮಿ ರಮಾನಂದ್ ತೀರ್ಥ ಮರಾಠವಾಡ ವಿಶ್ವವಿದ್ಯಾಲಯ, ನಾಂದೆಡ, ಮಹಾರಾಷ್ಟ್ರ ದಿಂದ ಬಿ ಏಡ್ ಪದವಿ ಮತ್ತೂ ತಿರುಪತಿಯ ಕೇಂದ್ರೀಯ ಸಂಸ್ಕೃತ ವಿಶ್ವ ವಿದ್ಯಾಲಯದಿಂದ ಪಿ ಎಚ್ಚ ಡಿ ಪದವಿ ಯನ್ನೂ ಹೊಂದಿದ್ದಾರೆ.
ಗ್ರಂಥಿ, ಶಾರದಾ, ಮೈಥಿಲಿ, ಕರೋಷ್ಟ್ರ, ಪಾಲಿ ಇತ್ಯಾದಿ ಭಾರತದ ಅನೇಕ ಪ್ರಾಚೀನ ಲಿಪಿಗಳನ್ನು ಅವರು ಆಳವಾಗಿ ಅಭ್ಯಸಿಸಿದ್ದಾರೆ. ಪ್ರಸ್ತುತ ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ಹಸ್ತಪ್ರತಿ ಶಾಸ್ತ್ರ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಹಸ್ತಪ್ರತಿ ಶಾಸ್ತ್ರದಲ್ಲಿ ಸಂಶೋಧನೆಯನ್ನು, ಪಿ ಎಚ್ಚ ಡಿ, ಮಾಡುತ್ತಿದ್ದಾರೆ.