ವಿದ್ಯಾರ್ಥಿಗಳು ಜೀವನದಲ್ಲಿ ನಿರ್ದಿಷ್ಟ ಗುರಿ ಹೊಂದಿರಬೇಕು; ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣಕುಮಾರ

ಗೋಕರ್ಣ: ವಿದ್ಯಾರ್ಥಿಗಳು ಜೀವನದಲ್ಲಿ ನಿರ್ದಿಷ್ಟ ಗುರಿ ಇಟ್ಟುಕೊಳ್ಳ ಬೇಕು ಆ ದಿಸೆಯಲ್ಲಿ ಸತತ ಪ್ರಯತ್ನ ಮಾಡುವಂತೆ ಕರೆ ನೀಡಿದರು. ವಿದ್ಯಾರ್ಜನೆಯ ಜೊತೆಯಲ್ಲಿ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕುಮಟಾ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ ಕುಮಾರ ಬಸ್ರೂರ ಹೇಳಿದರು.

ಶನಿವಾರ ನಡೆದ ಬಂಕಿಕೊಡ್ಲ ಆನಂದಾಶ್ರಮ ಪ್ರೌಢಶಾಲೆಯ ವಾರ್ಷಿಕೋತ್ಸವ ಹಾಗೂ ಪಾಲಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕ ಹಾಗೂ ರೂರಲ್ ಎಜ್ಯುಕೇಶನ ಸೊಸೈಟಿಯ ಆಡಳಿತ ಮಂಡಳಿಯ ಸದಸ್ಯ ನಾರಾಣ ಜನ್ನು ವಹಿಸಿ ಮಾತನಾಡಿ ಏಕಾಗ್ರತೆ ಬೆಳೆಸಿಕೊಳ್ಳುವುದರ ಜೊತೆಗೆ ಪುಸ್ತಕ ಓದುವ ಹವ್ಯಾಸವನ್ನು ಬೆಳಸಿಕೊಳ್ಳ ಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಕೈಬರಹದ ಪತ್ರಿಕೆ ‘ಆನಂದ’ ವನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ ಕುಮಾರ ಬಸ್ರೂರ್ ಬಿಡುಗಡೆಗೊಳಿಸಿದರು. ಆಡಳತ ಮಂಡಳಿ ಅಧ್ಯಕ್ಷ ಎ.ಎಸ. ಬಳವಳ್ಳಿ, ಗೌರವ ಕಾರ್ಯದರ್ಶಿ ವಿವೇಕ ನಾಡ್ಕರ್ಣಿ, ಸದಸ್ಯರಾದ ಜ್ಯೋತ್ಸ್ನಾ ಕಾಗಾಲ, ರೇಷ್ಮಾ ಜನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕ ಗಂಗಾಧರ ಭಟ್ ಸ್ವಾಗತಿಸಿದರು. ಗಿರೀಶ ಹೆಬ್ಬಾರ ಕಾರ್ಯಕ್ರಮ ನಿರ್ವಹಿಸಿದರು. ಎಸ.ಜಿ.ಬಟಕುರ್ಕಿ ವಂದಿಸಿದರು. ಶಿಕ್ಷಕರಾದ ಎ.ಬಿ.ಕವರಿ, ಶ್ಯಾಮಲಾಕುಮಾರಿ ಕೆ. ,ದೀಪಾ ನಾಯ್ಕ , ದಯಾನಂದ ಗೌಡ, ಕು. ಗಾಯತ್ರಿ ಚಿತ್ತಾಲ ಕಾರ್ಯಕ್ರಮಕ್ಕೆ ವಿವಿಧ ಜವಾಬ್ದಾರಿ ನಿರ್ವಹಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.