ಸುವಿಚಾರ

​ವಿಹಾಯ ಪೌರುಷಂ ಯೋ ಹಿ ದೈವಮೇವಾವಲಂಬತೇ 

ಪ್ರಾಸಾದಸಿಂಹವತ್ತಸ್ಯ ಮೂರ್ಧ್ನಿ ತಿಷ್ಠಂತಿ ವಾಯಸಾಃ |

ಪ್ರಯತ್ನಿಸಿ, ಹೋರಾಡಿ, ಗೆದ್ದು ಪಡೆಯಬೇಕಾದ ಸಂದರ್ಭದಲ್ಲೂ ಯಾವುದೇ ಪ್ರಯತ್ನ ಮಾಡದೇ ಎಲ್ಲದಕ್ಕೂ ಅದೃಷ್ಟವನ್ನೇ ನೆಚ್ಚಿಕೊಂಡಿರುವವರಿರುತ್ತಾರಲ್ಲ- ಅವರು ತಮ್ಮ ಗುರುತನ್ನು ಕಳೆದುಕೊಳ್ಳುತ್ತಾರೆ. ಅದೆಲ್ಲಿಯವರೆಗೆಂದರೆ – ಅರಮನೆಯಲ್ಲಿ ಅಲಂಕಾರಕ್ಕಾಗಿ ಮಾಡಿದ ಸಿಂಹದ ಮೂರ್ತಿಯ ಮೇಲೆ ಕಾಗೆಗಳು ಕೂರುತ್ತವಲ್ಲ, ಹಾಗೇ ಈ ಮನುಷ್ಯನೂ ಹೆಸರಿಗೆ ಮಾತ್ರವೇ ಮನುಷ್ಯನಾಗಿದ್ದುಕೊಂಡು ಉಳಿದಂತೆ ಅಧಮನಾಗುತ್ತಾನೆ.

– ನವೀನ್ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.