ಸುವಿಚಾರ

​ತಾಸ್ತು ವಾಚಃ ಸಭಾಯೋಗ್ಯಾ ಯಾಶ್ಚಿತ್ತಾಕರ್ಷಣಕ್ಷಮಾಃ 

ಸ್ವೇಷಾಂ ಪರೇಷಾಂ ವಿದುಷಾಂ ದ್ವಿಷಾಮವಿದುಷಾಮಪಿ|

ಸಭೆಯಲ್ಲಿ ಮಾತಾಡುವುದೆಂದರೆ ಸುಮ್ಮನೇ ಅಲ್ಲ. (ಸುಮ್ಮನೇ ಸಭೆಯಲ್ಲಿ ಮಾತಾಡುವವರ ವಿಚಾರ ಬೇರೆ). ಕೇಳುಗರ ಮನಸನ್ನು ಆವರಿಸುವಂಥ, ಅದನ್ನು ಸೆಳೆಯುವಂಥ ಮಾತು ಮಾತ್ರವೇ ಸಭೆಗೆ ಯೋಗ್ಯವಾದ್ದು. ತಮ್ಮವರ, ಹೆರವರ, ವಿದ್ವಜ್ಜನರ ಮನಸುಗಳನ್ನು ಆ ಮಾತುಗಳು ಸೆಳೆಯುವಂತಿರಬೇಕು. ಇದೇನೋ ಸುಲಭವಲ್ಲದಿದ್ದರೂ ಕಷ್ಟವಂತೂ ಅಲ್ಲ. ಆದರೆ ಅದಷ್ಟೇ ಅಲ್ಲದೆ ಆ ಮಾತುಗಳು ನಮ್ಮನ್ನು ದ್ವೇಷಿಸುವವರನ್ನೂ ಸೆಳೆಯುವಂತಿರಬೇಕು, ಏನೂ ತಿಳಿಯದ ಅಜ್ಞನನ್ನೂ ಸೆಳೆಯುವಂತಿರಬೇಕು. ಅದು ಮಾತು ಅಂದರೆ !

– ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.