ಸಿದ್ದಾಪುರ: ತಾಲೂಕಿನ ಕೋಡಿಗದ್ದೆ ಮೂಕಾಂಬಿಕಾ ದೇವಾಲಯದ ಸಭಾಂಗಣದಲ್ಲಿ ಕೋಡಿಗದ್ದೆ ಮೂಕಾಂಬಿಕಾ ಯಕ್ಷಗಾನ ಕಲಾಸಂಘ ದೊಡ್ಮನೆ ಇವರಿಂದ ಇಂದು ಆ.25ರಂದು ಮಧ್ಯಾಹ್ನ 3.30ರಿಂದ ಯಕ್ಷಗಾನ ಕಲಾವಿದರಾಗಿದ್ದ ದಿ. ರಾಮಚಂದ್ರ ಗಣೇಶ ಭಟ್ಟ ಕೋಡಿಗದ್ದೆ ಇವರಿಗೆ ನುಡಿನಮನ ಹಾಗೂ ಶ್ರೀರಾಮ ನಿರ್ಯಾಣ…
Read MoreMonth: August 2024
ರಾಮನಗುಳಿ-ಕಲ್ಲೇಶ್ವರ ಶಾಶ್ವತ ಸೇತುವೆ ನಿರ್ಮಿಸಿದ ರೂಪಾಲಿ ನಾಯ್ಕರಿಗೆ “ನಾಗರಿಕ ಸನ್ಮಾನ “
ಜನರ ಕನಸು ನನಸು ಮಾಡಿ ಜನರ ಮನಗೆದ್ದ ರೂಪಾಲಿ ನಾಯ್ಕ | 25 ಕೋಟಿ ರೂ. ವೆಚ್ಚದಲ್ಲಿ ಅತ್ಯಂತ ವೇಗ, ಗುಣಮಟ್ಟದೊಂದಿಗೆ ಸೇತುವೆ ನಿರ್ಮಾಣ | ಅಕ್ಷಯ ಶೆಟ್ಟಿ ರಾಮನಗುಳಿಅಂಕೋಲಾ: ಕಳೆದ 2019 ರ ಗಂಗಾವಳಿ ನದಿ ಪ್ರವಾಹಕ್ಕೆ…
Read Moreಮೂತ್ರರೋಗ ತಪಾಸಣಾ ಶಿಬಿರ ಯಶಸ್ವಿ: 135ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗಿ
ಶಿರಸಿ: ನಗರದ ಚರ್ಚ್ ರಸ್ತೆಯ ಅಕ್ಷಯ ಆರ್ಕೆಡ್‌ನಲ್ಲಿರುವ ಸಿಂಗದಿನಿ ಹೆಲ್ತ್ ಕೇರ್ ಸೆಂಟರಿನಲ್ಲಿ ಮುಂಗಾರಿನ ಅಂಗವಾಗಿ ಉಚಿತ ಮೂತ್ರ ರೋಗ ತಪಾಸಣಾ ಶಿಬಿರ ನಡೆಯಿತು. ಉಚಿತ ಶಿಬಿರದಲ್ಲಿ 135ಕ್ಕೂ ಹೆಚ್ಚು ಜನರು ಪಾಲ್ಗೊಂಡು ಪ್ರಯೋಜನ ಪಡೆದರು. ಡಾ. ರೋಹಿತ್…
Read Moreಮನಸೂರೆಗೊಂಡ ‘ಮೇಘ ಮಾಲಾ’
ಶಿರಸಿ : ಸಪ್ತಕ ಬೆಂಗಳೂರು ಇವರು ಶಿರಸಿಯ ರಂಗಧಾಮದಲ್ಲಿ ಆಯೋಜಿಸಿದ್ದ ‘ಮೇಘ ಮಾಲಾ’ ವಿಶೇಷ ಸಂಗೀತ ಕಾರ್ಯಕ್ರಮ ಕಲಾಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿ ಯಾಗಿದೆ. ಗಾಯಕಿ ವಿಭಾ ಹೆಗಡೆ ಯಲ್ಲಾಪುರ ತಮ್ಮ ಸಂಗೀತ ಕಛೇರಿ ನಡೆಸಿಕೊಡುತ್ತ ಆರಂಭದಲ್ಲಿ ರಾಗ್…
Read Moreಪೊಲೀಸರೇ ಇದೇನಿದು ! ಹೆಲ್ಮೇಟ್ ಗೆ ಕಟ್ಟಿದ ದಂಡದ ಹಣ ಚಿನ್ನದಂಗಡಿಯವನ ಜೇಬಿಗೆ..!!
ಭಟ್ಕಳ: ಹೆಲ್ಮೆಟ್ ರಹಿತ ದಂಡದ ಮೊತ್ತ ಪೊಲೀಸ್ ಇಲಾಖೆಯ ಖಾತೆಯ ಬದಲು ಚಿನ್ನದ ವ್ಯಾಪಾರಿಯ ಖಾತೆಗೆ ವರ್ಗಾವಣೆಯಾಗುತ್ತಿರುವ ಅಂಶ ಬೆಳಕಿಗೆ ಬಂದಿದೆ. ಭಟ್ಕಳ ವರದಿಗಾರನೋರ್ವ ನಡೆಸಿದ ರಿಯಾಲಿಟಿ ಚೆಕ್ ಕಾರ್ಯಾಚರಣೆಯಲ್ಲಿ ಇಂಥದ್ದೊಂದು ಭ್ರಷ್ಟಾಚಾರ ಬಯಲಿಗೆ ಬಂದಿದೆ. ಭಟ್ಕಳ ನಗರ…
Read Moreಭೈರವಿ ಮಹಿಳಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ಲಕ್ಷ್ಮಿಪೂಜೆ, ಅರಿಶಿಣ ಕುಂಕುಮ ವಿತರಣೆ
ಹೊನ್ನಾವರ: ತಾಲೂಕಿನ ಭೈರವಿ ಮಹಿಳಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಕೆಳಗಿನೂರಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಯಶಸ್ವಿಯಾಗಿ ನಡೆಯಿತು. ಸಹಕಾರಿಯ ಅಧ್ಯಕ್ಷರಾದ ಶ್ರೀಮತಿ ಶಾಂತಿ ಮಾದೇವ ಗೌಡ ಸಭೆಯ ಅಧ್ಯಕ್ಷತೆ ವಹಿಸಿ 100 ಪ್ರತಿಶತ ಮರುಪಾವತಿ ಮೂಲಕ ಸಂಘದ…
Read Moreಮನುವಿಕಾಸ ಸಂಸ್ಥೆಯಿಂದ ನೆರೆ ಸಂತ್ರಸ್ತರಿಗೆ ಶೆಲ್ಟರ್ ಕಿಟ್ ವಿತರಣೆ
ಶಿರಸಿ: ಮನುವಿಕಾಸ ಸಂಸ್ಥೆಯಿಂದ ತಾಲೂಕಿನಲ್ಲಿ ಅತಿಯಾದ ಮಳೆಯಿಂದಾಗಿ ಮನೆಯನ್ನು ಸಂಪೂರ್ಣ ಅಥವಾ ಭಾಗಶಃ ಕಳೆದುಕೊಂಡ ಕುಟುಂಬಗಳಿಗೆ ಶೆಲ್ಟರ್ ಕಿಟ್ ವಿತರಣೆ ಕಾರ್ಯಕ್ರಮವನ್ನು ಶಿರಸಿ ನಗರದ ಪತ್ರಕರ್ತರ ಭವನದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮನುವಿಕಾಸ ಸಂಸ್ಥೆ ನಿರ್ದೇಶಕರಾದ ಗಣಪತಿ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿ, ವಿವಿಧ ದಾನಿ ಸಂಸ್ಥೆಗಳ ನೆರವಿನಿಂದ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಮತ್ತು ಇಲಾಖೆಗಳ ಸಹಯೋಗದೊಂದಿಗೆ ನೆರೆ ಸಂತ್ರಸ್ತರಿಗೆ ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ೮೫೦ ಕುಟುಂಬಗಳಿಗೆ ಈಗಾಗಲೇ ಶೆಲ್ಟರ್ ಕಿಟ್ ವಿತರಿಸಲಾಗಿದೆ. ಈಗ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸುಮಾರು ೧೨೫೦ ಸಂಪೂರ್ಣ ಮತ್ತು ಭಾಗಶಃ ಮನೆ ಕಳೆದುಕೊಂಡ ಕುಟುಂಬಗಳಿಗೆ ಶೆಲ್ಟರ್ ಕಿಟ್ ವಿತರಿಸಲಾಗುತ್ತಿದೆ. ಪ್ರಸ್ತುತ ಶಿರಸಿ ತಾಲೂಕಿನಲ್ಲಿ ಅತಿಯಾದ ಮಳೆಯಿಂದಾಗಿ ಮನೆಯನ್ನು ಸಂಪೂರ್ಣ ಅಥವಾ ಭಾಗಶಃ ಕಳೆದುಕೊಂಡ ಕುಟುಂಬಗಳಿಗೆ ಶೆಲ್ಟರ್ ಕಿಟ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮನುಕುಲಕ್ಕೆ ಬೇಕಾದ ಮತ್ತು ಅತ್ಯಗತ್ಯವಿರುವ ಆಶ್ರಯ ನೀಡುವ ಮನೆಗಳನ್ನು ಕಳೆದುಕೊಂಡಾಗ ಆಗುವ ನೋವು ಅಷ್ಟಿಷ್ಟಲ್ಲ ಅದಕ್ಕೆ ಪೂರಕವಾಗಿ ಮನುವಿಕಾಸ ಸಂಸ್ಥೆಯು ನೆರೆ ಸಂತ್ರಸ್ತರಿಗೆ ಶೆಲ್ಟರ್ ಕಿಟ್ಗಳನ್ನು ವಿತರಿಸುತ್ತಿದೆ ಎಂದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಜಿ.ಸುಬ್ರಾಯ್ ಭಟ್ಟ ಬಕ್ಕಳ ಮಾತನಾಡಿ ಕಳೆದ ೨೨ ವರ್ಷಗಳಿಂದ ಮನೋವಿಕಾಸ ಸ್ವಯಂ ಸೇವಾ ಸಂಸ್ಥೆಯು ಸಮಾಜದ ವಿವಿಧ ಸ್ಥಳಗಳ ಸಮುದಾಯದ ಜನರಿಗೆ ಬೇಕಾದಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತ ಬಂದಿದೆ ಈ ಮೊದಲು ಕೋವಿಡ್ ೧೯ರ ಸಂದರ್ಭದಲ್ಲಿ ಸಂಸ್ಥೆಯಿAದ ರೇಷನ್‌ಕಿಟ್ಟು ಗಳನ್ನು ಒದಗಿಸಲಾಗಿತ್ತು ಇಂದು ನೆರೆ ಸಂತ್ರಸ್ತರಿಗೆ ಅಗತ್ಯವಿರುವ ಶೆಲ್ಟರ್ ಕಿಟ್ ಗಳನ್ನು ಒದಗಿಸುತ್ತಿರುವುದು ಸಂಸ್ಥೆ ಹೊಂದಿರುವ ಸಾಮಾಜಿಕ ಕಳಕಳಿಯನ್ನು ಎತ್ತಿ ತೋರಿಸುತ್ತದೆ ಎಂದರು. ಶಿರಸಿಯ ನಗರ ಸಭೆ ಅಧ್ಯಕ್ಷರಾದ ಶ್ರೀಮತಿ ಶರ್ಮಿಳಾ ಮಾದನಗೇರಿ ಮಾತನಾಡಿ ಪ್ರಕೃತಿ ವಿಕೋಪಗಳಿಂದ ಸಂಭವಿಸಿರುವ ನೆರಹಾವಳಿಯಿಂದಾಗಿ ಇಂದು ಅದೆಷ್ಟೋ ಕುಟುಂಬಗಳು ತಮ್ಮ ನೆಲೆಯನ್ನು ಕಳೆದುಕೊಂಡಿವೆ ಇಂತಹ ಸಂದರ್ಭದಲ್ಲಿ ಮನುವಿಕಾಸ ಸಂಸ್ಥೆಯು ಸಂಸ್ಥೆಯು ಸಂತ್ರಸ್ತರಿಗೆ ಶೆಲ್ಟರ್ ಕಿಟ್ ಗಳನ್ನು ವಿತರಿಸಿ ಮಾನವೀಯತೆ ಮೆರೆಯುತ್ತಿದೆ ಇದಕ್ಕೆ ನಮ್ಮ ಸಹಕಾರ ಸದಾ ಇರಲಿದೆ ಎಂದರು. ಶಿರಸಿ ನಗರಸಭೆಯ ಉಪಾಧ್ಯಕ್ಷರಾದ ರಮಾಕಾಂತ್ ಭಟ್ ಮಾತನಾಡಿ ಮನುವಿಕಾಸ ಸಂಸ್ಥೆ ಈ ಮೊದಲಿನಿಂದಲೂ ಜನಪರ ಕಾಳಜಿಯನ್ನು ಮುಖ್ಯ ಗುರಿಯನ್ನಾಗಿಟ್ಟುಕೊಂಡು ಕೆಲಸ ಮಾಡುತ್ತಿದೆ ಸರಕಾರದ ಜೊತೆಯಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಹೊತ್ತಿರುವ ಸಂಸ್ಥೆಗಳು ಕೆಲಸ ಮಾಡಿದಾಗ ಮಾತ್ರ ಸಮಾಜದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದರು. ಇದೇ ಸಂದರ್ಭದಲ್ಲಿ ಶಿರಸಿ ತಾಲೂಕಿನಲ್ಲಿ ಅತೀವ ಮಳೆಯಿಂದಾಗಿ ಹಾನಿ ಉಂಟಾದ 67 ಕುಟುಂಬಗಳಿಗೆ ಶೆಲ್ಟರ್ ಕಿಟ್ ಗಳನ್ನು ವಿತರಣೆ ಮಾಡಲಾಯಿತು. ಮನುವಿಕಾಸ ಸಂಸ್ಥೆಯ ಯೋಜನಾ ಉಪ ನಿರ್ದೇಶಕರಾದ ಅಶ್ವಥ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು ಸಂಸ್ಥೆಯ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
Read Moreಆ.31,ಸೆ.1ಕ್ಕೆ ಯಕ್ಷೋತ್ಸವ: ಪ್ರಶಸ್ತಿ ಪ್ರದಾನ, ತಾಳಮದ್ದಲೆ ಸ್ಪರ್ಧೆ
ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಅಂಗ ಸಂಸ್ಥೆಯಾದ ಯಕ್ಷ ಶಾಲ್ಮಲಾದಿಂದ ಆ.31 ಹಾಗೂ ಸೆ.1ರಂದು ಎರಡು ದಿನಗಳ ಯಕ್ಷೋತ್ಸವ ಸ್ವರ್ಣವಲ್ಲೀ ಮಠದಲ್ಲಿ ನಡೆಯಲಿದೆ. ನಗರದ ಯೋಗ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಯಕ್ಷಶಾಲ್ಮಲಾ ಕಾರ್ಯಾಧ್ಯಕ್ಷ ಆರ್.ಎಸ್.ಹೆಗಡೆ ಭೈರುಂಬೆ ಮಾಹಿತಿ…
Read Moreಕ್ರೀಡಾಕೂಟ: ಜಿಲ್ಲಾಮಟ್ಟಕ್ಕೆ ಎಸ್.ಡಿ.ಎಮ್ ಕಾಲೇಜು ಆಯ್ಕೆ
ಹೊನ್ನಾವರ: ತಾಲೂಕಿನ ಅರೇಅಂಗಡಿಯ ಕ್ರೀಡಾಂಗಣದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ತಾಲೂಕ ಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿ ಎಂಪಿಇ ಸೊಸೈಟಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಿಯು ಕಾಲೇಜು ಗಮನಾರ್ಹ ಸಾಧನೆ ಮಾಡಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ವಿದ್ಯಾರ್ಥಿಗಳು ನೀಡಿದ ಅತ್ಯಮೋಘ…
Read Moreಸ್ಕೋಡ್‌ವೆಸ್‌ನಿಂದ ನೆರೆ ಸಂತ್ರಸ್ತರಿಗೆ ಪರಿಹಾರ ಕಿಟ್ ವಿತರಣೆ
ಶಿರಸಿ: ಉತ್ತರ ಕನ್ನಡ ಜಿಲ್ಲೆಯ 6 ತಾಲೂಕುಗಳ ನೆರೆ ಪೀಡಿತ ಪ್ರದೇಶಗಳಲ್ಲಿ ತೀವ್ರ ತೊಂದರೆಗೊಳಗಾದ ಕುಟುಂಬಗಳಿಗೆ ಸ್ಕೊಡ್‌ವೆಸ್ ಸಂಸ್ಥೆ, ಅಜೀಮ್ ಪ್ರೇಮ್‌ಜಿ ಫಿಲಾನ್ಥೊಪಿಕ್ ಇನಿಶಿಯೇಟಿವ್ಸ್ ಪ್ರೈ. ಲಿ., ಬೆಂಗಳೂರು ಹಾಗೂ ದೇಸಾಯಿ ಫೌಂಡೇಶನ್ ಟ್ರಸ್ಟ್, ಗುಜರಾತರವರ ಸಹಯೋಗದಲ್ಲಿ ಮೊದಲನೇ…
Read More