Slide
Slide
Slide
previous arrow
next arrow

ಆ.31,ಸೆ.1ಕ್ಕೆ ಯಕ್ಷೋತ್ಸವ: ಪ್ರಶಸ್ತಿ ಪ್ರದಾನ, ತಾಳಮದ್ದಲೆ ಸ್ಪರ್ಧೆ

300x250 AD

ಶಿರಸಿ: ಸೋಂದಾ ಸ್ವರ್ಣವಲ್ಲೀ‌ ಮಹಾ‌ ಸಂಸ್ಥಾನದ ಅಂಗ ಸಂಸ್ಥೆಯಾದ ಯಕ್ಷ ಶಾಲ್ಮಲಾದಿಂದ ಆ.31 ಹಾಗೂ‌ ಸೆ.1ರಂದು ಎರಡು‌ ದಿನಗಳ ಯಕ್ಷೋತ್ಸವ ಸ್ವರ್ಣವಲ್ಲೀ‌ ಮಠದಲ್ಲಿ ನಡೆಯಲಿದೆ.

ನಗರದ ಯೋಗ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಯಕ್ಷಶಾಲ್ಮಲಾ ಕಾರ್ಯಾಧ್ಯಕ್ಷ ಆರ್.ಎಸ್.ಹೆಗಡೆ ಭೈರುಂಬೆ ಮಾಹಿತಿ ನೀಡಿ, ಸ್ವರ್ಣವಲ್ಲೀ ಉಭಯ ಶ್ರೀಗಳ ಆಶೀರ್ವಾದದಿಂದ ಯಕ್ಷೋತ್ಸವದ ಪ್ರಯುಕ್ತ ಮಕ್ಕಳಿಗೆ ತಾಳಮದ್ದಲೆ ಸ್ಪರ್ಧೆ, ಪ್ರಶಸ್ತಿ ಪ್ರದಾನ, ಯಕ್ಷಗಾನ, ತಾಳಮದ್ದಲೆ ಕಾರ್ಯಕ್ರಮ ಆಯೋಜಿಸಲಾಗಿದೆ. ಆ.31 ರಂದು ಬೆಳಿಗ್ಗೆ 11 ಘಂಟೆಯಿಂದ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ವಿದ್ಯಾಲಯದ ಮಕ್ಕಳಿಗೆ ತಾಳಮದ್ದಲೆ ಸ್ಪರ್ಧೆ ಪ್ರಾರಂಭವಾಗಲಿದೆ. ಸಂಜೆ 4.30ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶ್ರೀಮಜ್ಜಗದ್ಗುರು‌ ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳ ಹಾಗೂ ಕಿರಿಯ ಶ್ರೀಗಳಾದ ಶ್ರೀಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿಗಳ ಸಾನ್ನಿಧ್ಯ ನೀಡಲಿದ್ದಾರೆ. ಅತಿಥಿಗಳಾಗಿ ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ.ಸುನೀಲಕುಮಾರ, ಯಲ್ಲಾಪುರ ವಿಶ್ವದರ್ಶನ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ, ಧಾತ್ರಿ ಫೌಂಡೇಶನ್ ಅಧ್ಯಕ್ಷ ಶ್ರೀನಿವಾಸ ಭಟ್ಟ ಪಾಲ್ಗೊಳ್ಳಲಿದ್ದಾರೆ ಎಂದರು.

ಪ್ರಶಸ್ತಿ ಪ್ರದಾನ:
ದಿ.ಎಂ.ಎ.ಹೆಗಡೆ ದಂಟ್ಕಲ್ ಪ್ರಶಸ್ತಿಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಕುಮಟಾ ಅವರಿಗೆ ಪ್ರದಾನ ಮಾಡಲಾಗುವುದು ಎಂದರು.
ಸಂಜೆ 6ಘಂಟೆಯಿಂದ “ಸೀತಾಪಹಾರ” ತಾಳಮದ್ದಲೆ ನಡೆಯಲಿದ್ದು, ಹಿಮ್ಮೇಳದಲ್ಲಿ ಶಂಕರ ಭಟ್ಟ ಬ್ರಹ್ಮೂರು, ಗಜಾನನ ಭಟ್ಟ ತುಳಗೇರಿ, ನರಸಿಂಹ ಭಟ್ಟ ಹಂಡ್ರಮನೆ, ಪ್ರಸನ್ನ ಹೆಗ್ಗಾರ್, ಅರ್ಥಧಾರಿಗಳಾಗಿ ಜಿ.ಎಲ್.ಹೆಗಡೆ ಕುಮಟಾ, ದಿವಾಕರ ಕೆರೆಹೊಂಡ, ಪವನ ಕಿರಣಕೆರೆ, ಎಂ.ಎನ್.ಹೆಗಡೆ ಹಳವಳ್ಳಿ, ಮಹೇಶ ಭಟ್ಟ ಇಡಗುಂದಿ ಭಾಗವಹಿಸಲಿದ್ದಾರೆ ಎಂದರು.
ಸೆ.1ರಂದು ಬೆಳಿಗ್ಗೆ 10.30ರಿಂದ ತಾಳಮದ್ದಲೆ ಸ್ಪರ್ಧೆ‌‌ ಮುಂದುವರಿಯಲಿದ್ದು, ಸಂಜೆ 4.30 ರಿಂದ ನಡೆಯುವ ಸಮಾರೋಪ ಸಮಾರಂಭದಲ್ಲಿ ಶ್ರೀಮಜ್ಜಗದ್ಗುರು‌ ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳ ಹಾಗೂ ಕಿರಿಯ ಶ್ರೀಗಳಾದ ಶ್ರೀಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿಗಳ ಸಾನ್ನಿಧ್ಯ ನೀಡಲಿದ್ದಾರೆ.
ಅತಿಥಿಗಳಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಅನಂತಮೂರ್ತಿ ಚಾರಿಟಬಲ್‌ನ ಅಧ್ಯಕ್ಷ ಅನಂತಮೂರ್ತಿ ಹೆಗಡೆ, ಕೆ.ಎಂ.ಎಫ್ ಉಪಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಉಪಸ್ಥಿತರಿರಲಿದ್ದಾರೆ.

ಬಹುಮಾನ ವಿತರಣೆ, ಯಕ್ಷಗಾನ:
ದಿ.ಹೊಸ್ತೋಟ ಮಂಜುನಾಥ ಭಾಗವತ ಪ್ರಶಸ್ತಿಯನ್ನು ಯಕ್ಷಗಾನ ಕಲಾವಿದ ಕೆ.ಜಿ.ಮಂಜುನಾಥ ಕೆಳಮನೆ ಅವರಿಗೆ ಪ್ರದಾನ ಮಾಡಲಾಗುತ್ತದೆ. ಸಂಜೆ 6.30 ರಿಂದ “ಪಟ್ಟಾಭಿಷೇಕ” ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ. ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಅನಂತ ಹೆಗಡೆ ದಂತಳಿಕೆ, ಅನಿರುದ್ಧ ಬೆಣ್ಣೆಮನೆ, ವಿಘ್ನೇಶ್ವರ ಕೆಸರಕೊಪ್ಪ, ಮುಮ್ಮೇಳದಲ್ಲಿ ಕೆ.ಜಿ.ಮಂಜುನಾಥ, ಶ್ರೀಧರ ಹೆಗಡೆ ಚಪ್ಪರಮನೆ, ಸುಬ್ರಹ್ಮಣ್ಯ ಯಲಗುಪ್ಪ, ಉದಯ ಹೆಗಡೆ ಕಡಬಾಳ, ಕಾರ್ತಿಕ ಚಿಟ್ಟಾಣಿ, ಮಂಜುನಾಥ ಹೆಗಡೆ ಹಿಲ್ಲೂರು, ದೀಪಕ ಕುಂಕಿ, ಶ್ರೀಧರ ಅಣಲಗಾರ ಪಾತ್ರನಿರ್ವಹಿಸಲಿದ್ದಾರೆ ಎಂದರು.

300x250 AD

ತಾಳಮದ್ದಲೆ ‌ಸ್ಪರ್ಧೆ:
ಯಕ್ಷ ಶಾಲ್ಮಲಾ ಕಾರ್ಯದರ್ಶಿ ನಾಗರಾಜ ಜೋಶಿ ಸೋಂದಾ, ಯುವ ಪೀಳಿಗೆಗೆ ಯಕ್ಷಗಾನದ ಕುರಿತು ಪರಿಚಯ ಮತ್ತು ಆಸಕ್ತಿ ಮೂಡಿಸಲು ಕಳೆದ ಐದಾರು ವರ್ಷಗಳಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆ ಮಕ್ಕಳಿಗೆ ಉತ್ತರಕನ್ನಡ ಜಿಲ್ಲಾ ಮಟ್ಟದ ತಾಳಮದ್ದಲೆ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದ್ದು, ಪ್ರತಿ ವರ್ಷ 25ಕ್ಕೂ ಅಧಿಕ ತಂಡಗಳು ಭಾಗವಹಿಸಿ, ನಮ್ಮ ಕನಸಿಗೆ ಶಕ್ತಿ ತುಂಬುತ್ತಿದ್ದಾರೆ ಎಂದರು.
ಈ ವರ್ಷದಿಂದ 5 ರಿಂದ 7 ತರಗತಿಯವರೆಗೆ ಕಿರಿಯರ ವಿಭಾಗ, 8 ರಿಂದ ಪದವಿಪೂರ್ವ ಕಾಲೇಜುವರೆಗೆ ಹಿರಿಯರ ಹಾಗೂ ನಿರಂತರ ತರಬೇತಿ ಪಡೆಯುವ‌ ಸಂಸ್ಥೆಗಳ ವಿದ್ಯಾರ್ಥಿ ವಿಭಾಗ ಎಂದು ಮೂರು ವಿಭಾಗ ಮಾಡಲಾಗಿದೆ. ಈ ವರ್ವೂ ಸುಮಾರು 30 ತಂಡಗಳು ಭಾಗವಹಿಸುವ ನಿರೀಕ್ಷೆ ಇವೆ. ಈವರೆಗೆ 27 ತಂಡಗಳು ನೋಂದಣಿ ಮಾಡಿಕೊಂಡಿದೆ ಎಂದೂ ಹೇಳಿದರು.
ಯಕ್ಷ ಶಾಲ್ಮಲಾ ಸದಸ್ಯ ಪ್ರವೀಣ ಹೆಗಡೆ ವಂದಿಸಿದರು.


ಇನ್ನು‌ ಯಕ್ಷ ಶಾಲ್ಮಲಾ ಸಂಸ್ಥೆ ಕಳೆದ ಹತ್ತೊಂಬತ್ತು ವರ್ಷಗಳಿಂದ‌ ಕಾರ್ಯ‌ ಮಾಡುತ್ತಿದೆ. ಸ್ವರ್ಣವಲ್ಲೀ‌ಮಠದ ಅಂಗ ಸಂಸ್ಥೆ. ಶ್ರೀಗಳೇ ಗೌರವಾಧ್ಯಕ್ಷರು. ಯಕ್ಷಗಾನ ಕ್ಷೇತ್ರದಲ್ಲಿ ಶಂಶೋಧನೆ, ಗುಣಮಟ್ಟ ಉಳಿಸುವ ಪ್ರಯತ್ನ, ಪ್ರಕಟನೆ, ಪ್ರದರ್ಶನ, ಸ್ಪರ್ಧೆ ನಡೆಸುತ್ತಿದೆ. ಕಳೆದ ವರ್ಷ ವಿಶ್ವೇಶತೀರ್ಥ ಪ್ರಶಸ್ತಿ‌ ಕೂಡ ಬಂದಿದೆ.–
ನಾಗರಾಜ್ ಜೋಶಿ ಸೋಂದಾ, ಕಾರ್ಯದರ್ಶಿ

Share This
300x250 AD
300x250 AD
300x250 AD
Back to top