ಶಿರಸಿ: ಉತ್ತರ ಕನ್ನಡ ಜಿಲ್ಲೆಯ 6 ತಾಲೂಕುಗಳ ನೆರೆ ಪೀಡಿತ ಪ್ರದೇಶಗಳಲ್ಲಿ ತೀವ್ರ ತೊಂದರೆಗೊಳಗಾದ ಕುಟುಂಬಗಳಿಗೆ ಸ್ಕೊಡ್‌ವೆಸ್ ಸಂಸ್ಥೆ, ಅಜೀಮ್ ಪ್ರೇಮ್‌ಜಿ ಫಿಲಾನ್ಥೊಪಿಕ್ ಇನಿಶಿಯೇಟಿವ್ಸ್ ಪ್ರೈ. ಲಿ., ಬೆಂಗಳೂರು ಹಾಗೂ ದೇಸಾಯಿ ಫೌಂಡೇಶನ್ ಟ್ರಸ್ಟ್, ಗುಜರಾತರವರ ಸಹಯೋಗದಲ್ಲಿ ಮೊದಲನೇ ಹಂತದ ನೆರೆ ಪರಿಹಾರ ಕಿಟ್‌ಗಳನ್ನು ವಿತರಿಸಲಾಯಿತು.
ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಅಧಿಕಾರಿಗಳ ಸಹಕಾರದೊಂದಿಗೆ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಶಿರಸಿ ಮತ್ತು ಸಿದ್ದಾಪುರ ತಾಲೂಕುಗಳಲ್ಲಿ ಇಲಾಖೆಯಿಂದ ಗುರುತಿಸಲಾದ ನೆರೆಪೀಡಿತರ ಪಟ್ಟಿಯನ್ನಾಧರಿಸಿ ತೀವ್ರವಾಗಿ ಭಾದೆಗೊಳಗಾದ 460 ಕುಟುಂಬಗಳಿಗೆ ದಿನಸಿಗಳು, ಪಾತ್ರೆಗಳು, ಹಾಸಿಗೆ ಪರಿಕರಗಳು, ಬ್ಲಾಂಕೆಟ್, ಟವೆಲ್, ತಾಡಪಾಲಿನ್, ಸ್ಯಾನಿಟರಿ ಕಿಟ್‌ಗಳು, ಸೀರೆ, ಟೀ ಶರ್ಟ್ ಸೇರಿದಂತೆ ಸುಮಾರು 23 ವಸ್ತುಗಳಿರುವ ಕಿಟ್‌ಗಳನ್ನು ನೆರೆ ಪೀಡಿತ ಪ್ರದೇಶಗಳಿಗೆ ತೆರಳಿ ವಿತರಿಸಲಾಯಿತು.
ಸ್ಥಳ ಭೇಟಿ ಮಾಡಿದ ಶಿರಸಿ ಸಿದ್ದಾಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ನೆರೆ ಪರಿಹಾರ ಚಟುವಟಿಕೆಗಳಲ್ಲಿ ತೊಡಗಿದ ಸ್ಕೊಡ್‌ವೆಸ್ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ನೆರೆ ಪೀಡಿತ ಪ್ರದೇಶಗಳಲ್ಲಿ ಹಮ್ಮಿಕೊಂಡಿರುವ ನೆರೆ ಪರಿಹಾರ ಕಿಟ್ ವಿತರಣಾ ಕಾರ್ಯಕ್ರಮಗಳ ಬಗ್ಗೆ ಸ್ಕೊಡ್‌ವೆಸ್ ಸಂಸ್ಥೆಯನ್ನು ಅಭಿನಂದಿಸಿದರು.