Slide
Slide
Slide
previous arrow
next arrow

ಭೈರವಿ ಮಹಿಳಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ಲಕ್ಷ್ಮಿಪೂಜೆ, ಅರಿಶಿಣ ಕುಂಕುಮ ವಿತರಣೆ

300x250 AD

ಹೊನ್ನಾವರ: ತಾಲೂಕಿನ ಭೈರವಿ ಮಹಿಳಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಕೆಳಗಿನೂರಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಯಶಸ್ವಿಯಾಗಿ ನಡೆಯಿತು.

ಸಹಕಾರಿಯ ಅಧ್ಯಕ್ಷರಾದ ಶ್ರೀಮತಿ ಶಾಂತಿ ಮಾದೇವ ಗೌಡ ಸಭೆಯ ಅಧ್ಯಕ್ಷತೆ ವಹಿಸಿ 100 ಪ್ರತಿಶತ ಮರುಪಾವತಿ ಮೂಲಕ ಸಂಘದ ಬೆಳವಣಿಗೆಗೆ ಸಹಕಾರ ನೀಡುತ್ತಿರುವುದಕ್ಕೆ ಸರ್ವ ಸದಸ್ಯರಿಗೆ ಅಭಿನಂದಿಸಿದರು. ಸಂಘ ರಚನೆಯಾಗಿ ಕೇವಲ 2 ವರ್ಷದಲ್ಲಿ ರೂ.101.41 ಲಕ್ಷ ದುಡಿಯುವ ಬಂಡವಾಳವನ್ನು ಹೊಂದಿದ್ದು ರೂ. 109.00ಲಕ್ಷ ಸಾಲ ವಿತರಣೆ ಮಾಡಿ ವರದಿ ಸಾಲಿನಲ್ಲಿ ರೂ. 2.21 ಲಕ್ಷ ಲಾಭ ಗಳಿಸಿದೆ. ಸದಸ್ಯರಿಗೆ ಶೇ 10.00 ರಷ್ಟು ಡಿವಿಡೆಂಡ್ ಘೋಷಣೆ ಮಾಡಲಾಗಿದೆ. ತಾಲ್ಲೂಕಿನ ಎಲ್ಲಾ ಭಾಗದಲ್ಲೂ ಮಹಿಳಾ ಸ್ವಸಹಾಯ ಗುಂಪುಗಳ ರಚನೆ ಮತ್ತು ಗುಂಪು ಸಾಲ ನೀಡುವ ಮೊತ್ತದ ಬಗ್ಗೆ ಸದಸ್ಯರು ಆಗ್ರಹಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಮಾರಿ ಪವಿತ್ರಾ ಗೌಡ ಸಂಘದ ವಾರ್ಷಿಕ ವರದಿಯನ್ನು ಸದಸ್ಯರಿಗೆ ಸಂಕ್ಷಿಪ್ತವಾಗಿ ವಿವರಿಸಿದರು ಉಪಾಧ್ಯಕ್ಷರಾದ ಶ್ರೀಮತಿ ಮಂಜುಳಾ ಗೌಡ ಹಾಗೂ ನಿರ್ದೇಶಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಲಕ್ಷ್ಮಿ ಪೂಜೆ ಮತ್ತು ಅರಶಿಣ ಕುಂಕುಮ ವಿತರಣೆ – ಸಹಕಾರಿ ಸಂಘದ ವಾರ್ಷಿಕ ಮಹಾ ಸಭೆಯ ನಂತರ ಶ್ರೀ ಲಕ್ಷ್ಮಿಪೂಜೆ ಹಾಗೂ ಮುತ್ತೈದೆಯರಿಗೆ ಅರಿಶಿಣ ಕುಂಕುಮ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಶಾಖಾ ಮಠ ಮಿರ್ಜಾನ್‌ದ ಬ್ರಹ್ಮಚಾರಿ ಶ್ರೀಗಳಾದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರು ಆಶೀರ್ವಚನ ನೀಡಿ ಭೈರವಿ ಮಹಿಳಾ ಸಹಕಾರಿ ಸಂಘ ಹೊನ್ನಾವರ ಜಿಲ್ಲೆಯಲ್ಲಿ ಮತ್ತಷ್ಟು ಮಹಿಳಾ ಸಹಕಾರಿ ಸಂಘ ರೂಪುಗೊಳ್ಳಲು ಪ್ರೇರಣೆಯಾಗಿದೆ, ಸಹಕಾರಿ ಸಂಘ ಕೇವಲ ಹಣಕಾಸಿನ ವ್ಯವಹಾರಕ್ಕೆ ಸೀಮಿತವಾಗದೆ ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳ ಮೂಲಕವೂ ಸಮಾಜದಲ್ಲಿ ಬದಲಾವಣೆ ತರಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದರು ಸಹಕಾರಿ ಸಭಿವೃದ್ದಿ ಅಧಿಕಾರಿ ಶ್ರೀಮತಿ ಸರಿತಾ ಬೇತಾಳಕರ ರವರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top