ಶಿರಸಿ : ಸಪ್ತಕ ಬೆಂಗಳೂರು ಇವರು ಶಿರಸಿಯ ರಂಗಧಾಮದಲ್ಲಿ ಆಯೋಜಿಸಿದ್ದ ‘ಮೇಘ ಮಾಲಾ’ ವಿಶೇಷ ಸಂಗೀತ ಕಾರ್ಯಕ್ರಮ ಕಲಾಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿ ಯಾಗಿದೆ.
ಗಾಯಕಿ ವಿಭಾ ಹೆಗಡೆ ಯಲ್ಲಾಪುರ ತಮ್ಮ ಸಂಗೀತ ಕಛೇರಿ ನಡೆಸಿಕೊಡುತ್ತ ಆರಂಭದಲ್ಲಿ ರಾಗ್ ಮೇಘ ನಲ್ಲಿ ವಿಸ್ತಾರವಾಗಿ ಹಾಡಿದರು. ನಂತರದಲ್ಲಿ ರಾಗ್ ಟುಮರಿಯಲ್ಲಿ ತರಾನಾವನ್ನು ಸುಂದರವಾಗಿ ಪ್ರಸ್ತುತಗೊಳಿಸಿದಾಗ ಸಭೆ ಕರತಾಡನದ ಸುರಿಮಳೆ ಗೈದಿದ್ದು ಯಶಸ್ಸು ಸಾಕ್ಷೀಕರಿಸಿದೆ. ನಂತರದಲ್ಲಿ ಭಕ್ತಿ ಪ್ರಧಾನ ಹಾಡು ನಾರಾಯಣತೇ ನಮೋ ನಮೋ ಹಾಡಿ ತಮ್ಮ ಕಚೇರಿ ಸಮಾಪ್ತಿಗೊಳಿಸಿದರು.
ವಿಭಾರವರ ಗಾನಕ್ಕೆ ಹಾರ್ಮೋನಿಯಂನಲ್ಲಿ ಸತೀಶ್ ಹೆಗ್ಗರ್, ತಬಲಾನಲ್ಲಿ ಗಣೇಶ್ ಗುಂಡ್ಕಲ್ ಸಾಥ್ ನೀಡಿದರು. ನಂತರದಲ್ಲಿ ಸಂತೂರ ವಾದನದಲ್ಲಿ ಮುಂಬಯಿಯ ಸತ್ಯೇಂದ್ರ ಸಿಂಘ್ ಸೋಲಂಕಿ ಪಾಲ್ಗೊಂಡು ಸಂತೂರ್ ಲೋಕ ಸೃಷ್ಟಿಸಿದರು.ಇವರಿಗೆ ತಬಲಾನಲ್ಲಿ ರಾಮೇಂದ್ರ ಸೋಲಂಕಿ ಭೂಪಾಲ್ ಸಹಕರಿಸಿದರು. ಆರಂಭದಲ್ಲಿ ಸಂಗೀತ ಕಾರ್ಯಕ್ರಮವನ್ನು ವೈಶಾಲಿ ವಿ.ಪಿ. ಹೆಗಡೆ ದೀಪಬೆಳಗಿಸುವ ಮೂಲಕ ಉದ್ಘಾಟಿಸಿದರು.
ಸಪ್ತಕದ ಜಿ.ಎಸ್. ಹೆಗಡೆ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.