ಕಾರವಾರ: ಇಲ್ಲಿನ ರೋಟರಿ ಕ್ಲಬ್‌ನ ಇಂಟರ‍್ಯಾಕ್ಟ್ ಸಂಸ್ಥೆಯ ಪದಗ್ರಹಣ ಸಮಾರಂಭ ನಗರದ ಹಿಂದೂ ಹೈಸ್ಕೂಲ್‌ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ರೋಟರಿ ಕ್ಲಬ್‌ನ ಶಿಷ್ಟಾಚಾರದಂತೆ ಪ್ರಾರಂಭಿಸಲಾಯಿತು. ಶಿಕ್ಷಕಿ ವನಿತಾ ಶೇಟ್ ಪ್ರಾರ್ಥನೆ ಹಾಗೂ ದೀಪ ಬೆಳಗುವದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಾರಂಭದದಲ್ಲಿ ಮುಖ್ಯಾಧ್ಯಾಪಕ ಅರುಣ ರಾಣೆಯವರು ಎಲ್ಲರನ್ನು ಸ್ವಾಗತಿಸುತ್ತಾ, 2020ರಿಂದ ಹಿಂದೂ ಹೈಸ್ಕೂಲ್‌ನಲ್ಲಿ ಇಂರ‍್ಯಾಕ್ಟ್ ಸಂಸ್ಥೆ ನಡೆದು ಬಂದ ದಾರಿಯನ್ನು ವಿವರಿಸಿದರು. ಇಂಟರ‍್ಯಾಕ್ಟ್ ಚೇರಮನ್ ಅರ್ಚನಾ ಶೆಟ್ಟಿ ಇಂರ‍್ಯಾಕ್ಟ್ ಕುರಿತಾದ ಮಾಹಿತಿಯನ್ನು ವಿವರಿಸಿದರು. ಪದಗ್ರಹಣಾಧಿಕಾರಿಯಾಗಿದ್ದ ಲಿಯೋ ಲೂಯಿಸ್ ನೂತನ ಇಂಟರ‍್ಯಾಕ್ಟ್ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಇಂಟರ‍್ಯಾಕ್ಟ್ ವಿಧಿಯನ್ನು ಭೋಧಿಸಿ, ಸಂಸ್ಥೆಯಲ್ಲಿ ಮಾಡಬೇಕಾದ ಕೆಲವು ಮುಖ್ಯ ಕಾರ್ಯಕ್ರಮಗಳನ್ನು ವಿವರಿಸಿದರು.
ರೋಟರಿ ಕ್ಲಬ್ ಅಧ್ಯಕ್ಷ ಹಿಂದೂ ಹೈಸ್ಕೂಲ್‌ನ ಹಳೇ ವಿದ್ಯಾರ್ಥಿ ರಾಘವೇಂದ್ರ ಜಿ.ಪ್ರಭು ಮಾತನಾಡಿ, ಕ್ಲಬ್‌ನ ಧ್ಯೇಯೋದ್ದೇಶಗಳನ್ನು ವಿವರಿಸಿದರು. ರೋಟರಿ ಕಾರ್ಯದರ್ಶಿ ಗುರುದತ್ತ ಬಂಟ ಮಾತನಾಡಿ, ಇಂರ‍್ಯಾಕ್ಟ್ ಕ್ಲಬ್ ನಡೆಸುವ ಕುರಿತು ಮಾಹಿತಿ ನೀಡಿ, ಪ್ರತಿ ತಿಂಗಳು ಸಭೆ ನಡೆಸಲು ಸೂಚಿಸಿದರು. ಇಂಟರ‍್ಯಾಕ್ಟ್ ಕ್ಲಬಿಗೆ ನೂತನ ಅಧ್ಯಕ್ಷರಾಗಿ ಪ್ರಜ್ವಲ ಬಂಡಿವಾಡ, ಉಪಾಧ್ಯಕ್ಷರಾಗಿ ಪುರಸ್ಸರ್ ಡಿ.ಗಾಂವಕರ, ಕಾರ್ಯದರ್ಶಿಯಾಗಿ ಅನುಷಾ ಬಾಂದೇಕರ, ಖಜಾಂಚಿಯಾಗಿ ಕಾವೇರಿ ನಾಯಕ ಅವರನ್ನು ನೇಮಿಸಲಾಯಿತು.
ಡಾ.ಸಮಿರಕುಮಾರ ನಾಯಕ ಪದಗ್ರಹಣಾಧಿಕಾರಿ ಲಿಯೋ ಲೂವಿಸ್ ಅವರನ್ನು ಸಭೆಗೆ ಪರಿಚಯಿಸಿದರು. ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಿದ್ದು, 15 ವಿರ್ದ್ಯಾಥಿಗಳು ಭಾಗವಹಿಸಿದ್ದರು. ಅವರಲ್ಲಿ ಪ್ರಥಮ ಬಹುಮಾನ ಪ್ರೇಮ ವೈದ್ಯ ದ್ವೀತಿಯ ಮಾಧವ ನಾಯ್ಕ ಹಾಗೂ ಕಾವೇರಿ ನಾಯಕ ತೃತೀಯ ಬಹುಮಾನ ಪಡೆದುಕೊಂಡರು. ಬಹುಮಾನವನ್ನು ಹಿಂದೂ ಹೈಸ್ಕೂಲ್ ಹಳೆಯ ವಿದ್ಯಾರ್ಥಿ ಸುರೇಶ ನಾಯ್ಕ ಪ್ರಾಯೋಜಿಸಿದ್ದರು. ಕಾರ್ಯಕ್ರಮದಲ್ಲಿ ರಾಮಚಂದ್ರ ಪಡವಳಕರ, ಗುರು ಹೆಗಡೆ, ಹಳೇ ವಿದ್ಯಾರ್ಥಿ ಅಮರನಾಥ ಶೆಟ್ಟಿ ಹಾಗೂ ರಾಜಶ್ರೀ ಪ್ರಭು ಉಪಸ್ಥಿತರಿದ್ದರು.
ಹಿಂದೂ ಹೈಸ್ಕೂಲ್‌ನ ಮುಖ್ಯಾಧ್ಯಾಪಕ ಅರುಣ ರಾಣೆಯವರಿಗೆ ರೋಟರಿ ಕ್ಲಬ್ ವತಿಯಿಂದ ಶಾಲು ಹೂದಿಸಿ ಸನ್ಮಾನಿಸಲಾಯಿತು. ಶಾಲಾ ಶಿಕ್ಷಕಿ ಶಿಲ್ಪಾ ಲಕ್ಕುಮನೆ ವಂದನಾರ್ಪಣೆಗೈದರು. ಕಾರ್ಯಕ್ರಮವನ್ನು ಡಾ.ಸಮೀರಕುಮಾರ ನಾಯಕ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು.