ಶಿರಸಿ: ತಾಲೂಕಿನ ಸುಧಾಪುರ ಕ್ಷೇತ್ರದಲ್ಲಿ ಮತ್ತು ಮುಂಡಿಗೆಕೆರೆ ಪಕ್ಷಿಧಾಮದ ಸರಹದ್ದಿನಲ್ಲಿ ಮುಂಗಾರು ಪೂರ್ವ ಮಳೆ 213.3 ಮಿಮೀ ಆಗಿರುತ್ತದೆ.2015 ರಿಂದ ಪ್ರತಿವರ್ಷ ಜೂನ್ 1 ರಿಂದ 30ರ ವರೆಗೆ ಬಿದ್ದ ಮಳೆಯನ್ನು ಅವಲೋಕಿಸಿದಾಗ ,ಈ ವರ್ಷ ಅತೀ ಕಡಿಮೆ ಮಳೆಯಾಗಿದೆ.ಕಳೆದ 7 ವರ್ಷಗಳ ಮಳೆ ಮಾಹಿತಿಯನ್ನು ಆಧರಿಸಿ ನೋಡಿದಾಗ ಈ ವರ್ಷ ಕೇವಲ175.3 ಮಿಮೀ ಆಗಿರುತ್ತದೆ.
2015 ರಲ್ಲಿ. 455.8 ಮಿಮೀ., 2016ರಲ್ಲಿ.341.3 ಮಿಮೀ., 2017ರಲ್ಲಿ.430.00ಮಿಮೀ., 2018ರಲ್ಲಿ .507.8 ಮಿಮೀ., 2019ರಲ್ಲಿ.332.5ಮಿಮೀ., 2020ರಲ್ಲಿ .441.9ಮಿಮೀ., 2021 ರಲ್ಲಿ 601.4ಮಿಮೀ., 2022ರಲ್ಲಿ.175.3 ಮಿಮೀ.ಮಳೆ ಬಿದ್ದಿದೆ.
ಮುಂಡಿಗೆ ಕೆರೆ ಪಕ್ಷಿಧಾಮದಲ್ಲಿ 2015 ರಿಂದ ಸೋಂದಾ ಜಾಗೃತ ವೇದಿಕೆ.(ರಿ,) ಅಧ್ಯಯನಕ್ಕೋಸ್ಕರ ಬಿದ್ದ ಮಳೆಯನ್ನು ದಾಖಲಿಸುತ್ತಾ ಬಂದಿದೆ.ಅದರನ್ವಯ ಈ ಮಾಹಿತಿಯನ್ನು ನೀಡಲಾಗಿದೆ.