• Slide
    Slide
    Slide
    previous arrow
    next arrow
  • ಹಂಗೇರಿಯಲ್ಲಿ ಶಿರಸಿ ಕಲಾವಿದನ ಕಲಾಕೃತಿ ಪ್ರದರ್ಶನ

    300x250 AD

    ಶಿರಸಿ:ಹಂಗೇರಿ ದೇಶದ ಬುದ್ದಪೆಸ್ಟ್ ನಲ್ಲಿ ನಡೆಯುತ್ತಿರುವ ಅಂತರ್ ರಾಷ್ಟ್ರೀಯ ಕಲಾಪ್ರದರ್ಶನದಲ್ಲಿ ಜುಲೈ 1 ರಿಂದ 15ರ ತನಕ ಶಿರಸಿಯ ಯುವ ಕಲಾವಿದ ಪ್ರಕಾಶ್ ನಾಯಕ ಅವರ ಕಲಾಕೃತಿಗಳು ಪ್ರದರ್ಶನಗೊಳ್ಳುತ್ತಿವೆ. 8 ಭಾರತೀಯ ಕಲಾವಿದರು,9 ವಿದೇಶೀ ಕಲಾವಿದರು ಸೇರಿದಂತೆ ಒಟ್ಟು 17 ಕಲಾವಿದರ ಕಲಾಕೃತಿಗಳು ಇಲ್ಲಿ ಪ್ರದರ್ಶನ ಆಗುತ್ತಿವೆ‌.

    ಈಗಾಗಲೇ ಐದು ಸಲ ವಿದೇಶಗಳಲ್ಲಿ ಕಲಾಪ್ರದರ್ಶನ ಮಾಡಿರುವ ಪ್ರಕಾಶ್ ನಾಯಕರಿಗೆ ಇದು ಆರನೇ ಅಂತರ್ ರಾಷ್ಟ್ರೀಯ ಕಲಾ ಪ್ರದರ್ಶನ. ಗದಗದ ವಿಜಯ ಕಲಾಮಂದಿರದಲ್ಲಿ ದೃಶ್ಯ ಕಲೆಯಲ್ಲಿ ಮಾಸ್ಟರ್ ಡಿಗ್ರಿ ಮಾಡಿರುವ ಪ್ರಕಾಶ್ ಸ್ಯಾನ್ ಫ್ರಾನ್ಸಿಸ್ಕೊ, ದುಬೈ, ಲಂಡನ್, ಜಕಾರ್ತ,ಮತ್ತು ಸಿಂಗಪುರ್ ಗಳಲ್ಲಿ ಈಗಾಗಲೇ ಕಲಾಪ್ರದರ್ಶನ ನಡೆಸಿದ್ದಾರೆ. ಅವರ ಕಲಾ ಪ್ರಯಾಣ ಯಶಸ್ಸು ಕಾಣಲಿ ಎಂದು ಉತ್ತರ ಕನ್ನಡ ಜಿಲ್ಲಾ ಚಿತ್ರಕಲಾ ಪರಿಷತ್ತು, ಪ್ರಧಾನ ಕಾರ್ಯದರ್ಶಿ ಜಿ.ಎಂ.ಬೊಮ್ನಳ್ಳಿ ಶುಭ ಹಾರೈಸಿದ್ದಾರೆ

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top