ಶಿರಸಿ: ನರೆಬೈಲಿನ ‘ಇಲಕ್ಟೋರಲ್ ಲಿಟರಸಿ ಕ್ಲಬ್’ ಮಿಯಾರ್ಡ್ಸ್ ಚಂದನ ಆಂಗ್ಲ ಮಾಧ್ಯಮ ಶಾಲೆ ಇದರ ಅಡಿಯಲ್ಲಿ ಜು.01 ರಂದು ಶಾಲಾ ಸಂಸತ್ತಿನ ಚುನಾವಣೆ ಮತ್ತು ಆಯ್ಕೆಯ ಪ್ರಕ್ರಿಯೆ ನಡೆಯಿತು. 6ನೇ ತರಗತಿಯಿಂದ 10ನೇ ತರಗತಿಯ ವರೆಗಿನ ವಿದ್ಯಾರ್ಥಿಗಳಿಗೆ ಮತದಾನ ನಡೆಸಿ ಶಾಲಾ ಸಂಸತ್ತಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು. ವಿದ್ಯಾರ್ಥಿಗಳಿಗೆ ಮತದಾನದ ಪ್ರಕ್ರಿಯೆಗಳ ಕುರಿತು ಅರಿವು ಮೂಡಿಸಲು ಶಾಲಾ ಸಂಸತ್ತಿನ ಪ್ರಕ್ರಿಯೆ ಸಹಕಾರಿಯಾಯಿತು. ಶಾಲಾ ಪ್ರಧಾನ ಮಂತ್ರಿಯಾಗಿ 10ನೇ ತರಗತಿಯ ಅನಘ ಹೆಗಡೆ , 10ನೇ ತರಗತಿಯ ಸುಮಂತ್ ಹೆಗಡೆ ಉಪ ಪ್ರಧಾನಿಯಾಗಿ ಆಯ್ಕೆಯಾದರು. ಉಳಿದ ಮಂತ್ರಿ ಮಂಡಳದ ರಚನೆ ಮತ್ತು ಪ್ರತಿಜ್ಞಾ ವಿಧಿಯ ಭೋಧನೆ ಜು.5 ರಂದು ನಡೆಯಲಿದೆ.