Slide
Slide
Slide
previous arrow
next arrow

TSS ಪ್ರಧಾನ ವ್ಯವಸ್ಥಾಪಕರ ರಾಜೀನಾಮೆ ವಿಚಾರ; ಆಡಳಿತ ಮಂಡಳಿ ಹೇಳಿದ್ದೇನು ? ಇಲ್ಲಿದೆ ಮಾಹಿತಿ ! 

300x250 AD

ಶಿರಸಿ: ಕಳೆದ ಕೆಲವು ದಿನದ ಹಿಂದೆ ಟಿಎಸ್ಎಸ್ ಮುಖ್ಯಕಾರ್ಯನಿರ್ವಾಹಕ ರವೀಶ ಹೆಗಡೆ ಸಾಮಾಜಿಕ ಜಾಲತಾಣದಲ್ಲಿ ರಾಜೀನಾಮೆ ನೀಡುವ ಕುರಿತಾಗಿ ಬರಹವೊಂದನ್ನು ಪ್ರಕಟಿಸಿದ್ದರು. ಆ ಕುರಿತು ಸೋಮವಾರ ನಡೆದ ಟಿಎಸ್ಎಸ್ ಆಡಳಿತ ಮಂಡಳಿ ಸಭೆಯ ನಿರ್ಧಾರ ಪ್ರಕಟವಾಗಿದ್ದು, ಅದು ಈ ರೀತಿ ಇದೆ. 

ಇಂದು, ಸೋಮವಾರ  ಸಂಜೆ 4.30 ಘಂಟೆಗೆ ಕರೆಯಲಾದ ಟಿ.ಎಸ್.ಎಸ್.ನ ಆಡಳಿತ ಮಂಡಳಿ ಸಭೆಯಲ್ಲಿ ಸಂಘದ ಪ್ರಧಾನ ವ್ಯವಸ್ಥಾಪಕರಾದ ಶ್ರೀ ರವೀಶ ಅಚ್ಯುತ ಹೆಗಡೆ ಇವರು ಸಾಮಾಜಿಕ ಜಾಲತಾಣದಲ್ಲಿ ಸಂಘದಿಂದ ಅವಧಿ ಪೂರ್ವ ನಿವೃತ್ತಿ ಅಥವಾ ರಾಜೀನಾಮೆ ನೀಡುವ ಕುರಿತು ನಿರ್ಣಯಿಸಿದ್ದೇನೆ ಎಂದು ಪ್ರಸಾರ ಮಾಡಿರುವ ವಿಷಯದ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು. ಶ್ರೀ ರವೀಶ ಹೆಗಡೆ ಅವರು ಸಾರ್ವಜನಿಕವಾಗಿ ಪತ್ರಿಕಾ ಹೇಳಿಕೆ ಮುಖಾಂತರ ಸ್ವಯಂ ನಿವೃತ್ತಿ ವಿಚಾರವಾಗಿ ಆಡಳಿತ ಮಂಡಳಿಯವರು ಯೋಚಿಸಬಹುದು ಎಂದು ನೀಡಿರುವ ಹೇಳಿಕೆಯನ್ನು ಸಹ ಪರಿಗಣಿಸಲಾಯಿತು. ಕಳೆದ17 ವರ್ಷಗಳಿಂದ ಅವರು ಸಂಘದ ಪ್ರಧಾನ ವ್ಯವಸ್ಥಾಪಕರಾಗಿ ಸಂಘದ ಅಭಿವೃದ್ಧಿಯ ಕುರಿತು ಶ್ರಮಿಸಿದ್ದನ್ನು ಶ್ಲಾಘಿಸಲಾಯಿತು. ಪ್ರಧಾನ ವ್ಯವಸ್ಥಾಪಕರು ತನ್ನ ನಿರ್ಗಮನದ ಕುರಿತು ಆಡಳಿತ ಮಂಡಳಿಯ ವಿವೇಚನೆಗೆ ಬಿಟ್ಟಿದ್ದರಿಂದ ಅವರ ರಾಜೀನಾಮೆ ನಿರ್ಧಾರವನ್ನು ಅಂಗೀಕರಿಸುವ ಮೂಲಕ ಅವರ ನಿರ್ಧಾರವನ್ನುಗೌರವಿಸುವುದು ಸೂಕ್ತ ಎಂದು ಸರ್ವಾನುಮತದಿಂದ ನಿರ್ಧರಿಸಿ ಈ ವಿಷಯದ ಕುರಿತುಅವರಿಗೆ ತಿಳುವಳಿಕೆ ಪತ್ರ ನೀಡಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಕುರಿತು ಠರಾಯಿಸಲಾಯಿತು ಎಂದು ಟಿಎಸ್ಎಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

300x250 AD
Share This
300x250 AD
300x250 AD
300x250 AD
Back to top