ಶಿರಸಿ: ಸದಸ್ಯರ ವಿಶ್ವಾಸ, ಪ್ರೋತ್ಸಾಹದಿಂದ ಸಂಘ ಇಷ್ಟು ಬೆಳೆದಿದೆ. ಚಪ್ಪರದಿಂದ ಉಪ್ಪರಿಗೆಗೆ ಎಲ್ಲರ ಸಹಕಾರದಿಂದ ಬಂದಿದ್ದೇವೆ ಎಂದು ಟಿಎಂಎಸ್ ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ ಹೇಳಿದರು.
ಇಲ್ಲಿನ ಟಿಎಂಎಸ್ ಪ್ರಧಾನ ಕಚೇರಿಯಲ್ಲಿ ಗುರುವಾರ ನಡೆಸಿದ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಡಿಕೆ, ಕಾಳುಮೆಣಸು ಬೆಳೆಗೆ ಮಾರುಕಟ್ಟೆ ಒದಗಿಸುವ ಜೊತೆ ಸದಸ್ಯರು ವಿನಾ ದೈನ್ಯೇನ ಜೀವನಂ ಆಗದಂತೆ ಸಂಸ್ಥೆಯಿಂದ ಕೆಲಸ ಮಾಡಲಾಗುತ್ತಿದೆ. ಆರ್ಥಿಕ, ಆರೋಗ್ಯ ವಿಚಾರದಲ್ಲಿ ದೈನ್ಯತೆ ಇಲ್ಲದ ಬದುಕಾಗಬೇಕು. ಎಲ್ಲರೂ ಯೋಗ ಯುಕ್ತ, ರೋಗ ಮುಕ್ತ ಜೀವನ ನಡೆಸಬೇಕು. ಇದಕ್ಕಾಗಿ ಹೊಸ ಯೋಗಯುಕ್ತ-ರೋಗಮುಕ್ತ ಎನ್ನುವ ಯೋಜನೆ ಜಾರಿಗೆ ತರುವ ಆಲೋಚನೆ ಇದೆ ಎಂದರು.
ಸಂಘದ ಬಂಡವಾಳ ಹತ್ತು ವರ್ಷದಲ್ಲಿ 10ರಿಂದ 43 ಕೋ.ರೂ. ಹೆಚ್ಚಿದೆ. ಕಳೆದ ಹತ್ತು ವರ್ಷದಲ್ಲಿ ಏಳು ಬಾರಿ ನಮ್ಮ ಸಂಸ್ಥೆಗೆ ಅತ್ಯುತ್ತಮ ಸಂಘ ಎಂಬ ಪ್ರಶಸ್ತಿ ನೀಡಿದೆ ಎಂದ ಅವರು, ಸೇವೆ ಆಶಯದಲ್ಲಿ ಅನೇಕ ಯೋಜನೆ ಅನುಷ್ಠಾನ ಮಾಡಲಾಗುತ್ತದೆ. ನೂತನ ಕಟ್ಟಡ ನಿರ್ಮಾಣಕ್ಕೆ ಬಂಡವಾಳ ಇಟ್ಟುಕೊಳ್ಳಬೇಕಾಗಿದೆ. ಅಡಿಕೆ ಖರೀದಿ ಕೂಡ ನಡೆಸಲಾಗುತ್ತಿದೆ. ಒಳ್ಳೆಯ ಮಾರುಕಟ್ಟೆ ಕೂಡ ಇದೆ ಎಂದರು.
ಜಿಲ್ಲೆಯ 11 ತಾಲೂಕಿನಲ್ಲಿ 9 ತಾಲೂಕಿನಲ್ಲಿ ತಾಲೂಕು ಮಾರ್ಕೇಟಿಂಗ್ ಸೊಸೈಟಿ ಇದೆ. ಉಳಿದ ಸಂಘಕ್ಕಿಂತ ಒಳ್ಳೆಯ ವ್ಯವಹಾರಿಕ ಸಾಧನೆ ಆಗಿದೆ.
ಸಭೆಯಲ್ಲಿ ಮಾತನಾಡಿದ ವಿ.ಎನ್.ಹೆಗಡೆ ಬೊಮ್ಮನಳ್ಳಿ, ವಾರ್ಷಿಕ ಸಭೆಯಲ್ಲಿ ಸರ್ವ ಸದಸ್ಯರು ಒಮ್ಮತ ನೀಡಿದರೆ ಅಡಿಟ್ ಆಕ್ಷೇಪ ಬರುತ್ತಿದೆ. ಇದು ಸರಿಯಲ್ಲ. ಅಡಿಟ್ ಆಕ್ಣೇಪಿಸಿದರೆ ನಮಗೆ ಯಾವುದೇ ಗೌರವ ಇಲ್ಲ ಎಂಬಂತಾಗುತ್ತದೆ ಎಂದು ಹೇಳಿದರು.
ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಆರ್.ಎಂ.ಹೆಗಡೆ, ಜಿ.ಟಿ.ಹೆಗಡೆ ತಟ್ಟಿಸರ ಇತರ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡರು.
ಉಪಾಧ್ಯಕ್ಷ ಎಂ.ಪಿ.ಹೆಗಡೆ ಹೊನ್ನೆಕಟ್ಟಾ, ನಿರ್ದೇಶಕರಾದ ಜಿ.ಟಿ.ಹೆಗಡೆ ತಟ್ಟಿಸರ, ಎಸ್.ಎಸ್ ಹೆಗಡೆ ಅಜ್ಜಿಬಳ, ಜಿ.ಎಂ.ಮುಳಖಂಡ, ವಿ.
ಅರ್.ಹೆಗಡೆ ಮಣ್ಮನೆ, ಎನ್.ಡಿ.ಹೆಗಡೆ ಹಾಲೇರಿಕೊಪ್ಪ, ವಿ.ಎಸ್.ಹೆಗಡೆ ಕೆಶಿನ್ಮನೆ, ಆರ್.ಎಸ್.ಹೆಗಡೆ ವಾಜಗದ್ದೆ, ಎ.ಕೆ.ನಾಯ್ಕ, ಆರ್.ವಿ.ನಾಯ್ಕ ಬಬ್ಬಿಸರ, ಇಂದಿರಾ ಹೆಗಡೆ, ಶ್ರೀಮತಿ ಎನ್.ಹೆಗಡೆ, ಮುಖ್ಯ ಕಾರ್ಯನಿರ್ವಾಹಕ ಎಂ.ಎ.ಹೆಗಡೆ ಕಾನಮುಷ್ಕಿ ಇತರರು ಇದ್ದರು.