Slide
Slide
Slide
previous arrow
next arrow

ಕೆ.ಸಿ.ಇ.ಟಿ: ಕ್ರಿಯೇಟಿವ್ ಕಾಲೇಜಿನ ಸುಮಂತ್ ರಾಜ್ಯಕ್ಕೆ 4 ನೇ ರ‍್ಯಾಂಕ್‌

300x250 AD

 
ಕಾರ್ಕಳ: ಏಪ್ರಿಲ್ 15,16 ಮತ್ತು 17 ರಂದು ನಡೆದ ಕೆ.ಸಿ.ಇ.ಟಿ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪಿ.ಯು. ಕಾಲೇಜು ರಾಜ್ಯ ಮಟ್ಟದ 100 ರ‍್ಯಾಂಕ್‌ನೊಳಗೆ 14 ಸ್ಥಾನ  ಪಡೆಯುವ ಮೂಲಕ ಅದ್ಭುತ ಸಾಧನೆ ಮಾಡಿದೆ.
ಪ್ರಸ್ತುತ ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಸೇರಿದಂತೆ ಹಲವು ಪ್ರಮುಖ ಕೋರ್ಸ್‌ಗಳಿಗೆ ಸೇರಲು ನಡೆಯುವ ರಾಜ್ಯಮಟ್ಟದ ಪ್ರವೇಶ ಪರೀಕ್ಷೆಯಲ್ಲಿ, ಕಾಲೇಜಿನ ಸುಮಂತ್ ಗೌಡ ಎಸ್ ದಾನಪ್ಪಗೌಡರ್ ಕೃಷಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 4ನೇ ರ‍್ಯಾಂಕ್‌, ಬಿ.ಎನ್.ವೈ.ಎಸ್. ವಿಭಾಗದಲ್ಲಿ 9ನೇ ರ‍್ಯಾಂಕ್‌, ಬಿ.ಎಸ್.ಸಿ. ನರ್ಸಿಂಗ್ ವಿಭಾಗದಲ್ಲಿ 18 ನೇ ರ‍್ಯಾಂಕ್‌, ಪಶು ವೈದ್ಯಕೀಯ ವಿಭಾಗದಲ್ಲಿ 18ನೇ ರ‍್ಯಾಂಕ್‌, B/ D-ಫಾರ್ಮ್ ವಿಭಾಗಗಳಲ್ಲಿ 25 ನೇ ರ‍್ಯಾಂಕ್‌ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ 34ನೇ ರ‍್ಯಾಂಕ್‌ ಗಳಿಸಿದ್ದಾರೆ.
ಹಾಗು ವಿದ್ಯಾರ್ಥಿ ಹೆಚ್ ಎ ರಾಜೇಶ್ ಬಿ.ಎನ್.ವೈ.ಎಸ್. ವಿಭಾಗದಲ್ಲಿ 35ನೇ ರ‍್ಯಾಂಕ್‌, ಬಿ.ಎಸ್.ಸಿ. ನರ್ಸಿಂಗ್ ವಿಭಾಗ ಮತ್ತು ಪಶು ವೈದ್ಯಕೀಯ ವಿಭಾಗದಲ್ಲಿ 52ನೇ ರ‍್ಯಾಂಕ್‌, B/ D-ಫಾರ್ಮ್ ವಿಭಾಗಗಳಲ್ಲಿ 62 ನೇ ರ‍್ಯಾಂಕ್‌ ಪಡೆದು ಶ್ಲಾಘನೀಯ ಸಾಧನೆ ಮಾಡಿದ್ದಾರೆ.
 
ಇಂಜಿನಿಯರಿಂಗ್ ವಿಭಾಗದಲ್ಲಿ ವಿದ್ಯಾರ್ಥಿಗಳಾದ ಮೋನಿಕಾ ಕೆ. ಪಿ 84ನೇ ರ‍್ಯಾಂಕ್, ಅಭಿನಂದನ್ ಭರಮಪ್ಪ 288 ನೇ ರ‍್ಯಾಂಕ್,  ಪ್ರಜ್ವಲ್ ಎಸ್ ಎನ್ 438 ನೇ ರ‍್ಯಾಂಕ್, ಎನ್ ಸಮರ್ಥನ್ 534 ನೇ ರ‍್ಯಾಂಕ್ ಹಾಗೂ ಚೈತನ್ಯ ಜಿ 744 ನೇ ರ‍್ಯಾಂಕ್ ಗಳಿಸಿದ್ದಾರೆ.
 
ನ್ಯಾಚುರೋಪತಿ ವಿಭಾಗದಲ್ಲಿ ಪ್ರಜ್ವಲ್ ಎಸ್ ಎನ್ 60 ನೇ ರ‍್ಯಾಂಕ್,  ಅಭಿನಂದನ್ ಭರಮಪ್ಪ 94 ನೇ ರ‍್ಯಾಂಕ್, ಗಣೇಶ್ ಜಿ 276ನೇ ರ‍್ಯಾಂಕ್‌, ಚೈತನ್ಯ ಜಿ 744 ನೇ ರ‍್ಯಾಂಕ್, ಧ್ರುವ 444 ನೇ ರ‍್ಯಾಂಕ್ ಹಾಗೂ ಬಿಂದುಪ್ರಿಯ 482 ನೇ ರ‍್ಯಾಂಕ್ ಪಡೆದಿದ್ದಾರೆ.
 
ಕೃಷಿ ವಿಭಾಗದಲ್ಲಿ ಅಭಿನಂದನ್ ಭರಮಪ್ಪ 60 ನೇ ರ‍್ಯಾಂಕ್, ಪ್ರಜ್ವಲ್ ಎಸ್ ಎನ್ 75 ನೇ ರ‍್ಯಾಂಕ್,
ಚೈತನ್ಯ ಜಿ 123 ನೇ ರ‍್ಯಾಂಕ್, ಬಿಂದುಪ್ರಿಯ 259ನೇ ರ‍್ಯಾಂಕ್ , ಭರತ್ ಕೆ  275 ನೇ ರ‍್ಯಾಂಕ್, ಸಂಜನಾ ಕೆ  ಆರ್ 337 ನೇ ರ‍್ಯಾಂಕ್, ಪ್ರೇರಣಾ ಪಾಂಡುರಂಗ 428 ನೇ ರ‍್ಯಾಂಕ್, ಧ್ರುವ 440 ನೇ ರ‍್ಯಾಂಕ್ ಪಡೆದಿದ್ದಾರೆ.
 
ಪಶು ವೈದ್ಯಕೀಯದಲ್ಲಿ  ಪ್ರಜ್ವಲ್ ಎಸ್ ಎನ್ 78 ನೇ ರ‍್ಯಾಂಕ್, ಅಭಿನಂದನ್ ಭರಮಪ್ಪ 116 ನೇ ರ‍್ಯಾಂಕ್, ಧ್ರುವ 238ನೇ ರ‍್ಯಾಂಕ್ ಸಾತ್ವಿಕ್ ಭಂಡಾರಿ 362ನೇ ರ‍್ಯಾಂಕ್, ಪಡೆದಿದ್ದಾರೆ.
 
ನರ್ಸಿಂಗ್ ವಿಭಾಗದಲ್ಲಿ ಪ್ರಜ್ವಲ್ ಎಸ್ ಎನ್ 78 ನೇ ರ‍್ಯಾಂಕ್, ಅಭಿನಂದನ್ ಭರಮಪ್ಪ 117 ನೇ ರ‍್ಯಾಂಕ್, ಧ್ರುವ 240 ನೇ ರ‍್ಯಾಂಕ್, ಸಾತ್ವಿಕ್ ಭಂಡಾರಿ 365ನೇ ರ‍್ಯಾಂಕ್, ಪಡೆದಿದ್ದಾರೆ.
 
ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕ್ರಿಯೇಟಿವ್ ಕಾಲೇಜಿನ 14 ವಿದ್ಯಾರ್ಥಿಗಳು 100 ರ ರ‍್ಯಾಂಕ್ ಒಳಗಿನ 156 ವಿದ್ಯಾರ್ಥಿಗಳು 1000 ರ‍್ಯಾಂಕ್‌ನೊಳಗೆ, 302 ವಿದ್ಯಾರ್ಥಿಗಳು 2000 ರ‍್ಯಾಂಕ್‌ನೊಳಗೆ ಸ್ಥಾನ ಗಳಿಸಿಕೊಂಡಿದ್ದಾರೆ.
 
ಕಾಲೇಜು ನಿರಂತರ ನಾಲ್ಕು ವರ್ಷಗಳಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ  ಶೇಕಡಾ 100 ಫಲಿತಾಂಶ ದಾಖಲಿಸಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.
 
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ  ಹಾಗೂ ಉಪನ್ಯಾಸಕೇತರ ವೃಂದದವರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿ, ಸಂತಸ ವ್ಯಕ್ತಪಡಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top