Slide
Slide
Slide
previous arrow
next arrow

TSS ಗೆ 2.24 ಕೋಟಿ ರೂ. ನಿವ್ವಳ ಲಾಭ

300x250 AD

ಶಿರಸಿ: ರೈತ ಸದಸ್ಯರ ಸೇವೆಯಲ್ಲಿ 99 ವರ್ಷವನ್ನು ಸಾರ್ಥಕವಾಗಿ ಪೂರೈಸಿ ಮುನ್ನಡೆಯುತ್ತಿರುವ ಶಿರಸಿಯ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿಯು 2021-22ನೇ ಸಾಲಿನಲ್ಲಿ ರೂ.2.24 ಕೋಟಿ ನಿವ್ವಳ ಲಾಭ ಗಳಿಸಿದ್ದು ಶೇರುದಾರ ಸದಸ್ಯರಿಗೆ ಶೇ.20 ಲಾಭಾಂಶ ಘೋಷಿಸಿದೆ. ಸೆ:08 ಗುರುವಾರದಂದು ಜರುಗಿದ ಸಂಘದ 2021-22ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಸಂಘದ ಕಾರ್ಯಾಧ್ಯಕ್ಷ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ವಿವರಗಳನ್ನು ನೀಡಿದರು.
ಸಂಘವು ವರದಿ ವರ್ಷದಲ್ಲಿಒಟ್ಟೂ ರೂ.1,733 ಕೋಟಿ ವಹಿವಾಟು ನಡೆಸಿದೆ.ಸಂಘದ ದಲಾಲಿ ವಿಭಾಗದಲ್ಲಿ 2.25 ಲಕ್ಷ ಕ್ವಿಂಟಲ್‌ ವಿಕ್ರಿ ಮಾಡಿ ರೂ.896 ಕೋಟಿ ವಹಿವಾಟು ನಡೆಸಿದೆ. ಸಂಘದ ಸಿಹಿ ಅಡಿಕೆ ಪುಡಿ ವಿಭಾಗದಲ್ಲಿ ರೂ.29.58 ಕೋಟಿ ವಹಿವಾಟು ನಡೆಸಲಾಗಿದ್ದು, 6,288 ಕ್ವಿಂಟಲ್‌ ಅಡಿಕೆ ವಿನಿಯೋಗಿಸಿದೆ. ಸಂಘದ ಅಡಿಕೆ ಖರೀದಿ ವಿಭಾಗದಲ್ಲಿ1,03,872 ಕ್ವಿಂಟಲ್‌ ಅಡಿಕೆ ಖರೀದಿಸಿ, ಸಂಸ್ಕರಿಸಿ ರೂ.488 ಕೋಟಿ ವಹಿವಾಟು ನಡೆಸಿ ರೂ.3.59 ಕೋಟಿ ಲಾಭ ಗಳಿಸಿದೆ. ಸಂಘದ ಸುಪರ್ ಮಾರ್ಕೆಟ್‌ನ ಕಿರಾಣಿ ಹಾಗೂ ಕೃಷಿ ವಿಭಾಗದಲ್ಲಿ ರೂ.275 ಕೋಟಿ ವಹಿವಾಟು ನಡೆಸಿ ರೂ.18.14ಕೋಟಿ ಲಾಭ ಗಳಿಸಿದೆ.
ಸಂಘದಲ್ಲಿ ಸದಸ್ಯರ ಠೇವಣಿ ರೂ.334 ಕೋಟಿಗೆ ಏರಿದ್ದು, ಸಂಘದ ಸ್ವಂತ ಠೇವಣಿ ವಿವಿಧ ಸಂಸ್ಥೆಗಳಲ್ಲಿ 59.30 ಕೋಟಿ ಆಗಿದೆ. ಸಂಘದ ವ್ಯಕ್ತಿ ಸದಸ್ಯರಿಗೆ ರೂ. 396.54 ಕೋಟಿ ಸಾಲ ನೀಡಿದ್ದು, ಪ್ರಾಥಮಿಕ ಸಹಕಾರಿ ಸಂಘಗಳಿಗೆ ರೂ.16.06 ಕೋಟಿ ಸಾಲ ನೀಡಿದೆ. ಖರೀದಿದಾರರಿಗೂ ರೂ.145.02 ಕೋಟಿ ಉದ್ರಿ ನೀಡಿದ್ದುಇದರಿಂದ ಅಡಿಕೆ ಮಾರುಕಟ್ಟೆ ಒಂದು ಸ್ಥಿರ ದರದಲ್ಲಿ ನಿಲ್ಲುವಂತಾಗಿದೆ. ಸಿದ್ದಾಪುರ ಶಾಖೆಯಲ್ಲಿ 44 ಸಾವಿರ ಕ್ವಿಂಟಲ್‌ ಅಡಿಕೆ ವಿಕ್ರಿ ಆಗಿದ್ದರೆ, ಯಲ್ಲಾಪುರದಲ್ಲಿಯೂ 43 ಸಾವಿರ ಕ್ವಿಂಟಲ್‌ ಅಡಿಕೆ ವಿಕ್ರಿ ವರದಿ ವರ್ಷದಲ್ಲಿಆಗಿದೆ.ಮುಂಡಗೋಡ ಶಾಖೆ ಹಾಗೂ ಶಿರಸಿಯಲ್ಲಿ 2,065 ಟನ್ ಜೋಳ ಖರೀದಿಸಿದೆ.ಸಂಘದ ಸ್ವಂತ ಬಂಡವಾಳವು ರೂ.144.66 ಕೋಟಿಗೆ ಏರಿದೆ.ಗಳಿಸಿದ ಒಟ್ಟೂ ದಲಾಲಿ 9.89 ಕೋಟಿಗಳು. ಒಟ್ಟೂ ಲಾಭದ ಪೂರ್ವದಲ್ಲಿ ರೂ.5.43 ಕೋಟಿ ವಿವಿಧ ನಿಧಿಗೆ ತೆಗೆದಿರಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ರೂ.11.55 ಕೋಟಿ ಮೌಲ್ಯದ ಧಾರಾಹಿಂಡಿಯ 96,240 ಚೀಲಗಳನ್ನು ವಿಕ್ರಿ ಮಾಡಲಾಗಿದೆ.ಸಂಘದ ದೈನಂದಿನ ವಹಿವಾಟುಗಳಿಂದ ಸದಸ್ಯರಿಗೆ ಅನುಕೂಲ ಕಲ್ಪಿಸುವುದರ ಜೊತೆಗೆ ಸಂಘವು ಸರಕಾರಕ್ಕೂ ಸಹ ವಿವಿಧ ತೆರಿಗೆ/ಶುಲ್ಕದ ರೂಪದಲ್ಲಿ 2021-22ನೇ ಸಾಲಿನಲ್ಲಿ ರೂ. 61.04 ಕೋಟಿಗಳನ್ನು ಸಂದಾಯ ಮಾಡಿದೆ.

ಅಧ್ಯಕ್ಷರ ಭಾಷಣದ ಮುಖ್ಯಾಂಶಗಳು:

ಮೊದಲನೇಯದಾಗಿ ನಮ್ಮ ಸಂಘದ ಆಡಳಿತ ಮಂಡಳಿ ನಿರ್ದೇಶಕರಾಗಿ ಹಾಗೂ ಅಧ್ಯಕ್ಷರಾಗಿ ಸಂಘದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಐದು ದಶಕಗಳಿಗೂ ಅಧಿಕ ಕಾಲ ತಮ್ಮನ್ನು ತೊಡಗಿಸಿಕೊಂಡು ಸಂಸ್ಥೆಯ ಬೆಳವಣಿಗೆಗೆ ತಮ್ಮದೆ ಆದ ಕೊಡುಗೆ ನೀಡಿದ ದಿವಸ್ಪತಿ ದೇವೇಂದ್ರ ವಿಶ್ವಾಮಿತ್ರ ಓಣೀಗದ್ದೆಇವರು ಜನವರಿ 30, 2022ರಂದು ನಿಧನರಾಗಿದ್ದು ಸಂಘದ ಅಭಿವೃದ್ಧಿಯಲ್ಲಿ ಅವರು ನೀಡಿದ ಅವಿಸ್ಮರಣೀಯ ಕೊಡುಗೆಯನ್ನು ಸ್ಮರಿಸುತ್ತಾ ಅವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತಾ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
ಪೂರ್ವಜರ ಪರಿಶ್ರಮದಿಂದ 1923ರಲ್ಲಿ ಸ್ಥಾಪನೆಯಾದ ಸಂಸ್ಥೆ ಮುಂದಿನ ವರ್ಷ ನೂರನೇ ವಸಂತವನ್ನು ಯಶಸ್ವಿಯಾಗಿ ಪೂರೈಸಲಿದೆ. ಅದು ಅಡಿಕೆ ಬೆಳೆಗಾರರ ಸಂಕಷ್ಟದ ಕಾಲ. ಖಾಸಗಿಯವರನ್ನು ಅವಲಂಬಿಸಿದ್ದ ರೈತರನ್ನು ಒಗ್ಗೂಡಿಸಬೇಕಾದಲ್ಲಿ ಆರ್ಥಿಕ ನೆರವು ನೀಡಿದಲ್ಲಿ ಮಾತ್ರ ಸಾಧ್ಯವಾಗುತ್ತಿತ್ತು.ಇಂತಹ ಪರಿಸ್ಥಿತಿ ಇರುವ ಸಂದರ್ಭದಲ್ಲಿ ಮನೆ ಮನೆಗಳಿಗೆ ಹೋಗಿ ಜನರಲ್ಲಿ ಸಹಕಾರದ ಪ್ರಾಮುಖ್ಯತೆಯ ಬಗ್ಗೆ ವಿವರಣೆ ನೀಡಿ, ಜನರನ್ನು ಸಹಕಾರಿ ಕ್ಷೇತ್ರದಡಿಗೆ ತಂದ ಶ್ರೀಪಾದ ಹೆಗಡೆ ಕಡವೆಯವರ ಕ್ರಾಂತಿಕಾರಿ ನಡೆಯ ಸಾರ್ಥಕತೆ ಕಂಡಂತೆ ಅನಿಸುತ್ತಿದೆ. ಸಂಘವು ಸ್ಥಾಪನೆಯಾದಾಗಿನಿಂದ ಸದಸ್ಯರ ಪ್ರತಿಯೊಂದು ಬೇಡಿಕೆಯನ್ನು ಈಡೇರಿಸಿರುವುದರ ಜೊತೆಗೆ ಹೊಸ ಹೊಸ ಸೇವೆಗಳನ್ನು ಹಂತ ಹಂತವಾಗಿ ಪ್ರಾರಂಭಿಸುತ್ತಾ ಬಂದಿದೆ.ಈ ಮೂಲಕ ಸಂಘ ಸ್ಥಾಪನೆಯ ಮೂಲ ಉದ್ದೇಶ ಈಡೇರಿಕೆ ಮಾಡಿರುವುದರ ಜೊತೆಗೆ ಹಿರಿಯ ಸಹಕಾರಿಗಳ ಕನಸನ್ನು ಅರ್ಥಪೂರ್ಣವಾಗಿ ನನಸಾಗಿಸಿರುವ ಹೆಮ್ಮೆ ನಮಗಿದೆ.ಇದು ಕೇವಲ ಆಡಳಿತ ಮಂಡಳಿಗೆ ಹೆಮ್ಮೆಯ ವಿಷಯವಾಗಿರದೆ ಸಂಘದೊಂದಿಗೆ ವ್ಯವಹಾರ, ಬಾಂಧವ್ಯ ಹೊಂದಿರುವ ಸದಸ್ಯರು, ಸಿಬ್ಬಂದಿಗಳು ಹೆಮ್ಮೆಪಡುವ ವಿಷಯವಾಗಿದೆ.
ವರದಿ ವರ್ಷದಲ್ಲಿಅಡಿಕೆದರ ವರ್ಷ ಪೂರ್ತಿ ಬಹುತೇಕ ಸ್ಥಿರವಾಗಿದೆ. ಕಳೆದ ಎರಡು ವರ್ಷಗಳಿಂದ ಅಡಿಕೆ ಹಂಗಾಮಿನಲ್ಲೂ ಉತ್ತಮ ದರ ಇರುತ್ತಿದ್ದು, ಸಾಲಗಾರ ಸದಸ್ಯರು ಇದರ ಪ್ರಯೋಜನವನ್ನು ಪಡೆದು ಸಮಯೋಚಿತವಾಗಿ ಮಹಸೂಲುಗಳನ್ನು ವಿಕ್ರಿ ಮಾಡಿಕೊಂಡು, ಖಾತೆ ಬಾಕಿ ಕಡಿಮೆ ಮಾಡಿಕೊಂಡು ಒಂದು ವರ್ಷದ ಬೆಳೆಯೊಳಗೆ ಬಂದು ಆರ್ಥಿಕ ಶಿಸ್ತನ್ನು ರೂಢಿಸಿಕೊಳ್ಳಬೇಕಾಗಿದೆ. ಸದಸ್ಯರು ಆದಾಯದ ಇತಿಮಿತಿಯಲ್ಲಿ ವ್ಯವಹರಿಸಿ ಸಾಲದ ಸುಳಿಗೆ ಸಿಲುಕಿಕೊಳ್ಳದಂತೆ ನಿಗಾವಹಿಸಬೇಕಿದೆ. ಬೇಸಾಯ ಹಾಗೂ ಕೌಟುಂಬಿಕ ವೆಚ್ಚಗಳನ್ನು ವಾರ್ಷಿಕ ಕೃಷಿ ಉತ್ಪನ್ನದ ಮಿತಿಯೊಳಗೇ ಇರುವಂತೆ ನೋಡಿಕೊಂಡು, ಆದ್ಯತೆಯ ಮೇರೆಗೆ ವೆಚ್ಚಗಳನ್ನು ನಿಯಂತ್ರಿಸಬೇಕು. ಅಗತ್ಯದ ಸಂದರ್ಭದಲ್ಲಿ ಸಂಘದಿಂದ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಸದಸ್ಯತ್ವದ ಜವಾಬ್ದಾರಿ ನಿಭಾಯಿಸಬೇಕು.ಸಂಘದಿಂದ ಪಡೆದ ಸಾಲವನ್ನು ಸದಸ್ಯರು ಸಕಾಲದಲ್ಲಿ ಮರುಪಾವತಿ ಮಾಡಿದಲ್ಲಿ ಮಾತ್ರ ಅಗತ್ಯದಲ್ಲಿರುವ ಇತರೆ ಸದಸ್ಯರಿಗೂ ಸಹ ಸಂಘವು ಸಾಲ ನೀಡಲು ಸಾಧ್ಯವಾಗುತ್ತದೆ.
ಸಂಘವು ಕೃಷಿ ಉತ್ಪನ್ನಗಳ ವಹಿವಾಟಿನಲ್ಲಿ ವಿಸ್ತರಣೆ ಮಾಡಿ ಶುಂಠಿ, ಅರಿಶಿಣ, ಗೇರು ಬೀಜ, ತೆಂಗಿನ ಕಾಯಿ, ಬಾಳೆಕಾಯಿ ಟೆಂಡರ್ ಮತ್ತು ಖರೀದಿ ನಡೆಸುತ್ತಿದೆ.ಸದಸ್ಯರು ಎದುರಿಸುತ್ತಿರುವ ಕೂಲಿ ಕಾರ್ಮಿಕರ ಸಮಸ್ಯೆಯ ಪರಿಹಾರಕ್ಕಾಗಿ ಸಂಘದಿಂದ ಹಸಿ ಅಡಿಕೆ ಟೆಂಡರ್ ನಡೆಸಲಾಗುತ್ತಿದ್ದು, ಈ ವರ್ಷದಿಂದ ಅಡಿಕೆಗೆ ಮದ್ದು ಸಿಂಪಡಣೆ ಹಾಗೂ ಕೊನೆಕೊಯ್ಲಿಗೆ ಸಂಘದಿಂದಲೇ ವ್ಯವಸ್ಥೆ ಕಲ್ಪಿಸಲಾಗಿದೆ. ಕಳೆದ ವರ್ಷದಿಂದ ಮಳೆಗಾಲದಲ್ಲಿ ಉದುರುವ ಅಡಿಕೆಗೆ ಸಹ ಟೆಂಡರ್ ವ್ಯವಸ್ಥೆ ಕಲ್ಪಿಸಲಾಗಿದೆ. ವರದಿ ವರ್ಷದಲ್ಲಿ ಸಂಘದ ಮೂಲಕ 71,981 ಕ್ವಿಂಟಾಲ್ ಹಸಿ ಅಡಿಕೆ ಟೆಂಡರ್‌ನಲ್ಲಿ ಮಾರಾಟವಾಗಿದ್ದು, ಈ ಪೈಕಿ ಸಂಘವು 19,305 ಕ್ವಿಂಟಾಲ್ ಹಸಿ ಅಡಿಕೆಯನ್ನ ಖರೀದಿ ಮಾಡಿದೆ. ಸಂಘದಿಂದ ಈ ವರ್ಷಒಟ್ಟೂ 900 ಎಕರೆ ರೈತರ ಅಡಿಕೆಗೆ ಮದ್ದು ಸಿಂಪಡಣೆ ಹಾಗೂ 50 ಎಕರೆ ತೋಟದ ಕೊನೆ ಕೊಯ್ಲು ಮಾಡಿಕೊಡಲಾಗಿದೆ

1. ಅಡಿಕೆಯ ಹಿತಾಸಕ್ತಿಯನ್ನುಕಾಪಾಡುವ ನಿಟ್ಟಿನಲ್ಲಿ ಸಂಘವು ಹೋರಾಟವನ್ನು ಮುಂದುವರೆಸಿದೆ. ಅಡಿಕೆ ದರದ ಕುಸಿತವನ್ನು ತಡೆಗಟ್ಟಿ ದರದ ಸ್ಥಿರತೆ ಕಾಪಾಡುವ ಉದ್ದೇಶದಿಂದ ಸಂಘವು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
2. ಅಡಿಕೆ ವ್ಯಾಪಾರ ವಿಭಾಗದಲ್ಲಿ 2021-22ರಲ್ಲಿ 1,03,872 ಕ್ವಿಂಟಲ್‌ ಅಡಿಕೆ ಖರೀದಿಯಾಗಿದೆ.
3. ರೈತ ಸದಸ್ಯರ ಬಹು ದಿನದ ಬೇಡಿಕೆಯಾದ ಅಡಿಕೆಯ ಪಕ್ಕಾ ತೂಕದ ಸಂದರ್ಭದಲ್ಲಿ 100 ಗ್ರಾಂವರೆಗೆ ಸಹ ತೂಕ ನೀಡುವ ಮೂಲಕ ತೂಕದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಾಗಿದೆ.
4. ವರದಿ ವರ್ಷದಲ್ಲಿ ಸಂಘವು 442ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ಅಡಿಕೆ ಹಾಗೂ 29.58 ಕೋಟಿಗೂ ಅಧಿಕ ಮೌಲ್ಯದ ಸಿಹಿ ಅಡಿಕೆ ಪುಡಿ ಮಾರಾಟ ಮಾಡಿದೆ.
5. ಸಂಘದ ಸಿಹಿ ಅಡಿಕೆ ಪುಡಿ ತಯಾರಿಕೆ ವಿಭಾಗವು ಸನ್ 2021-22 ರಲ್ಲಿಒಟ್ಟೂ 6,288 ಕ್ವಿಂಟಲಿನಷ್ಟು ಅಡಿಕೆಯನ್ನು ಸಿಹಿ ಅಡಿಕೆ ಪುಡಿ ತಯಾರಿಕೆಗೆ ಬಳಸಿದೆ ಹಾಗೂ 77.55 ಲಕ್ಷ ಸಿಹಿ ಅಡಿಕೆಪುಡಿ ಪ್ಯಾಕೇಟ್‌ಗಳನ್ನು ತಯಾರಿಸಿದೆ.
6. ಸಂಘವು ಸದಸ್ಯರ ವೈದ್ಯಕೀಯ ವೆಚ್ಚ ಭರಿಸುವ ರೈತ ರಕ್ಷಾಕವಚ ಯೋಜನೆಯಿಂದ 2021-22ನೇ ಸಾಲಿನಲ್ಲಿಒಟ್ಟೂ 1,148 ಜನರಿಗೆ ಒಟ್ಟೂ ರೂ.2,80,07,967/- ಚಿಕಿತ್ಸಾ ವೆಚ್ಚವನ್ನು ಭರಿಸಲಾಗಿದೆ.

7.ಸಂಘವು ವರದಿ ವರ್ಷದಲ್ಲಿ ಹೊಸದಾಗಿ ಪ್ರಾರಂಭಿಸಿರುವ ಋಣ ಮುಕ್ತಯೋಜನೆಯಿಂದಒಟ್ಟೂ 30 ಮೃತ ಸದಸ್ಯರ ಸಾಲ ಬಾಕಿಗೆ ಒಟ್ಟೂರೂ.85,46,746/- ಮೊತ್ತವನ್ನು ಈ ಯೋಜನೆಯಿಂದ ಭರಿಸಲಾಗಿದೆ.

8.ಸಂಘವು ಈ ವರ್ಷವೂ ಶೇರು ಸದಸ್ಯರಿಗೆ ಶೇ.20ರ ಡಿವಿಡೆಂಡ್ ಘೋಷಿಸಿದೆ.

300x250 AD

9.ವರದಿ ವರ್ಷದಲ್ಲಿ ಸಂಘವು ವ್ಯಾಟ್, ಮಾರ್ಕೆಟ್ ಸೆಸ್, ಆದಾಯತೆರಿಗೆ, ಜಿ.ಎಸ್.ಟಿ. ಇತರೆ ಕರಗಳು ಸೇರಿಅಂತೂರೂ. 61.05 ಕೋಟಿತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಿದೆ.

10.ವರದಿ ವರ್ಷದಲ್ಲಿ ಸಂಘದ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ ಹಾಗೂ ಫ್ರಾಂಚೈಸಿಗಳ ಕಿರಾಣಿ ಹಾಗೂ ಕೃಷಿ ಸುಪರ್ ಮಾರ್ಕೆಟ್ ಮೂಲಕ ಒಟ್ಟೂರೂ. 274 ಕೋಟಿ ವ್ಯಾಪಾರ ವಹಿವಾಟುಆಗಿರುತ್ತದೆ.

11.ಸಂಘದಿAದ ಸದಸ್ಯರಿಗೆ ವರದಿ ವರ್ಷದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿರೂ. 32,07,23,067/- ಗಳ ಆರ್ಥಿಕ ಸೌಲಭ್ಯ ನೀಡಲಾಗಿದೆ.

12. ಸಂಘದಲ್ಲಿ ಲಭ್ಯವಿರುವಇತರೆ ಸೌಲಭ್ಯಗಳು:
(a) ಸಂಘದಿAದ ಪ್ರವಾಸೋದ್ಯಮ ಸೇವೆ ಆರಂಭಿಸಲಾಗಿದೆ.
(b) ಆನ್‌ಲೈನ್‌ಖರೀದಿ ಆ್ಯಪ್ ಪ್ರಾರಂಭಿಸಲಾಗಿದೆ.

2022ರ ಅಕ್ಟೋಬರ್ ತಿಂಗಳಿನಿAದ ಸಂಘವು ನೂರನೇ ವರ್ಷಕ್ಕೆ ಪಾದಾರ್ಪಣೆ ಮಾಡಲಿದ್ದು, ವರ್ಷಪೂರ್ತಿ ವೈವಿಧ್ಯಮಯಅರ್ಥಪೂರ್ಣ ಸದಸ್ಯ ಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜಿಸಲಾಗಿದೆ.ಸದಸ್ಯ ಬಾಂಧವರೆಲ್ಲರೂ ಈ ಶುಭ ಸಂಭ್ರಮದ ಸಂದರ್ಭದಲ್ಲಿ ಸಕ್ರಿಯರಾಗಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Share This
300x250 AD
300x250 AD
300x250 AD
Back to top