ಯಲ್ಲಾಪುರ: ಸಹಕಾರಿ ಸಂಘದಲ್ಲಿ 33 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಆರ್.ಎ.ಭಟ್ಟ ತೋಟ್ಮನೆಯವರ ಸೇವೆ ಸಮಾಜಮುಖಿಯಾಗಿತ್ತು. ಸ್ನೇಹ ಜೀವಿಯಾಗಿದ್ದ ಅವರು ಅನೇಕರ ಕೌಟುಂಬಿಕ ಜೀವನಕ್ಕೆ ಮಾರ್ಗದರ್ಶಿಯಾಗಿದ್ದರು. ಆರ್.ಎ. ಭಟ್ಟರು ತಮ್ಮ ಗುಣಶೀಲವಾದ ನಡತೆಯಿಂದ ಜನಮಾನಸದಲ್ಲಿ ಅಜರಾಮರಾಗಿದ್ದಾರೆ. ಶಿಸ್ತು ಬದ್ಧವಾದ ಜೀವನ ಅವರದಾಗಿತ್ತು. ನಮ್ಮ ಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿ ಉತ್ತಮ ಸೇವೆ ಸಲ್ಲಿಸಿದ್ದ ಆರ್.ಎ. ಭಟ್ಟ ಶೈಕ್ಷಣಿಕ ಕಾಳಜಿ ಹೊಂದಿದ್ದರು ಎಂದು ಸರ್ವೋದಯ ಶಿಕ್ಷಣ ಸಮಿತಿಯ ಅಧ್ಯಕ್ಷ ಡಿ. ಶಂಕರ ಭಟ್ಟ ಹೇಳಿದರು.
ತಾಲೂಕಿನ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ಆವರಣದಲ್ಲಿ ಮಂಗಳವಾರ ಇತ್ತೀಚೆಗೆ ನಿಧನರಾದ ಆರ್.ಎ.ಭಟ್ಟರಿಗೆ ಶ್ರದ್ಧಾಂಜಲಿ ಗೌರವ ಸಲ್ಲಿಸಿ ಮಾತನಾಡುತ್ತಿದ್ದರು. ಸಭೆಯಲ್ಲಿ ಶಿಕ್ಷಣ ಸಮಿತಿಯ ಉಪಾಧ್ಯಕ್ಷರಾದ ಟಿ.ಸಿ.ಗಾಂವ್ಕರ,ಸದಸ್ಯರಾದ ಅಪ್ಪಣ್ಣ ಭಟ್ಟ ಬೆಣ್ಣೆಜಡ್ಡಿ, ಗಿರೀಶ ಗಾಂವ್ಕರ, ವೆಂಕಟ್ರಮಣ ಕಿರಗಾರೆ, ಡಿ.ಜಿ. ಭಟ್ಟ ದುಂಢಿ, ಆರ್.ಜಿ. ಭಟ್ಟ ಹೊನ್ನಗದ್ದೆ, ಜಿ.ಎನ್. ಕೋಮಾರ, ಮುಖ್ಯಾಧ್ಯಾಪಕ ಎಂ.ಕೆ.ಭಟ್ಟ ಹಾಗೂ ಶಿಕ್ಷಕರು ಉಪಸ್ಥಿತರಿದ್ದು ಮಾತನಾಡಿದರು. ಇತ್ತೀಚೆಗೆ ನಿಧನರಾದ ದಯಾ ಕಾರಂತ ಹಾಗೂ ಉತ್ತಮ ಅಂಬಿಗರಿಗೂ ಸಂತಾಪ ಸೂಚಿಸಲಾಯಿತು.
ಶೈಕ್ಷಣಿಕ, ಸಹಕಾರಿ ಕ್ಷೇತ್ರಕ್ಕೆ ಆರ್.ಎ.ಭಟ್ ತೋಟ್ಮನೆ ಕೊಡುಗೆ ಅಪಾರ: ಶಂಕರ್ ಭಟ್
