ಯಲ್ಲಾಪುರ: ತಾಲೂಕಿನ ಗುಳ್ಳಾಪುರದಲ್ಲಿ ಯುಗಾದಿ ಉತ್ಸವದ ಸಂಚಾಲಕ ಶ್ರೀಕಾಂತ ಶೆಟ್ಟಿ ನೇತೃತ್ವದಲ್ಲಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಯುಗಾದಿ ಉತ್ಸವ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಯುಗಾದಿಯ ದಿನದಂದು ಬೈಕ್ ರ್ಯಾಲಿ ನಡೆಸಲಾಯಿತು. ಸೋಮವಾರ ಸಂಜೆ ವನದುರ್ಗಾ ದೇವಸ್ಥಾನದಿಂದ ವೇದಿಕೆಗೆ ಮೆರವಣಿಗೆ ಮೂಲಕ ಆಗಮಿಸಲಾಯಿತು. ವೇ.ಮೂ ಧಾರ್ಮಿಕ ಪರಿಷತ್ ಜಿಲ್ಲಾ ಸಮಿತಿ ಸದಸ್ಯ ಗಣಪತಿ ಭಟ್ಟ ಅರಬೈಲ್ ಪಂಚಾಂಗ ಪಠಣೆ ಮಾಡಿದರು. ಧರ್ಮಜಾಗೃತಿ ಉಪನ್ಯಾಸವನ್ನು ಡಾ.ಸುವರ್ಣಾ ಕುಂದಾಪುರ ನಿರ್ವಹಿಸಿದರು. ವಿಶೇಷ ಆಹ್ವಾನಿತರಾಗಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಎ.ಬಾಬು ನಾಯ್ಕ ಉಪಸ್ಥಿತರಿದ್ದರು. ಯುಗಾದಿ ಉತ್ಸವದ ಸಂಚಾಲಕರಾಗಿ ಶ್ರೀಕಾಂತ ಶೆಟ್ಟಿ ವೇದಿಕೆ ಮೇಲಿದ್ದರು. ಸಭಾ ಕಾರ್ಯಕ್ರಮ ಮುಗಿದ ಬಳಿಕ ಸಂಗೀತ ಸಂಜೆ, ಭರತನಾಟ್ಯ, ಭಜನಾ ಕಾರ್ಯಕ್ರಮ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು.