ದಾಂಡೇಲಿ : ನಗರದ ಕುಳಗಿ ರಸ್ತೆಯಲ್ಲಿರುವ ಜೈ ಹನುಮಾನ್ ಭಕ್ತಿ ಸಮಿತಿಯ ಶ್ರೀ ವೀರಾಂಜನೇಯ ಮಂದಿರದ 11ನೇ ವರ್ಷದ ವಾರ್ಷಿಕೋತ್ಸವವು ಮಂಗಳವಾರ ಜರುಗಿತು.
ಮಂಗಳವಾರ ಬೆಳಿಗ್ಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಪವಮಾನ ಅಭಿಷೇಕ, ಹವನ ಸಂಕಲ್ಪ ಮತ್ತು ಪುಣ್ಯಾಹ ವಾಚನ, ಮನ್ಯು ಸೂಕ್ತ ಹೋಮ, ಹವನ ಪೂರ್ಣಾಹುತಿ ನಡೆದ ಬಳಿಕ ಮಹಾ ಆರತಿ, ಮಂತ್ರ ಪುಷ್ಪ, ಮಹಾಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.
ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಭಾಗವಹಿಸಿದ್ದರು. ವಾರ್ಷಿಕೋತ್ಸವದ ಯಶಸ್ಸಿಗೆ ಜೈ ಹನುಮಾನ್ ಭಕ್ತಿ ಸಮಿತಿಯ ಪದಾಧಿಕಾರಿಗಳು ಸದಸ್ಯರು ಸ್ಥಳೀಯ ಭಕ್ತಾ ಅಭಿಮಾನಿಗಳು ಹಾಗೂ ಅರ್ಚಕ ವೃಂದದವರು ಶ್ರಮಿಸಿದ್ದರು.