ಶಿರಸಿ: ರೋಟರಿ ಕ್ಲಬ್ ಶಿರಸಿಯು ಸಾಮಾಜಿಕ ಕ್ಷೇತ್ರದಲ್ಲಿ ಅತ್ಯಂತ ಶ್ಲಾಘನೀಯವಾಗಿ ಕಾರ್ಯನಿರ್ವಹಿಸಿ ಜನರ ಪ್ರಶಂಸೆಗೆ ಪಾತ್ರವಾಗಿದೆ ಎಂದು ರೊಟರಿ ಅಂತರರಾಷ್ಟ್ರೀಯ ಜಿಲ್ಲೆ 3170 ರ ಜಿಲ್ಲಾ ಪ್ರಾಂತಪಾಲ ರೊ|| ಡಾ|| ಶರದ್ ಪೈ ಅಭಿಪ್ರಾಯಪಟ್ಟರು.
ಶಿರಸಿ ರೋಟರಿ ಕ್ಲಬ್‌ಗೆ ಅಧಿಕೃತವಾಗಿ ಭೇಟಿ ನೀಡಿದ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ರೋಟರಿ ವೋಯ್ಸ್’ ಕಿರು ಹೊತ್ತಿಗೆ ಬಿಡುಗಡೆಗೊಳಿಸಿ ಮಾತನಾಡಿದ ಅವರು ಶಿರಸಿ ರೋಟರಿ ಕ್ಲಬ್‌ನ ಕಾರ್ಯವೈಖರಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, “ರೋಟರಿ ಆಲೆಮನೆ ಉತ್ಸವ – ಫುಡ್‌ಫೆಸ್ಟ್”ನಂತಹ ಕಾರ್ಯಕ್ರಮಗಳನ್ನು ಏರ್ಪಡಿಸಿ ಅವುಗಳಿಂದ ಸಂಗ್ರಹಿಸಲಾದ ಮೊತ್ತದಿಂದ ಶಾಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಸಾರ್ವಜನಿಕರಿಗಾಗಿ ಬಸ್ ತಂಗುದಾಣ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಮಾದರಿ ಕಾರ್ಯ ಹರ್ಷ ತಂದಿದೆ. ಶಿರಸಿ ರೊಟರಿ ಕ್ಲಬ್‌ನ ಎಲ್ಲ ಸದಸ್ಯರು ಒಗ್ಗೂಡಿ “ಸರ್ವೀಸ್ ಎಬೊವ್ ಸೆಲ್ಫ್” ಎಂಬ ಧ್ಯೇಯವಾಕ್ಯದಡಿಯಲ್ಲಿ ಸಮುದಾಯಕ್ಕೆ ಉಪಯುಕ್ತವಾದ ನೂರಾರು ಕೆಲಸಗಳ ಮೂಲಕ ಜನಮನಗೆದ್ದಿದ್ದಾರೆ ಎಂದರು.
ನಗರದ ಇಸಳೂರು ಪ್ರೌಢಶಾಲೆಯಲ್ಲಿ, ಎಂಇಎಸ್ ಐಟಿಐ ಕಾಲೇಜಿನಲ್ಲಿ ಹಾಗೂ ಉರ್ದು ಪ್ರೌಢಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟಿಸಿ, ವಿವೇಕಾನಂದ ನಗರದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಸ್ ತಂಗುದಾಣವನ್ನು ಲೋಕಾರ್ಪಣೆಗೊಳಿಸಿದರು. ನಗರದ ಎಮ್.ಇ.ಎಸ್. ಕಾಲೇಜಿನಲ್ಲಿ ವಿದ್ಯಾರ್ಥಿ ದೆಸೆಯಲ್ಲಿಯೇ ಯುವ ನಾಯಕತ್ವದ ಅಭಿವೃದ್ಧಿಗಾಗಿ ರೊರ‍್ಯಾಕ್ಟ ಕ್ಲಬ್‌ನ ಪದಗ್ರಹಣ ಕಾರ್ಯಕ್ರಮವನ್ನೂ ಅವರು ನಡೆಸಿಕೊಟ್ಟರು.
ಕ್ಲಬ್ ಅಸ್ಸೆಂಬ್ಲಿಯಲ್ಲಿ ಭಾಗವಹಿಸಿ ರೋಟರಿ ಕ್ಲಬ್‌ನ ಪ್ರಸ್ತುತ ಹಾಗೂ ಮುಂದಿನ ಅವಧಿಯ ತಂಡದವರೊಂದಿಗೆ ವಿವಿಧ ಯೋಜನೆಗಳ ಕುರಿತು ಚರ್ಚಿಸಿದರು. 2024-25ನೇ ಸಾಲಿನಲ್ಲಿ ಕೈಗೊಳ್ಳಲಾದ ಕಾರ್ಯಚಟುವಟಿಕೆಗಳ ವರದಿ ಮಂಡಿಸಲಾಯಿತು.
ಕಾರ್ಯಕ್ರಮದಲ್ಲಿ ಶಿರಸಿ ರೋಟರಿ ಕ್ಲಬ್‌ನ ಅಧ್ಯಕ್ಷೆ ರೊ|| ಡಾ. ಸುಮನ್ ಹೆಗಡೆ, ಕಾರ್ಯದರ್ಶಿ ರೊ|| ಸರಸ್ವತಿ ಎನ್. ರವಿ, ಝೋನಲ್ ಕೊ-ಆರ್ಡಿನೇಟರ್ ರೊ|| ಜಯಶ್ರೀ ಕಾಮತ್, ಅಸಿಸ್ಟಂಟ್ ಗವರ್ನರ್ ರೊ|| ರಾಘವೇಂದ್ರ ಪ್ರಭು, ಇವೆಂಟ್ ಛೇರಮನ್ ರೊ|| ಪ್ರವೀಣ್‌ಕಾಮತ್, ಇನ್ನರವೀಲ್ ಅಧ್ಯಕ್ಷೆ ರೇಖಾ ಅನಂತ ವೇದಿಕೆಯಲ್ಲಿ ರೋಟರಿ ಮತ್ತು ಇನ್ನರ್‌ವ್ಹೀಲ್ ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.