Slide
Slide
Slide
previous arrow
next arrow

ದಾಂಡೇಲಿಯಲ್ಲಿ ನಿಲ್ಲದ ಬಿಡಾಡಿ ದನಗಳ ಹಾವಳಿ: ನಿಯಂತ್ರಣಕ್ಕೆ ಸ್ಥಳೀಯರಿಂದ ಮನವಿ

300x250 AD
  • ಸಂದೇಶ್ ಎಸ್.ಜೈನ್, ದಾಂಡೇಲಿ

ದಾಂಡೇಲಿ : ನಗರದಲ್ಲಿ ದಿನದಿಂದ ದಿನಕ್ಕೆ ಬಿಡಾಡಿ ದನ ಕರುಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಅತ್ತಿಂದಿತ್ತ ಬಿಡಾಡಿ ದನ ಕರುಗಳು ಓಡಾಡುತ್ತಿರುವುದರಿಂದ ಸುಗಮ ವಾಹನ ಸಂಚಾರಕ್ಕೂ ಅಡಚಣೆಯಾಗಿದೆ. ಸಾಕಷ್ಟು ಬಾರಿ ವಾಹನ ಅಪಘಾತಗಳಾಗಿ ಬಿಡಾಡಿ ದನ ಕರುಗಳಿಗೆ ಗಾಯವಾಗಿರುವುದಲ್ಲದೆ ಹಲವು ಬಾರಿ ಸಾವನ್ನಪ್ಪಿರುವ ಘಟನೆಯು ನಡೆದಿದೆ. ಇನ್ನೂ ದ್ವಿಚಕ್ರ ವಾಹನ ಸವಾರರಂತು ಬಿಡಾಡಿ ದನ ಕರುಗಳ ಹಾವಳಿಯಿಂದ ಬಿದ್ದು ಗಾಯ ಮಾಡಿಕೊಂಡಿರುವ ಘಟನೆಗಳು ನಡೆಯುತ್ತಿರುವುದು ಸಾಮಾನ್ಯ ಎಂಬಂತಾಗಿದೆ.

ನಗರದ ಪ್ರಮುಖ ರಸ್ತೆಗಳಲ್ಲಿ ಹಿಂಡುಗಟ್ಟಲೆ ಬಿಡಾಡಿ ದನ ಕರುಗಳು ಅಡ್ಡಾಡುತ್ತಿರುವುದರಿಂದ ವಾಹನ ಸವಾರರು ಅದರಲ್ಲಿ ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರು ಜೀವಭಯದಿಂದಲೇ ಪ್ರಯಾಣಿಸಬೇಕಾದ ಸ್ಥಿತಿಯಿದೆ.

ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯವರು ಬಿಡಾಡಿ ದನ ಕರುಗಳ ನಿಯಂತ್ರಣಕ್ಕೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಹಾಗೂ ಬೀಡಾಡಿ ದನ ಕರುಗಳ ಮಾಲೀಕರು ತಮ್ಮ ತಮ್ಮ ದನ ಕರುಗಳನ್ನು ರಸ್ತೆ ಮೇಲೆ ಬಿಡದೆ, ಸುರಕ್ಷಿತ ರೀತಿಯಲ್ಲಿ ಸಾಕಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬಿಡಾಡಿ ದನ ಕರುಗಳ ನಿಯಂತ್ರಣಕ್ಕೆ ಸಂಬಂಧಪಟ್ಟ ಇಲಾಖೆಯವರು ಅಗತ್ಯ ಕ್ರಮವನ್ನು ಕೈಗೊಳ್ಳಬೇಕು : ರವಿಕುಮಾರ್ ಜಿ.ನಾಯಕ, ಪ್ರವಾಸೋದ್ಯಮಿ

300x250 AD

ದನಕರುಗಳನ್ನು ಸಾಕುವವರು ರಸ್ತೆ ಮೇಲೆ ಬಿಡದೆ ಸುರಕ್ಷಿತವಾಗಿ ಸಾಕಲು ಸಾಧ್ಯವಾಗುವುದಾದರೆ ಮಾತ್ರ ಸಾಕಬೇಕು : ಫಿರೋಜ್ ಖಾನ್ ಫಿರ್ಜಾದೆ, ರಾಜ್ಯ ನಿರ್ದೇಶಕರು ಮಾನವ ಹಕ್ಕುಗಳ ಆಯೋಗ ಸಂಘಟನೆ.

ಬಿಡಾಡಿ ದನ ಕರುಗಳ ಹಾವಳಿ ತೀವ್ರವಾಗಿದ್ದು, ಸುಗಮ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಇವುಗಳ ನಿಯಂತ್ರಣಕ್ಕೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು : ಚೆನ್ನಬಸಪ್ಪ ಮುರಗೋಡ, ಸದಸ್ಯರು ಜಿಲ್ಲಾ ಜನಜಾಗೃತಿ ವೇದಿಕೆ.

ಬಿಡಾಡಿ ದನ ಕರುಗಳಿಂದಾಗಿ ತಾನು ಕೂಡ ದ್ವಿಚಕ್ರ ವಾಹನದಲ್ಲಿ ಬಿದ್ದು ಗಾಯ ಮಾಡಿಕೊಂಡಿದ್ದೇನೆ. ನನ್ನಂತೆ ಸಾಕಷ್ಟು ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯ ಮಾಡಿದ ಉದಾಹರಣೆಗಳಿವೆ. ಬಿಡಾಡಿ ದನ ಕರುಗಳ ನಿಯಂತ್ರಣಕ್ಕೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು : ರಿಯಾಜ್ ನವಲಗುಂದ, ಪತ್ರಿಕಾ ವಿತರಕರು, ದಾಂಡೇಲಿ.

Share This
300x250 AD
300x250 AD
300x250 AD
Back to top