Slide
Slide
Slide
previous arrow
next arrow

ಮರಳಿ ಪರೀಕ್ಷೆ ಬರೆದು ರ‌್ಯಾಂಕ್ ಪಡೆದ ಮಾರಿಕಾಂಬಾ ವಿದ್ಯಾರ್ಥಿನಿ

300x250 AD

ಶಿರಸಿ: ಎಸ್ಸೆಸ್ಸೆಲ್ಸಿ‌ ಪ್ರಥಮ ಪರೀಕ್ಷೆಯಲ್ಲಿ ಗಣನೀಯ ಅಂಕ ಪಡೆದಿದ್ದರೂ ಸಮಾಧಾನಕ್ಕೊಳಗಾಗದ ವಿದ್ಯಾರ್ಥಿನಿಯೋರ್ವಳು ಮರಳಿ ಎರಡನೇ ಪರೀಕ್ಷೆ ಬರೆದು ರಾಜ್ಯಕ್ಕೆ ಹತ್ತನೇ ರ‌್ಯಾಂಕ್ ಪಡೆದುಕೊಂಡಿದ್ದಾಳೆ.

ಶಿರಸಿ ಮಾರಿಕಾಂಬಾ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದ ದೇವತೆಮನೆಯ ನವ್ಯ ನಾಗರಾಜ ಹೆಗಡೆ ಇವಳಿಗೆ ಎಸ್ಸೆಸ್ಸೆಲ್ಸಿ ಪ್ರಥಮ‌ ಪರೀಕ್ಷೆಯಲ್ಲಿ 613 ಅಂಕ ಬಂದಿತ್ತು. ವಿಜ್ಞಾನ, ಸಂಸ್ಕೃತದಲ್ಲಿ ಕಡಿಮೆ ಅಂಕ ಬಂತೆಂದು ಎರಡನೇ ಪರೀಕ್ಷೆ ಎದುರಿಸಿದ್ದಳು. ವಿಜ್ಞಾನಕ್ಕೆ 1 ಅಂಕ ಅಧಿಕ ಪಡೆದು 97, ಸಂಸ್ಕೃತಕೆ 2 ಅಂಕ ಅಧಿಕ ಪಡೆದು 100 ಅಂಕ ಗಳಿಸಿ 625 ಕ್ಕೆ 616 ಅಂಕ ಗಳಿಸಿದ್ದಾಳೆ. ಈಕೆ ನಾಗರಾಜ ಹೆಗಡೆ, ಸುನೀತಾ ಹೆಗಡೆ ದಂಪತಿ ‌ಪುತ್ರಿ. ಈ ಮೂಲಕ ಮಾರಿಕಾಂಬಾ ಸರಕಾರಿ ಪ್ರೌಢಶಾಲಾ ರ‌್ಯಾಂಕ್ ಈ ಬಾರಿ 22ಕ್ಕೇರಿದೆ‌.

300x250 AD
Share This
300x250 AD
300x250 AD
300x250 AD
Back to top