Slide
Slide
Slide
previous arrow
next arrow

ವಾರಸುದಾರರ ಪತ್ತೆಗೆ ಮನವಿ

300x250 AD

ಕಾರವಾರ: ಶಿರವಾಡ ದೇವತಿವಾಡ ಹತ್ತಿರ ರಾಜ್ಯ ಹೆದ್ದಾರಿ 6 ರಲ್ಲಿ ಮಳೆಯಲ್ಲಿ ನೆನೆದುಕೊಂಡು ರಸ್ತೆಯಲ್ಲಿ ಅಂದಾಜು 35ರಿಂದ 40 ವರ್ಷದ ಗೋಧಿ ಬಣ್ಣದ ಸುಮಾರು 5 ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು, ಕುರುಚಲು ದಾಡಿ ಮೇಸೆ, ನೀಲಿ ಬಣ್ಣದ ಜೀನ್ಸ್ ಚಡ್ಡಿ ಧರಿಸಿರುವವನು ಬಿದ್ದಿದ್ದು, ಕೊಡಲೇ ಕಾರವಾರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಕಾರವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆ ಕುರಿತು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಸದರಿ ಅಪರಿಚಿತ ವ್ಯಕ್ತಿಯು ಚಿಕಿತ್ಸೆ ಫಲಕಾರಿಯಾಗದೇ ಜೂ.6 ರಂದು ಮೃತಪಟಿದ್ದಾನೆ. ಸದರಿ ಅಪರಿಚಿತ ವ್ಯಕ್ತಿಯ ಮೃತ ದೇಹವು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ಶವಗಾರದಲ್ಲಿದೆ.
ಮೃತನ ವಾರಸುದಾರರ ಯಾರಾದರೂ ಇದ್ದಲ್ಲಿ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯ ದೂ.ಸಂ.08382-222443, ಮೊ.ಸಂ:9480805262 ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ 08382-226550, ಸಂಪರ್ಕಿಸುವಂತೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top