Slide
Slide
Slide
previous arrow
next arrow

ದಿ. ಕೃಷ್ಣ ಟಿ.ಭಾಗ್ವತ ದತ್ತಿ ಉಪನ್ಯಾಸ ಕಾರ್ಯಕ್ರಮ ಯಶಸ್ವಿ

300x250 AD

ಕುಮಟಾ: ಇಲ್ಲಿನ ಡಾ.ಎ.ವಿ. ಬಾಳಿಗಾ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ದಿ. ಕೃಷ್ಣ ಟಿ. ಭಾಗ್ವತ ದತ್ತಿ ಉಪನ್ಯಾಸ ಕಾರ‍್ಯಕ್ರಮವನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪೋಸ್ಟ್ ಡಾಕ್ಟರೇಟ್ ಸಂಶೋಧಕರಾದ ಡಾ.ನವ್ಯಾ ಭಟ್ ವಿದ್ಯುಕ್ತವಾಗಿ ಉದ್ಘಾಟಿಸಿದರು.

ನಂತರ ಅವರು ತಮ್ಮ ದತ್ತಿಉಪನ್ಯಾಸದಲ್ಲಿ “ಒವರ್ ವೀವ್ ಆಫ್ ದಿ ಕ್ಯಾಟಲಿಟಿಕ್ ಕನ್ವರ್ಶನ್ ಆಫ್ ಬಯೋಮಾಸ್ ಡಿರೈವಡ್ ಕಾರ್ಬೋಹೈಡ್ರೇಟ್ ಟು ವೆಲ್ಯು ಎಡೆಡ್ ಕೆಮಿಕಲ್ಸ್” ವಿಷಯದ ಮೇಲೆ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿಷಯವನ್ನು ಸಾದರಪಡಿಸಿದರು.

300x250 AD

ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ವಿದ್ಯಾ ಬಾಂದೇಕರ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಸ್ವಾತಿ ಭಟ್ ದತ್ತಿ ನಿಧಿಯ ಬಗ್ಗೆ ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಪ್ರಾಚಾರ್ಯರಾದ ಡಾ.ಎನ್.ಕೆ.ನಾಯಕರವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ಕು. ಸಂಜನಾ ನಾಯ್ಕ ವಂದಿಸಿದರು. ಕು. ಶ್ರೀನಿಧಿ ಹಾಗೂ ಕು. ರುತ್ವಿಕ ನಾಯ್ಕ ಕಾರ‍್ಯಕ್ರಮವನ್ನು ನಿರೂಪಿಸಿದರು. ಮಹಾವಿದ್ಯಾಲಯದ ಬಿ.ಎಸ್ಸಿ. ಹಾಗೂ ಎಂ.ಎಸ್ಸಿ. ವಿದ್ಯಾರ್ಥಿಗಳು ದತ್ತಿ ಉಪನ್ಯಾಸ ಕಾರ್ಯಕ್ರಮದ ಪ್ರಯೋಜನ ಪಡೆದರು. ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ 1994 ರ‍್ಯಾಂಕ್ ವಿಜೇತರು ಆದ ಚಿದಾನಂದ ಭಾಗ್ವತ, ರೂ. 1.25 ಲಕ್ಷದತ್ತಿ ನಿಧಿ ಸ್ಥಾಪಿಸಿದ್ದಾರೆ.

Share This
300x250 AD
300x250 AD
300x250 AD
Back to top