ಹೊನ್ನಾವರ : ಪಟ್ಟಣದ ಕಿಂತಾಲಕೇರಿ ಹೆಗಡೆ ಕಾಂಪ್ಲೆಕ್ಸ‌್‌ನ ಮೊದಲನೇ ಅಂತಸ್ತಿನಲ್ಲಿರುವ ಪ್ರೇಂಡ್ಸ್ ಕ್ಲಬ್ ನಲ್ಲಿ ಇಸ್ಪೀಟ್ ಅಂದರ ಬಾಹರ್ ಜುಗಾರ್ ಆಟದಲ್ಲಿ ತೊಡಗಿದ್ದಾಗ ಹೊನ್ನಾವರ ಪೊಲೀಸರು ದಾಳಿ ಮಾಡಿ ಪ್ರಕರಣ ದಾಖಲಿಸಿರುವ ಬೆಳವಣಿಗೆ ಗುರುವಾರ ರಾತ್ರಿ ನಡೆದಿದೆ.
ಪೊಲೀಸ ದಾಳಿಯ ವೇಳೆ ಇಸ್ಪೀಟ್ ಅಂದರ ಬಾಹರ್ ಜುಗಾರ್ ಆಟದಲ್ಲಿ ತೊಡಗಿದ್ದ ಒಟ್ಟು ಹದಿನೇಳು ಜನರು ಸಿಕ್ಕಿ ಬಿದ್ದಿದ್ದಾರೆ. ದಾಳಿಯವೇಳೆ 17560 ನಗದು ಇನ್ನಿತರ ಪರಿಕರ ವಶಪಡಿಸಿಕೊಂಡಿದ್ದಾರೆ.
ಎಸ್. ಪಿ. ಎಂ. ನಾರಾಯಣರವರು ಜಿಲ್ಲೆಗೆ ಬಂದ ಮೇಲೆ ಕ್ಲಬ್ ಗಳನ್ನು ಬಂದ್ ಮಾಡಿದ್ದರು. ಒಂದು ವರ್ಷದಿಂದ ಜಿಲ್ಲೆಯ ಎಲ್ಲಾ ಕ್ಲಬ್ ಗಳು ಬಂದಾಗಿವೆ. ಎಸ್. ಪಿ. ಯವರ ಖಡಕ್ ಆದೇಶವಿದ್ದರು ಇಲ್ಲಿಯ ಕ್ಲಬ್ ನಡೆಯುತ್ತಿರುವ ಮಾಹಿತಿ ತಿಳಿದ ಹೊನ್ನಾವರ ಪೊಲೀಸರು ದಾಳಿ ಮಾಡಿ ಪ್ರಕರಣ ದಾಖಲು ಮಾಡಿದ್ದಾರೆ.