ಶಿರಸಿ: ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ 2024 -25 ನೇ ಸಾಲಿನ ಇನ್ಸ್ಪೈರ್ ಅವಾರ್ಡ್ ಸ್ಕೀಮ್ ಅಡಿಯಲ್ಲಿ ಲಯನ್ಸ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಂಟನೇ ತರಗತಿಯಲ್ಲಿ ಓದುತ್ತಿರುವ ಶ್ರದ್ಧಾ ಸುನಿಲ್ ಶೆಟ್ಟಿ ಮತ್ತು ಉಜ್ವಲ್ ಉದಯ್ ಶೇಟ್ ಸೃಜನಾತ್ಮಕ ಮತ್ತು ನಾವಿನ್ಯಯುತವಾದ ಯೋಜನೆಗಳನ್ನು ಮಾಡಿ ಆನ್ಲೈನ್ನಲ್ಲಿ ನಾಮ ನಿರ್ದೇಶನ ಮಾಡಿದ್ದರು. ಈ ವಿದ್ಯಾರ್ಥಿಗಳು ಮುಂದಿನ ಹಂತಕ್ಕೆ ಆಯ್ಕೆ ಆಗಿದ್ದಾರೆ. ಇವರಿಗೆ ಶಾಲೆಯ ವಿಜ್ಞಾನ ಶಿಕ್ಷಕರಾದ ಶ್ರೀಮತಿ ಪವಿತ್ರ ನಾಯಕ್ ಮತ್ತು ಜಯಲಕ್ಷ್ಮಿ ಹರಳಾಪುರ ಮಾರ್ಗದರ್ಶನ ನೀಡಿರುತ್ತಾರೆ.ಈ ವಿದ್ಯಾರ್ಥಿಗಳ ಸಾಧನೆಗೆ ಹಾಗು ಸಹಕರಿಸಿದ ಪಾಲಕರಿಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ ವೃಂದ ಅಭಿನಂದಿಸಿ ಮುಂದಿನ ಹಂತಕ್ಕೆ ಶುಭ ಹಾರೈಸಿದೆ.
ಇನ್ಸ್ಪೈರ್ ಅವಾರ್ಡ್: ಲಯನ್ಸ್ ವಿದ್ಯಾರ್ಥಿಗಳು ಆಯ್ಕೆ
