Slide
Slide
Slide
previous arrow
next arrow

ಗ್ರಾಮೀಣ ರಂಗಭೂಮಿಗೆ ಹೊಸ ಕಾಯಕಲ್ಪ ಬೇಕು: ರಾಮಕೃಷ್ಣ ದುಂಡಿ

300x250 AD

ಶಿರಸಿ: ರಂಗಭೂಮಿ ಎಂದರೆ ತಾತ್ವಿಕವಾಗಿ, ನ್ಯಾಯನಿಷ್ಠುರವಾಗಿ ನೈತಿಕ ಧೈರ್ಯದಲ್ಲಿ ಕಟುಸತ್ಯವನ್ನು ಹೇಳುವ ಜೀವಂತ ಮಾಧ್ಯಮ ಎಂದು ರಂಗಕರ್ಮಿ ಮತ್ತು ರಂಗಧರ್ಮಿ ರಾಮಕೃಷ್ಣ ಭಟ್ ದುಂಡಿ, ಮಂಚೀಕೇರಿ ಹೇಳಿದರು.

ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ಒಡ್ಡೋಲಗ ಸಿದ್ದಾಪುರ, ಮತ್ತು ನಯನಾ ಫೌಂಡೇಶನ್ ಶಿರಸಿ, ಇವರ ಸಂಯುಕ್ತ ಆಶ್ರಯದಲ್ಲಿ ಶಿರಸಿಯ ನಯನಾ ಸಭಾಂಗಣದಲ್ಲಿ ಏರ್ಪಡಿಸಿದ, ವಿಶ್ವರಂಗಭೂಮಿ ದಿನಾಚರಣೆಯ ಪ್ರಯುಕ್ತ ಏರ್ಪಡಿಸಿದ “ರಂಗಾವಧಾನ” ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಮತ್ತು ” ಜನಶತ್ರು” ನಾಟಕಪ್ರಯೋಗ ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಕ್ರೂರ ವರ್ತಮಾನದಲ್ಲಿ ಸತ್ಯವನ್ನು ಎದುರಿಸುವ, ಜೀರ್ಣಿಸಿಕೊಳ್ಳುವ ಮನೋಭಾವವೇ ಸಮುದಾಯದಲ್ಲಿ ನಾಶವಾಗುತ್ತಿದೆ. ಸತ್ಯವನ್ನು ಪ್ರತಿಪಾದಿಸುವ ಕಲಾವಿದ ಹತ್ತು ಹಲವು ಸಿದ್ಧಾಂತಗಳ ಆಕ್ರಮಣದ ಭಯದಲ್ಲಿ ತತ್ತರಿಸುತ್ತಿದ್ದಾನೆ. ರಂಗಭೂಮಿ ಎಂಬುದು, ನಿಜವಾದ ಕಲಾವಿದನಿಗೆ, ಸತ್ಯವನ್ನು ಅಭಿವ್ಯಕ್ತಿಸುವ ಸಮರ್ಥ ಮಾಧ್ಯಮವಾಗುವ ಬದಲು ಅಡಗಿಕೊಳ್ಳುವ ತಾಣವಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸಾಮಾಜಿಕ ಕಾರ್ಯಕರ್ತ ಎಸ್. ಕೆ. ಭಾಗವತ್‌ ಮಾತನಾಡಿ, ಗ್ರಾಮೀಣ ರಂಗಭೂಮಿ ಸೊರಗುತ್ತಿದೆ. ಮೊದಲಿನ ಚಟುವಟಿಕೆ ಕಳೆಗುಂದಿದೆ. ರಂಗ ತಜ್ಞರು, ಉತ್ಸಾಹಿಗಳು ಮತ್ತೆ ಗ್ರಾಮ ರಂಗಭೂಮಿಗೆ ಹೊಸ ಚೈತನ್ಯ ನೀಡಬೇಕಿದೆ ಎಂದರು.
ಅತಿಥಿ ಪತ್ರಕರ್ತ ಅಶೋಕ ಹಾಸ್ಯಗಾರ್, ಗ್ರಾಮೀಣ ರಂಗಭೂಮಿಗೆ ಸಾವಿರಾರು ವರ್ಷದ ಇತಿಹಾಸವಿದೆ, ಭಕ್ತಿ ಮತ್ತು ತಾತ್ವಿಕತೆ ಅದರ ಹಿನ್ನೆಲೆಯಲ್ಲಿತ್ತು. ಆಧುನಿಕತೆ, ಮತ್ತು ನಗರ ವಲಸೆ, ಗ್ರಾಮಗಳ ರಂಗಚಟುವಟಿಕೆಗೆ ತಡೆ ನೀಡಿದೆ ಎಂದರು.
ವಿಚಾರ ಸಂಕಿರಣದ ಪ್ರಾರಂಭದ ಮಾತುಗಳಲ್ಲಿ ಲೇಖಕ ಸುಬ್ರಾಯ ಮತ್ತೀಹಳ್ಳಿ, ರಂಗ ಚಟುವಟಿಕೆಗಳು, ಭಕ್ತಿ ರಂಜನೆ ಮತ್ತು ಚಿಂತನೆ ಎಂಬ ಮೂರು ವಸ್ತುಗಳಲ್ಲಿ ವಿಭಾಗ ಗೊಂಡಿದೆ. ಅವುಗಳಲ್ಲಿ ಕೇವಲ ರಂಜನಾತ್ಮಕ ಪ್ರಯೋಗಗಳು ಮಾತ್ರ ತನ್ನ ಅದ್ದೂರಿ ರಂಗಸಜ್ಜಿಕೆ, ಎಳಸಾದ ಸಂಭಾಷಣೆ, ಸಿನಿಮೀಯತೆ, ಗಳಿಂದ ಹಳ್ಳಿಗಳಲ್ಲಿ ಜಾತ್ರೆಗಳಲ್ಲಿ ವಿಜೃಂಭಿಸುತ್ತಿವೆ. ಭಕ್ತಿ ಮತ್ತು ಚಿಂತನಾ ಪ್ರಧಾನ ಪ್ರಯೋಗಗಳು, ಇನ್ನಿಲ್ಲದಂತಾಗಿವೆ. ಸರಕಾರ ಮೊದಲಿನಂತೇ ರಂಗ ಚಟುವಟಿಕೆಗಳಿಗೆ ಇನ್ನಷ್ಟು ಪ್ರೋತ್ಸಾಹ ನೀಡಬೇಕಿದೆ ಎಂದರು.

300x250 AD

ವಾಸುಕಿ ಹೆಗಡೆ, ಮಳಗಿಮನೆ, ಚಂದ್ರು ಉಡುಪಿ, ನಿರ್ಮಲಾ ಗೋಳಿಕೊಪ್ಪ, ಸಿಂಧುಚಂದ್ರ ಹೆಗಡೆ, ಕಿರಣ ಭಟ್ ಬೈರುಂಭೆ, ಮತ್ತು ವಾಸುದೇವ ಶಾನಭಾಗ ಶಿರಸಿ, ಮುಂತಾದ ರಂಗ ಕರ್ಮಿಗಳು, ಗ್ರಾಮೀಣ ರಂಗಭೂಮಿ ಎದುರಿಸುತ್ತಿರುವ ಸವಾಲು ಮತ್ತು ಸಂಕಷ್ಟಗಳ ತಲಸ್ಪರ್ಶೀ ವಿವರಗಳನ್ನು ನೀಡುತ್ತ ಈಗಲಾದರೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಗ್ರಾಮಗಳು ತಾತ್ವಿಕ ಶೂನ್ಯವಾಗುವ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು.

ನಂತರದಲ್ಲಿ, ನಿರ್ದೇಶಕ್ ಎಸ್. ಸುರೇಂದ್ರನಾಥ್ ರ ಸಮರ್ಥ ನಿರ್ದೇಶನದಲ್ಲಿ, ನಮ್ಮ ಗ್ರಾಮಗಳು, ಅತೀ ನಾಗರೀಕತೆ, ವ್ಯಾಪಾರೀಕರಣ, ಹಣದಾಹ, ಮತ್ತು ರಾಜಕೀಯ ಭ್ರಷ್ಣತೆಗಳ ಕಪಿಮುಷ್ಟಿಗೆ, ನಮ್ಮ ಗ್ರಾಮಗಳು ಸಿಲುಕಿ ನಿರ್ನಾಮವಾಗುವ ವಿವಿಧ ಹಂತಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತ ಮನುಷ್ಯ ಸಂಬಂಧಗಳ ನಡುವೆ, ಬಿರುಕು ಮೂಡುತ್ತಿರುವ ದುರಂತವನ್ನು ಪರಿಣಾಮಕಾರಿಯಾಗಿ ಬಿಂಬಿಸುವ “ಜನಶತ್ರು” ನಾಟಕ ಯಶಸ್ವೀಯಾಗಿ ಪ್ರಯೋಗಗೊಂಡಿತು.

ಸಹನಿರ್ದೇಶನ ಸೌಮ್ಯಾ ಭಾಗವತ್, ರಂಗ ನಿರ್ವಹಣೆ ಸಂಧ್ಯಾ ಶಾಸ್ತ್ರಿಯವರದ್ದಾದರೆ, ರಂಗದ ಮೇಲೆ ಗಣಪತಿ ಹಿತ್ಲಕೈ, ನಾಗರಾಜ ಶಿರಸಿ, ಪ್ರಜ್ಞಾ ಹೆಗಡೆ, ನವೀನ ಕುಣಜಿ, ಗಣೇಶ ಹೆಬ್ಬನಕೇರಿ, ಪಾತ್ರ ನಿರ್ವಹಿಸಿದರು. ಬೆಳಕು, ಶ್ರೀಧರ ಭಾಗ್ವತ್ ಹೆಗ್ಗೋಡು, ತಾಂತ್ರಿಕ ನೆರವು, ಮುರುಗೇಶ್, ಮತ್ತು ಧ್ವನಿ ಪಿ.ಪಿ. ಹೆಗಡೆಯವರದ್ದಾಗಿತ್ತು.
ಪ್ರಾರಂಭದಲ್ಲಿ ನಿರ್ದೇಶಕ ಗಣಪತಿ ಹಿತ್ತಕ್ಕೆ ವಿಶ್ವ ರಂಗ ಸಂದೇಶವನ್ನು ವಾಚಿಸಿ, ಸ್ವಾಗತಿಸಿದರು. ನಾಟಕ ಅಕಾಡಮಿ ಜಿಲ್ಲಾಪ್ರತಿನಿಧಿ, ಗೀತಾ ಸಿದ್ದಿ ಯವರು ಪ್ರಸ್ಥಾವನೆ ಸಲ್ಲಿಸಿದರು. ಎಂ. ಎಚ್.ಗಣೇಶ ಹೊನ್ನಾವರ, ರಂಗ ಗೀತೆಯ ಮೂಲಕ ರಂಜಿಸಿದರು.

Share This
300x250 AD
300x250 AD
300x250 AD
Back to top