Slide
Slide
Slide
previous arrow
next arrow

ಮನಸೂರೆಗೊಂಡ ಚಿಣ್ಣರ ಕಲರವ

300x250 AD

ಹೊನ್ನಾವರ: ಪಟ್ಟನದ ಮಲ್ನಾಡ್ ಪ್ರೋಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಸೆಂಟ್ರಲ್ ಸ್ಕೂಲ್‌ನಲ್ಲಿ 5ನೇ ವರ್ಷದ ಚಿಣ್ಣರ ಕಲರವ ಕಾರ್ಯಕ್ರಮ ಜರುಗಿತು. ಶಾಲೆಯು ತಾಲೂಕಿನ ಅಂಗನವಾಡಿ ಮಕ್ಕಳಿಗೆ ಒಂದು ವಿಶೇಷ ವೇದಿಕೆಯನ್ನು ನೀಡುವ ಕಾರ್ಯಕ್ರಮ ಇದಾಗಿದ್ದು, ತಾಲೂಕಿನ ಅಂಗನವಾಡಿಗಳಿಮದ ವಿದ್ಯಾರ್ಥಿಗಳು ತಮ್ಮ ಪಾಲಕರು, ಶಿಕ್ಷಕರ ಜೊತೆಯಲ್ಲಿ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಕಾರ್ಯಕ್ರಮದ ಉದ್ಘಾಟಕರಾಗಿ ಎಸ್.ಡಿ.ಎಂ. ಕಾಲೇಜಿನ ಪೂರ್ವ ವಿದ್ಯಾರ್ಥಿ ಡಾ. ವೈಶಾಲಿ ನಾಯ್ಕ ಆಗಮಿಸಿದ್ದರು. ದೀಪ ಬೆಳಗಿಸಿ ಮಾತನಾಡಿದ ಡಾ.ವೈಶಾಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಜೀವನದಲ್ಲಿ ಎದೆಗುಂದದೆ ಇರುವ ಸ್ವಭಾವವನ್ನು ಬೆಳೆಸಬೇಕು. ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವ ಜನಸಾಮಾನ್ಯರಿಗೆ ಸಹಾಯವನ್ನು ಮಾಡುವ ಗುಣವನ್ನು ಸಹ ಪಾಲಕರು ಬೆಳೆಸಬೇಕು. ಬಹುಮುಖ್ಯವಾಗಿ ವಿದ್ಯಾರ್ಥಿಗಳಿಗೆ ತಾಳ್ಮೆಯನ್ನು ಬೆಳೆಸಬೇಕು ಅಲ್ಲದೆ ಮಕ್ಕಳಲ್ಲಿ ಇರುವ ಸಹಜ ಕುತೂಹಲ ಮತ್ತು ಆಸಕ್ತಿಗೆ ಪೂರಕವಾಗಿ ಅದಕ್ಕೆ ನೀರೆರೆಯುವ ಕೆಲಸವನ್ನು ಮಾಡಿ. ಒಳ್ಳೆಯ ಹವ್ಯಾಸವನ್ನು ರೂಡಿಸಿಕೊಳ್ಳಲು ಪ್ರೇರೆಪಿಸಿ ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಂ.ಪಿ.ಇ.ಸೊಸೈಟಿ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಶಿವಾನಿ ಮಾತನಾಡಿ ಅಂಗನವಾಡಿ ಮಕ್ಕಳಿಗೆ ಒಂದು ವೇದಿಕೆ ಸಿಗಬೇಕು ಅನ್ನುವ ಕಾರಣಕ್ಕೆ ಚಿಣ್ಣರ ಕಲರವ ಎಂಬ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದ್ದೇವೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹೆಮ್ಮೆ ಮಕ್ಕಳಿಗೆ ಇದೆ. ವಿದ್ಯಾರ್ಥಿಗಳು ಕೇವಲ ಅಂಕಗಳಿಗೆ ಸೀಮಿತವಾಗದೆ ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು. ಅಲ್ಲದೆ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡುತ್ತಾ ಬಂದಿರುವ ಹೆಮ್ಮೆ ಎಂ.ಪಿ.ಇ.ಸೊಸೈಟಿಯ ಸಮೂಹ ಸಂಸ್ಥೆಗಳಿಗೆ ಇದೆ. ಪಾಲಕರು ವಿದ್ಯಾರ್ಥಿಗಳ ಮೇಲೆ ಒತ್ತಡವನ್ನು ಹೇರಬೇಡಿ. ಒಳ್ಳೆಯ ನಾಗರಿಕರನ್ನಾಗಿ ಬೆಳೆಸಿ ಎಂದು ಕರೆನೀಡಿದರು.
ಈ ಬಾರಿಯ ಚಿಣ್ಣರ ಕಲರವದಲ್ಲಿ ತಾಲೂಕಿನ ಬುದ್ದಿಮಾಂದ್ಯ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಚಿಣ್ಣರ ಕಲರವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷ ಗಮನವನ್ನು ಸೆಳೆಯಿತು. ಎಂ.ಪಿ.ಇಸೊಸೈಟಿ ಕಾರ್ಯದರ್ಶಿ ಎಸ್.ಎಂ.ಭಟ್ ವೇದಿಕೆ ಮೇಲೆ ಉಪಸ್ಥಿತರಿದ್ದರು. ಶಾಲೆಯ ಮುಖ್ಯೋಪಾಧ್ಯಾಯೆ ಡಾ. ವಿಜಯಲಕ್ಷ್ಮಿ ನಾಯ್ಕ ಸ್ವಾಗತಿಸಿದರು. ಕು.ಶಾಂಭವಿ ಹೆಗಡೆ ಸಂಗಡಿಗರು ಪ್ರಾರ್ಥಿಸಿದರು. ಮಾರುತಿ ನಾಯ್ಕ ವಂದಿಸಿದರು. ವಿದ್ಯಾರ್ಥಿಗಳಾದ ಕು. ಅಥರ್ವ ಚೋರೆ ಹಾಗೂ ಕು. ಶ್ರಾವ್ಯಾ ಹೆಗಡೆ ನಿರೂಪಿಸಿದರು. ನಂತರದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಸ್ಫರ್ಧೆಗಳು , ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

300x250 AD
Share This
300x250 AD
300x250 AD
300x250 AD
Back to top