ಶಿರಸಿ: ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ (ದೌರ್ಜನ್ಯ ಪ್ರತಿಬಂದ) (ತಿದ್ದುಪಡಿ) ನಿಯಮಗಳು ದೌರ್ಜನ್ಯ ನಿಯಂತ್ರಣ ಕಾಯ್ದೆ 2016 ರ ನಿಯಮ 17 ರಡಿ ಉತ್ತರ ಕನ್ನಡ ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿಗೆ ಸರ್ಕಾರೇತರ ಸಂಸ್ಥೆಗಳ ವರ್ಗದಡಿ 3 ಜನ ಸದಸ್ಯರಲ್ಲಿ ಇಲ್ಲಿನ ಅಸ್ಮಿತೆ ಫೌಂಡೇಶನ್ ಕಾರ್ಯನಿರ್ವಾಹಕ ನಿರ್ದೇಶಕ ಡಾ. ರಿಯಾಜ್ ಸಾಗರ್ ಅವರು ಆಯ್ಕೆ ಆಗಿದ್ದು ಈ ಕುರಿತು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಡಾ. ರಿಯಾಜ್ ಸಾಗರ್ ಅವರು ಕಳೆದ ಒಂದೂವರೆ ದಶಕದಿಂದ ವೃತ್ತಿಪರ ಸಮಾಜಕಾರ್ಯ, ಸಮುದಾಯ ಅಭಿವೃದ್ಧಿ ಹಾಗೂ ಸರ್ಕಾರೇತರ ಸಂಸ್ಥೆ ಕ್ಷೇತ್ರದಲ್ಲಿ ಸೇವೆಸಲ್ಲಿಸುತ್ತಿದ್ದು ಜಿಲ್ಲೆಯ ಸಿದ್ದಿ ಬುಡಕಟ್ಟು ಸಮುದಾಯ ಕುರಿತು ಸಂಶೋಧನ ಪ್ರಬಂಧ ಮಂಡಿಸಿ ಪಿಎಚ್. ಡಿ ಪದವಿ ಪಡೆದಿರುವುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.
ಜಿಲ್ಲಾ ಉಸ್ತುವಾರಿ ಸಮಿತಿಗೆ ಡಾ.ರಿಯಾಜ್ ಸಾಗರ್ ಆಯ್ಕೆ
