ಶಿರಸಿ: ಅಮೇರಿಕಾದ ಬಾಸ್ಟನ್ನ ಪ್ರತಿಷ್ಠಿತ ಎಮ್.ಐ.ಟಿ.(ಮೆಸಾಚ್ಯುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲೊಜಿ)ಯ ಪದವೀಧರರು ಜ.24ರಂದು ತಾಲೂಕಿನ ಇಸಳೂರಿನ ಶ್ರೀನಿಕೇತನ ಸಿ.ಬಿ.ಎಸ್.ಇ. ಶಾಲೆಗೆ ಭೇಟಿ ನೀಡಿದ್ದರು. ಸ್ಟೆಮ್ (ಸೈನ್ಸ್, ಟೆಕ್ನೋಲೊಜಿ, ಎಂಜಿನಿಯರಿಂಗ್, ಮೆಥಮೆಟಿಕ್ಸ್) ಆಧಾರಿತ ಸ್ಟೂಡೆಂಟ್ ಕಿಟ್ಗಳ ಕುರಿತು ಶಾಲೆಯ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ಹಾಗೂ ಅವುಗಳ ತಯಾರಿಕೆ ಮತ್ತು ಕಾರ್ಯವೈಖರಿಯ ಬಗ್ಗೆ ತರಬೇತಿಯನ್ನು ನೀಡಲಾಯಿತು. ಸೋಲಾರ್ ಶಕ್ತಿಯಿಂದ ಓಡುವ ಫ್ಯಾನ್, ರೀಮೋಟ್ ಕಂಟ್ರೋಲ್ನಿಂದ ಚಲಿಸುವ ಪುಟ್ಟ ರೋಬೋಟಿಕ್ ಕಾರ್ನಂತಹ ಆಧುನಿಕ ಉಪಕರಣಗಳನ್ನು ಚಲಾಯಿಸಿ ಮಕ್ಕಳು ಸಂತಸಪಟ್ಟರು. ಮಧ್ಯಪ್ರದೇಶ ಮತ್ತು ಕರ್ನಾಟಕ ರಾಜ್ಯಗಳ ಅನೇಕ ಶಾಲೆಗಳಿಗೆ ಇವರು ಈಗಾಗಲೇ ಭೇಟಿ ನೀಡಿದ್ದು ಶ್ರೀನಿಕೇತನ ಶಾಲೆಗೆ ಆಗಮಿಸಿದ್ದು ವಿಶೇಷವಾಗಿತ್ತು.