Slide
Slide
Slide
previous arrow
next arrow

ಮಿರ್ಜಾನಿನ ಬಿಜಿಎಸ್ ಸೆಂಟ್ರಲ್ ಸ್ಕೂಲಿನಲ್ಲಿ 76ನೇ ಗಣರಾಜ್ಯೋತ್ಸವ ಆಚರಣೆ

300x250 AD

ಕುಮಟಾ: ತಾಲೂಕಿನ ಮಿರ್ಜಾನ್ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಬಿಜಿಎಸ್ ಸೆಂಟ್ರಲ್ ಸ್ಕೂಲ್ ಮತ್ತು ಆದಿಚುಂಚನಗಿರಿ ಇಂಡಿಪೆಂಡೆಂಟ್ ಪಿಯು ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಜ. 26ರಂದು 76ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು.

 ಮುಖ್ಯ  ಅತಿಥಿಗಳಾಗಿ ಆಗಮಿಸಿದ ಭಾರತದ ಸೇನೆಯ ಮಾಜಿ ಯೋಧರಾದ ನಾರಾಯಣ ಪಟಗಾರ ಮತ್ತು ವನವಾಸಿ ಕಲ್ಯಾಣ ಜಿಲ್ಲಾ ಮೇಲ್ವಿಚಾರಕರಾಗಿರುವ ಶ್ರೀನಿವಾಸರವರು ಜಂಟಿಯಾಗಿ ಧ್ವಜಾರೋಹಣ ನಡೆಸಿದರು. ಸರ್ವರೂ ಧ್ವಜವಂದನೆ ಸಲ್ಲಿಸಿ ರಾಷ್ಟ್ರಗೀತೆ ಹಾಡಿದರು. ಅಲ್ಲದೇ ವಂದೇ ಮಾತರಂ, ಝಂಡಾ ಊಂಛಾ ರಹೇ ಹಮಾರಾ ಎಂಬ ದೇಶಭಕ್ತಿ ಗೀತೆಯನ್ನು ಹಾಡಲಾಯಿತು. ಭಾರತದ ಸೇನೆಯ ಮಾಜಿ ಯೋಧರಾದ ನಾರಾಯಣ ಪಟಗಾರ ದೇಶಾಭಿಮಾನದ ಮಾತನಾಡಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ವನವಾಸಿ ಕಲ್ಯಾಣ ಜಿಲ್ಲಾ ಮೇಲ್ವಿಚಾರಕರಾಗಿರುವ ಶ್ರೀನಿವಾಸ್, ಭಾರತದ ಸಂಸ್ಕೃತಿ, ಹಿರಿಮೆ ಗರಿಮೆಯ ಬಗ್ಗೆ ಮಾರ್ಮಿಕವಾಗಿ ಮಾತನಾಡಿದರು. ನಿವೃತ್ತ ಮುಖ್ಯೋಪಾಧ್ಯಾಯರು ಮತ್ತು ಬಿಜಿಎಸ್  ಶಾಲೆಯ ಶೈಕ್ಷಣಿಕ ನಿರ್ದೇಶಕರಾಗಿರುವ ಎಂ.ಟಿ. ಗೌಡ ಮಾತನಾಡಿ ನಮ್ಮ ದೇಶದ ಸಂವಿಧಾನದ ರಚನೆ, ಅದರ ಮಹತ್ವ, ಭಾರತದ ಪ್ರಜೆಗಳ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ವಿವರಿಸಿದರು.  ವನವಾಸಿ ಕಲ್ಯಾಣ ಜಿಲ್ಲಾ ಕಾರ್ಯದರ್ಶಿ ಶ್ರೀಧರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಬಿಜಿಎಸ್ ಸೆಂಟ್ರಲ್ ಸ್ಕೂಲಿನ ಪ್ರಾಂಶುಪಾಲೆ ಶ್ರೀಮತಿ ಅರ್ಚನಾ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು.   ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನ, ಎರೋಬಿಕ್ಸ್ ಮತ್ತು ಡಂಬಲ್ಸ್, ಲೆಝಿಮ್ ಕವಾಯತುಗಳು, ಭಾರತೀಯರ ನರ ನಾಡಿಯಲ್ಲಿ ದೇಶಪೇಮ ಉಕ್ಕಿಸುವ ದೇಶಭಕ್ತಿಗೀತೆಗಳು  ಜನಮನಸೂರೆಗೊಂಡವು.   ಗಣರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಪಥಸಂಚಲನ ಸ್ಪರ್ಧೆಯಲ್ಲಿ ಯುನಿಟಿ ಮತ್ತು ಪೀಸ್  ತಂಡಗಳು ಪ್ರಥಮ ಸ್ಥಾನ, ಕರೇಜ್ ತಂಡ ದ್ವಿತೀಯ ಸ್ಥಾನ ಮತ್ತು ಸ್ರೆಂಥ್ ತಂಡ ತೃತೀಯ ಸ್ಥಾನ ಪಡೆದುಕೊಂಡವು.

300x250 AD

ಆದಿಚುಂಚನಗಿರಿ ಇಂಡಿಪೆಂಡೆಂಟ್ ಪಿಯು ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ರೇಷ್ಮಾ ಬಾಡ್ಕರ್, ಹಿರಿಯ ಶಿಕ್ಷಕರಾದ ಎಂ. ಜಿ. ಹಿರೇಕುಡಿ , ಲೀನಾ ಗೊನೇಹಳ್ಳಿ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  ಆಲ್ಫಿಯಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪೃಥ್ವಿ  ಮತ್ತು ಕಬೀರ್ ಕಾರ್ಯಕ್ರಮ ನಿರೂಪಿಸಿದರು. ರಕ್ಷಾ ವಂದಿಸಿದಳು.

Share This
300x250 AD
300x250 AD
300x250 AD
Back to top