ಸಿದ್ದಾಪುರ: ಪಟ್ಟಣದ ಬಾಲಿಕೊಪ್ಪದ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಜಾತ್ರಾ ಮಹೋತ್ಸವ ಜರುಗುತ್ತಿದ್ದು ಮಕರ ಸಂಕ್ರಾಂತಿ ದಿನವಾದ ಮಂಗಳವಾರ ಓರ್ವ ಕಾರು ಚಾಲಕ ಅತಿವೇಗ ಮತ್ತು ನಿಷ್ಕಾಳಜಿಯಿಂದ ಜನರ ಮೇಲೆ ಕಾರು ಹಾಯಿಸಿದ ಪರಿಣಾಮ ಓರ್ವ ಯುವತಿ ಮೃತಪಟ್ಟಿದ್ದು ಎಂಟು ಮಂದಿಗೆ ತೀವ್ರ ಗಾಯಗಳಾದ ದುರ್ಘಟನೆ ಜರುಗಿದೆ.
ತಾಲೂಕಿನ ಕಸ್ತೂರು ಕಲಕೊಪ್ಪದ ದೀಪಾ ರಾಮಾ ಗೊಂಡ(21) ಎನ್ನುವವಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದೊಯ್ಯುತ್ತಿದ್ದಾಗ ಮೃತಪಟ್ಟಿದ್ದಾಗಿ ತಿಳಿದುಬಂದಿದೆ. ಗಜಾನನ ಹೆಗಡೆ ಮದ್ದಿನಕೇರಿ(69), ಕಲ್ಪಿತಾ ರಘುಪತಿ ನಾಯ್ಕ(5 ವರ್ಷ 6 ತಿಂಗಳು) ಕಳೂರು, ಚೈತ್ರ ರಘುಪತಿ ನಾಯ್ಕ ಕಳೂರು(37), ಜಾನಕಿ ಗೋವಿಂದ ನಾಯ್ಕ ಅವರಗುಪ್ಪ(24) ಜ್ಯೋತಿ ಮಂಜುನಾಥ ನಾಯ್ಕ ಕಲಕೊಪ್ಪ(24), ಮಾದೇವಿ ಹುಚ್ಚ ನಾಯ್ಕ ಹೊಸೂರು(69), ರಾಮಪ್ಪ ನಾಯ್ಕ ಬೆನ್ನೂರು(40), ಗೌರಿ ಉದಯ ಮಡಿವಾಳ ಜಾತಿಕಟ್ಟಾ(36) ಎನ್ನುವವರು ತೀವ್ರವಾಗಿ ಗಾಯಗೊಂಡಿದ್ದು ಗಾಯಾಳುಗಳಿಗೆ ತಾಲೂಕು ಆಸ್ಪತ್ರೆಯಲ್ಲಿ ತಕ್ಷಣದ ಚಿಕಿತ್ಸೆ ನೀಡಲಾಗಿದೆ.ಇವರಲ್ಲಿ ಕೆಲವರನ್ನು ಹೆಚ್ಚಿನ ಚಿಕಿತ್ಸೆಗೆ ಬೇರೆಡೆ ಕಳುಹಿಸಿಕೊಡಲಾಗಿದೆ. ಕಾರು ಚಾಲಕ ರೋಶನ್ ಫರ್ನಾಂಡಿಸ್ ಎನ್ನುವದಾಗಿ ತಿಳಿದುಬಂದಿದ್ದು ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.